ETV Bharat / state

ಆಗಲೇ ಸಮಸ್ಯೆ ಪರಿಹರಿಸಿದ್ದರೆ ಕಾಂಗ್ರೆಸ್​​ ನಾಯಕರಿಗೆ ಇಂದು ಈ ಸ್ಥಿತಿ ಬರುತ್ತಿರಲಿಲ್ಲ: ಬಿ ವೈ ರಾಘವೇಂದ್ರ

ಕಾಂಗ್ರೆಸ್​ ಪಕ್ಷ ಅಧಿಕಾರದಲ್ಲಿದ್ದಾಗ ಶರಾವತಿ ಸಂತ್ರಸ್ತರ ಸಮಸ್ಯೆ ಬಗೆಹರಿಸಿದ್ದರೆ ಇಂದು ಸಂತ್ರಸ್ತರ ಹೆಸರಿನ ಹಣೆಪಟ್ಟಿ ಕಟ್ಟಿಕೊಂಡು ಪಾದಯಾತ್ರೆ ನಡೆಸುವ ಅಶ್ಯಕತೆ ಬರುತ್ತಿರಲಿಲ್ಲ ಎಂದು ಸಂಸದ ಬಿ ವೈ ರಾಘವೇಂದ್ರ ಕಿಡಿಕಾರಿದ್ದಾರೆ.

author img

By

Published : Nov 30, 2022, 4:35 PM IST

kn_smg_
ಬಿ.ವೈ ರಾಘವೇಂದ್ರ

ಶಿವಮೊಗ್ಗ: ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಶರಾವತಿ ಸಂತ್ರಸ್ತರಿಗೆ ನ್ಯಾಯ ಒದಗಿಸದೆ, ಈಗ ಮೊಸಳೆ ಕಣ್ಣೀರು ಹಾಕುತ್ತ ಪಾದಯಾತ್ರೆ ನಡೆಸಿದ್ದಾರೆ ಎಂದು ಸಂಸದ ಬಿ ವೈ ರಾಘವೇಂದ್ರ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಶರಾವತಿ ಪುನರ್ವಸತಿ ಪ್ರಕ್ರಿಯೆ‌ 1958-1968ರ ಸಂದರ್ಭದಲ್ಲಿ ನಡೆಯುತ್ತದೆ. ಸುಮಾರು 27 ಸರ್ಕಾರಿ ಆದೇಶಗಳು ಬಿಡುಗಡೆಯಾಗುತ್ತವೆ. ಆದರೆ ಪುನರ್ವಸತಿಗೆ ಸಂಬಂಧಪಟ್ಟ ಭೂಮಿ ಬಿಡುಗಡೆಯಾಗಿ 64 ವರ್ಷ ಆದ್ರೂ ಸಮಸ್ಯೆಯನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಕಾಂಗ್ರೆಸ್​​ ಯಾಕೆ ಮಾಡಲಿಲ್ಲ.

ಸ್ವಾತಂತ್ರ್ಯ ಬಂದು 75 ವರ್ಷಗಳಲ್ಲಿ ನೀವೇ 65 ವರ್ಷ ಆಡಳಿತ ನಡೆಸಿದ್ದೀರಿ. ಸಮಸ್ಯೆಯನ್ನು ಆಗಲೇ ಬಗೆಹರಿಸಿದ್ದರೆ, ಸಂತ್ರಸ್ತರ ಹೆಸರಿನ ಹಣೆಪಟ್ಟಿ ಕಟ್ಟಿಕೊಂಡು ಇಂದು ಪಾದಯಾತ್ರೆ ನಡೆಸುವ ಅಶ್ಯಕತೆ ಬರುತ್ತಿರಲಿಲ್ಲ. ತಮಗೆ ಗೊತ್ತಿದೆ 1980ರಲ್ಲಿ ಅರಣ್ಯ ಸಂರಕ್ಷಣಾ ಕಾಯ್ದೆ ಬರುವ ಮುಂಚೆ ಈ ಸಮಸ್ಯೆ ಪರಿಹರಿಸುವ ಅವಕಾಶ ರಾಜ್ಯ ಸರ್ಕಾರಕ್ಕೆ ಇತ್ತು. ಆಗ ನಿಮ್ಮದೇ ಸರ್ಕಾರವಿತ್ತು. ನಮ್ಮ ಜಿಲ್ಲೆಯ ನಾಯಕರುಗಳೇ ಮಂತ್ರಿ ಮಂಡಲ್ಲಿದ್ದರು. ನೀವೇ ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಗೆ ತ‌ಂದಿದ್ದು, ಆಗಲೇ ಈ ಸಮಸ್ಯೆ ಪರಿಹರಿಸಬಹುದಾಗಿತ್ತು ಎಂದರು.

ಕಾಂಗ್ರೆಸ್​​ ವಿರುದ್ದ ಸಂಸದ ರಾಘವೇಂದ್ರ ಕಿಡಿ

1980ರ ನಂತರವೂ ನಿಮ್ಮದೇ ಸರ್ಕಾರ ಇತ್ತು. ಇತ್ತೀಚೆಗೆ ಸಂಮಿಶ್ರ ಸರ್ಕಾರ ಹಾಗೂ ಬಿಜೆಪಿ ಸರ್ಕಾರ ಆಡಳಿತ ನಡೆಸಿವೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ ಐದು ವರ್ಷ ಆಡಳಿತದಲ್ಲಿತ್ತು. ನಮ್ಮ ಜಿಲ್ಲೆಯ ಅನೇಕ ಹಿರಿಯರು ಕಂದಾಯ, ಅರಣ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. 1980 ರಿಂದ 2017ರ ತನಕ 37 ವರ್ಷಗಳ ಕಾಲದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬಹುದಾಗಿತ್ತು. ಆಗಲೂ ಕಾಂಗ್ರೆಸ್​ ಮಾಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.

2018ರಲ್ಲಿ ಮತ್ತೊಮ್ಮೆ ವಿಧಾನಸಭಾ ಚುನಾವಣೆ ಬರುತ್ತದೆ ಎಂದು ನಿವೃತ್ತ ಅಧಿಕಾರಿಯನ್ನು ಕರೆಯಿಸಿ‌ 2017ರಲ್ಲಿ ಒಂದು ಪ್ರಯತ್ನ ಮಾಡಿದ್ರಿ. 1980ರ ನಂತರ, ಕೇಂದ್ರದ ಅನುಮತಿ ಪಡೆಯಬೇಕೆಂಬ ಪರಿಜ್ಞಾನ ನಿಮಗೆ ಇರಲಿಲ್ವಾ ಎಂದು ಸಂಸದರು ಪ್ರಶ್ನಿಸಿದರು‌. ಕೇವಲ ಚುನಾವಣೆ ಕಣ್ಣುಮುಂದೆ ಇಟ್ಟುಕೊಂಡು ಹಕ್ಕುಪತ್ರ ನೀಡಿದರು. ಇದಕ್ಕೆ ಹೈಕೋರ್ಟ್ ಕೇಂದ್ರದ ಅನುಮತಿ ಪಡೆಯಬೇಕಿತ್ತು ಎಂದು ಆದೇಶ ಮಾಡಿದೆ. ಇವರು ಮಾಡಿದ ತಪ್ಪನ್ನು ಹೈಕೋರ್ಟ್ ಎತ್ತಿ ಹಿಡಿದಿದೆ ಎಂದರು.

ಅದನ್ನು ಸರಿ ಮಾಡುವಂತಹ ಪ್ರಯತ್ನ ಮಾಡುತ್ತೇವೆ ಎಂದು ನಾವು ಘೋಷಿಸಿದ್ದೇವೆ. ಇನ್ನೂ ಎಷ್ಟು ವರ್ಷ ಶರಾವತಿ ಮುಳುಗಡೆ, ಬಗರ್ ಹುಕುಂ, ಅರಣ್ಯ ಹಕ್ಕು ಎಂಬ ವಿಚಾರ ಇಟ್ಟುಕೊಂಡು ದುರುಪಯೋಗ ಪಡಿಸಿಕೊಂಡು ಆಡಳಿತ ಮಾಡುತ್ತೀರಿ ಎಂದು ಕಾಂಗ್ರೆಸ್​​ಗೆ ಪ್ರಶ್ನಿಸಿದರು. ಮುಗ್ದ ರೈತರನ್ನು ನಿಮ್ಮ ಉಳಿವಿಗಾಗಿ ಪಾದಯಾತ್ರೆ ನಡೆಸುವ ಯಾವುದೇ ನೈತಿಕತೆ ಕಾಂಗ್ರೆಸ್​ಗೆ ಇಲ್ಲ ಎಂದು ಪಾದಯಾತ್ರೆ ಸಮಾವೇಶದ ಕುರಿತು ಕಿಡಿಕಾರಿದರು.

ಇದನ್ನೂ ಓದಿ: ಶರಾವತಿ ಸಂತ್ರಸ್ತರ ಪರ ಬಿಜೆಪಿ ಸರ್ಕಾರ ಮೊಸಳೆ ಕಣ್ಣೀರು ಹಾಕ್ತಾ ಇದೆ: ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.