ETV Bharat / state

ಕಬಾಬ್​ ಅಂಗಡಿ ಹಣದ ವಿಷಯಕ್ಕೆ ಜಗಳ: ಶಿವಮೊಗ್ಗದಲ್ಲಿ ಬಿತ್ತು ಹೆಣ - ಶಿವಮೊಗ್ಗದ ತುಂಗಾ ನದಿ

ಹಣದ ವಿಷಯಕ್ಕೆ ವ್ಯಕ್ತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

dasds
ಶಿವಮೊಗ್ಗದಲ್ಲಿ ಕೊಲೆ
author img

By

Published : Jun 4, 2020, 6:22 PM IST

ಶಿವಮೊಗ್ಗ: ಕಬಾಬ್​ ಅಂಗಡಿ ಇಟ್ಟು ಜೊತೆಯಾಗಿ ವ್ಯವಹಾರ ನಡೆಸುತ್ತಿದ್ದ ಇಬ್ಬರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ನಗರದ ಹೊರವಲಯದ ತುಂಗಾ ನದಿ ದಂಡೆಯ ಬಳಿ ನಡೆದಿದೆ.

ಕಬೀರ್(22) ಎಂಬಾತ ಕೊಲೆಯಾದವ. ಕಬೀರ್ ಹಾಗೂ ಆತನ ಸ್ನೇಹಿತ ಹಬೀಬುಲ್ಲಾ ಅಲಿಯಾಸ್ ಅಮ್ಮು ಸೇರಿ ಊರುಗಡೂರಿನ ಮುಖ್ಯ ರಸ್ತೆಯಲ್ಲಿ ಅನಧಿಕೃತವಾಗಿ ಕಬಾಬ್ ಅಂಗಡಿ ನಡೆಸುತ್ತಿದ್ದರು. ಈ ವೇಳೆ ವ್ಯವಹಾರದಲ್ಲಿ ಕಿರಿಕ್ ಆಗಿ ಕಬೀರ್ ಹಾಗೂ ಹಬೀಬುಲ್ಲಾ ನಡುವೆ ಗಲಾಟೆಯಾಗಿತ್ತು. ಇದರಿಂದ ತನ್ನ ಹಣ ನೀಡು ಎಂದು ಕಬೀರ್ ಹಬೀಬುಲ್ಲಾನ ಬಳಿ ಕೇಳಿದಾಗ ಹಣ ಕೊಡಲು ಸತಾಯಿಸಿದ್ದಾನೆ. ಇದರಿಂದ ಕಬೀರ್-ಹಬೀಬುಲ್ಲಾ ನಡುವೆ ಗಲಾಟೆ ನಡೆದು ಕಬೀರ್ ಹಾಗೂ ಸ್ನೇಹಿತರಾದ ಶಹಬಾಜ್, ಸುಹೇಲ್, ಅಸೀಫ್ ಖಾನ್, ಅತಾವುಲ್ಲಾರ ವಿರುದ್ಧ ಕೇಸು ದಾಖಲಾಗಿತ್ತು. ನಾಲ್ಕು ತಿಂಗಳು ಜೈಲು ವಾಸ ಅನುಭವಿಸಿ ನಂತರ ಬಿಡುಗಡೆಯಾಗಿದ್ದರು.

ಮತ್ತೆ ನಿನ್ನೆ ರಾತ್ರಿ ಹಬೀಬುಲ್ಲಾ ಕಬೀರ್​ನನ್ನು ಮದರಿಪಾಳ್ಯದ ಬಳಿಯ ತುಂಗಾ ನದಿ ದಂಡೆ ಬಳಿ ಕರೆದೊಯ್ದು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಕುರಿತು ಕೊಲೆಯಾದ ಕಬೀರ್ ತಾಯಿ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.