ETV Bharat / state

ಭಾರತೀಯ ಅಂಚೆ ಇಲಾಖೆಗೆ ಆಧುನಿಕ‌ ಟಚ್: ಪೋಸ್ಟಲ್​ ಸರ್ವಿಸ್​ ಜೊತೆ ಬ್ಯಾಂಕಿಂಗ್ ಸೇವೆಯೂ ಲಭ್ಯ..! - Postal Department which started IPPB Bank Service

ಅಂಚೆ ಇಲಾಖೆ ತನ್ನ ಎಲ್ಲ ಹಳೆಯ ಸೇವೆಯ ಜೊತೆ ಈಗ ಡಿಜಿಟಲ್ ಸೇವೆ ನೀಡಲು ಪ್ರಾರಂಭಿಸಿದೆ. ಮನಿ ಆರ್ಡರ್​​​ನಂತಯೇ ಭಾರತೀಯ ಗ್ರಾಮೀಣ ಭಾಗದ ಜನತೆಗೆ, ಬ್ಯಾಂಕಿಂಗ್ ಸೇವೆ ಒದಗಿಸಲು ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ಎಂಬ ಸೇವೆಯನ್ನು ಪ್ರಾರಂಭಿಸಿದೆ.

Postal Department which started IPPB Bank Service
ಭಾರತೀಯ ಅಂಚೆ ಇಲಾಖೆಗೆ ಆಧುನಿಕ‌ ಟಚ್
author img

By

Published : Nov 24, 2020, 4:52 PM IST

ಶಿವಮೊಗ್ಗ: ಭಾರತೀಯ ಅಂಚೆ ಇಲಾಖೆಗೆ ಶತಮಾನಗಳ‌ ಇತಿಹಾಸವಿದ್ದು, ಇದು ಜನರ ಭಾವದೊಂದಿಗೆ ಬೆರೆತುಕೊಂಡಿದೆ. ಮೊದಲಿಗೆ ಕುಶಲೋಪರಿ ವಿಚಾರಿಸಲು, ತುರ್ತು ಸಂದೇಶ ರವಾನಿಸಲು ಅಂಚೆ ಬಳಸಲಾಗುತ್ತಿತ್ತು. ಬಳಿಕ ಮನೆ ಬಾಗಿಲಿಗೆ ಹಣ ತಲುಪಿಸುವ ಮನಿ ಆರ್ಡರ್ ಸೇವೆ ಪ್ರಾರಂಭಿಸಿ,‌ ಜೊತೆ ಜೊತೆಗೆ ಪಾರ್ಸಲ್ ರವಾನೆ ಮಾಡಲು ಸಹ ಭಾರತೀಯ‌ ಅಂಚೆ ಕಾರ್ಯನಿರ್ವಹಿಸಿದ್ದು ಇತಿಹಾಸ.

ಭಾರತೀಯ ಅಂಚೆ ಇಲಾಖೆಯು ಆಧುನಿಕತೆಯಲ್ಲಿ ತನ್ನ ಅಸ್ಥಿತ್ವವನ್ನು‌ ಕಳೆದುಕೊಳ್ಳುತ್ತಿದ್ದು, ಆದ್ದರಿಂದ ಅಂಚೆ ಇಲಾಖೆಗೆ ಆಧುನಿಕ‌ ಟಚ್ ನೀಡಲಾಗಿದೆ. ಅಂಚೆ ಇಲಾಖೆ ತನ್ನ ಎಲ್ಲ ಹಳೆಯ ಸೇವೆ ಜತೆ ಈಗ ಡಿಜಿಟಲ್ ಸೇವೆ ನೀಡಲು ಪ್ರಾರಂಭಿಸಿದೆ. ಮನಿ ಆರ್ಡರ್​​​ನಂತೆಯೇ ಭಾರತೀಯ ಗ್ರಾಮೀಣ ಭಾಗದ ಜನತೆಗೆ, ಬ್ಯಾಂಕಿಂಗ್ ಸೇವೆ ಒದಗಿಸಲು ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ (IPPB) ಎಂಬ ಸೇವೆ ಪ್ರಾರಂಭಿಸಿದೆ.

ಈ ಸೇವೆ ಪ್ರಾರಂಭವಾಗಿ ಎರಡು ವರ್ಷಗಳಾಗಿದ್ದು, ಇದು ಅಂಚೆ ಇಲಾಖೆಯ ಮಹತ್ತರವಾದ ಯೋಜನೆಯಾಗಿದೆ. ಗ್ರಾಮೀಣ ಭಾಗದಲ್ಲಿ ಯಾರು ಬ್ಯಾಂಕ್ ಸೇವೆ ಪಡೆಯುತ್ತಿಲ್ಲವೋ, ಅವರ ಮನೆ ಬಾಗಿಲಲ್ಲಿಯೇ ಬ್ಯಾಂಕ್ ಸೇವೆ ನೀಡಲಾಗುತ್ತದೆ. ಪೋಸ್ಟ್ ಮ್ಯಾನ್​​​ಗಳು ಜನರ ಮನೆ ಬಾಗಿಲಿಗೆ ಬಂದು ಅಂಚೆ ಖಾತೆಯನ್ನು ತೆರೆದು ಕೊಡುತ್ತಾರೆ. ಇದಕ್ಕೆ ಆಧಾರ್ ನಂಬರ್ ಹಾಗೂ ಹೆಬ್ಬೆಟ್ಟು ಗುರುತು ಮಾತ್ರ ಸಾಕು. ಇದು ಆ್ಯಪ್ ಆಧಾರಿತ ಖಾತೆ ಆಗಿದ್ದು, ಇತರ ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸಬಹುದಾಗಿದೆ. ಐಪಿಪಿಬಿ ಬ್ಯಾಂಕ್ ಆ್ಯಪ್​​​ನ್ನು ಡೌನ್​​​​ಲೋಡ್ ಮಾಡಿ‌ಕೊಂಡು ವ್ಯವಹಾರ ಮಾಡಬಹುದಾಗಿದೆ.

ಭಾರತೀಯ ಅಂಚೆ ಇಲಾಖೆಗೆ ಆಧುನಿಕ‌ ಟಚ್

ಐಪಿಪಿಬಿ ಬ್ಯಾಂಕ್ ಆ್ಯಪ್​​​ ಅನ್ನು ಗೂಗಲ್ ಪೇ ರೀತಿ ಬಳಸಬಹುದಾಗಿದ್ದು, ಇದರಲ್ಲಿ ಬೇರೆಯವರಿಗೆ ಹಣ ವರ್ಗಾವಣೆ ಮಾಡಬಹುದು. ವಿದ್ಯುತ್ ಬಿಲ್, ನೀರಿನ ಬಿಲ್, ಕೇಬಲ್ ಬಿಲ್ ಸೇರಿದಂತೆ ಇತರ ಸರ್ವಿಸ್ ಬಿಲ್​​​​ಗಳನ್ನು ಸಹ ಆನ್​ಲೈನ್​​ ಮೂಲಕ ಕಟ್ಟಬಹುದಾಗಿದೆ. ಐಪಿಪಿಬಿ ಬ್ಯಾಂಕ್‌ ಖಾತೆ ತೆರೆದವರಿಗೆ ಒಂದು ಕಾರ್ಡ್ ಅನ್ನು ನೀಡಲಾಗುತ್ತದೆ.

ಇದರ ಜೊತೆಗೆ ಗೋಲ್ಡ್ ಬಾಂಡ್ ನೀಡುವ ಯೋಜನೆ ತಂದಿದ್ದು, ಬಾಂಡ್ ಪಡೆಯುವ ದಿನ ಬಂಗಾರಕ್ಕೆ ಮಾರುಕಟ್ಟೆ ದರ ಏನಿದೆ ಅದರಂತೆ ಹಣ ಕೊಟ್ಟು ಖರೀದಿ ಮಾಡಬಹುದು. ಹಾಗೂ ಇದರ ಜೊತೆಗೆ ಇನ್ಮುಂದೆ ನಿವೃತ್ತ ನೌಕರರಿಗೆ ಅಂಚೆ ಇಲಾಖೆಯ ಮೂಲಕ ಪಿಂಚಣಿ ನೀಡಲಾಗುತ್ತದೆ. ಇದಕ್ಕಾಗಿ ಪಿಂಚಣಿ ಪಡೆಯುವವರು ವರ್ಷಕ್ಕೊಮ್ಮೆ ಲೈಪ್ ಸರ್ಟಿಫಿಕೇಟ್ ಮಾಡಿಸಬೇಕು. ಇದನ್ನು ಪೋಸ್ಟ್ ಮ್ಯಾನ್​​ಗಳು ಅವರ ಮನೆಗೆ ಹೋಗಿ ಸೇವೆ ನೀಡುತ್ತಾರೆ.

ಅಂಚೆ ಇಲಾಖೆಯು ಅಂಚೆ ಸೇವೆ, ಪಾರ್ಸಲ್,‌ ಮನಿ ‌ಆರ್ಡರ್‌, ಆರ್​​​ಡಿ ಸೇರಿದಂತೆ, ಪೋಸ್ಟಲ್ ಲೈಫ್​​​ ಇನ್ಶೂರೆನ್ಸ್, ರೂರಲ್ ಪೋಸ್ಟಲ್​ ಲೈಫ್ ಇನ್ಶೂರೆನ್ಸ್ ಸೇವೆ ನೀಡುತ್ತಿದೆ. ಇದರ ಜೊತೆಗೆ ಸರ್ಕಾರದ ಕೊಡುಗೆ ಹಣ ನೇರವಾಗಿ ಖಾತೆಗೆ ಜಮೆಯಾಗುವ DBT ಸೇವೆ, ಗ್ಯಾಸ್ ಸಬ್ಸಿಡಿ, ರೈತರ ಸಹಾಯಧನ ಎಲ್ಲ ಸೇವೆಯನ್ನು ಪಡೆಯಬಹುದಾಗಿದೆ. ಉಳಿತಾಯ ಖಾತೆ, ಆರ್.ಡಿ, ತಿಂಗಳ ಸ್ಕೀಂ, ಫಿಕ್ಸಡ್ ಡೆಪಾಸಿಟ್​, ಹಿರಿಯ ನಾಗರಿಕ ಖಾತೆ, ಸುಕನ್ಯ ಸಮೃದ್ಧಿ ಯೋಜನೆ, ಕಿಸಾನ್ ಪತ್ರ ನೀಡುತ್ತಿದೆ. ಐಪಿಪಿಬಿ ಜೊತೆಗೆ ಗೋಲ್ಡ್ ಬಾಂಡ್ ನೀಡಲಾಗುತ್ತಿದೆ. ಈಗ ಡಿಜಿಟಲ್ ಸೇವೆಗೆ ಮುಂದಾಗಿದ್ದು, ಈ ರೀತಿಯಾಗಿ ಜನುಪಯೋಗಿ ಸೇವೆ ನೀಡಲು ಅಂಚೆ ಇಲಾಖೆ ಸಿದ್ಧವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.