ETV Bharat / state

ಕಲಾವಿದರನ್ನು ಗೌರವಿಸುವುದರಿಂದ ಅವರಿಗೆ ಸ್ಫೂರ್ತಿ ಸಿಗುತ್ತೆ: ನಟಿ ವೀಣಾ ಸುಂದರ್

author img

By

Published : Oct 8, 2021, 5:16 PM IST

ದಸರಾ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಚಲನಚಿತ್ರೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ನಟಿ ವೀಣಾ ಸುಂದರ್ ದಂಪತಿ ಸೇರಿದಂತೆ ಅನೇಕ ನಟ - ನಟಿಯರು ಭಾಗಿಯಾಗಿದ್ದರು.

Actress Veena Sunder
ನಟಿ ವೀಣಾ ಸುಂದರ್

ಶಿವಮೊಗ್ಗ : ಕಲಾವಿದರನ್ನು ಗೌರವಿಸುವುದರಿಂದ ಅವರಿಗೆ ಸ್ಫೂರ್ತಿ ಸಿಗುತ್ತದೆ ಎಂದು ನಟಿ ವೀಣಾ ಸುಂದರ್ ಹೇಳಿದರು.

ನಟಿ ವೀಣಾ ಸುಂದರ್

ಮಹಾನಗರ ಪಾಲಿಕೆ, ಜಿಲ್ಲಾಡಳಿತ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಶಿವಮೊಗ್ಗ ಬೆಳ್ಳಿ ಮಂಡಲ ಇವರ ಸಂಯುಕ್ತಾಶ್ರಯದಲ್ಲಿ ದಸರಾ ಚಲನಚಿತ್ರೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸಮಾರಂಭದಲ್ಲಿ ಭಾಗವಹಿಸಿ ನಟಿ ವೀಣಾ ಸುಂದರ್ ಮಾತನಾಡಿ, ಶಿವಮೊಗ್ಗ ಜಿಲ್ಲೆ ಸಾಹಿತ್ಯದ ಬೀಡು, ಇಂತ ನೆಲದಲ್ಲಿ ನಿಂತು ಮಾತನಾಡುವುದೇ ಹೆಮ್ಮೆ. ಕಳೆದೆರಡು ವರ್ಷಗಳಲ್ಲಿ ಸಿನಿಮಾ ಕಲಾವಿದರಿಗೆ ಸಾಕಷ್ಟು ತೊಂದರೆಯಾಗಿದೆ. ಸಿನಿಮಾ ಕಲಾವಿದರಿಗೆ ಆನ್​ಲೈನ್​​ ಜೀವನ ಇಲ್ಲ. ಜನ ಚಿತ್ರಮಂದಿರಕ್ಕೆ ಬಂದಾಗ ಮಾತ್ರ ಸಿನಿಮಾ ಕಲಾವಿದರಿಗೆ ಬದುಕು ಎಂದರು.

ಬಳಿಕ ನಟ ಸುಂದರ್​​ ಮಾತನಾಡಿ, ಕನ್ನಡ ಸಿನಿಮಾಕ್ಕೆ ಶಿವಮೊಗ್ಗ ಜಿಲ್ಲೆ ಬೇರು ಇದ್ದಂತೆ. ಸಿನಿಮಾವನ್ನು ಪ್ರೋತ್ಸಾಹಿಸಿ, ಹೆಚ್ಚು ಹೆಚ್ಚು ಕಲಾವಿದರನ್ನು ಗೌರವಿಸುವ ಮೂಲಕ ಕನ್ನಡ ಚಿತ್ರರಂಗವನ್ನು ಬೆಳೆಸಬೇಕು. ಸಿನಿಮಾಗಳನ್ನು ಆದಷ್ಟು ಚಿತ್ರಮಂದಿಗಳಿಗೆ ಹೋಗಿ ನೋಡಿ ಎಂದು ಮನವಿ ಮಾಡಿಕೊಂಡರು.

ಕಾರ್ಯಕ್ರಮದಲ್ಲಿ ಬಿಗ್​​​ಬಾಸ್ ಖ್ಯಾತಿಯ ವಾಸುಕಿ ವೈಭವ್​​​ ,ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ, ಬೆಳ್ಳಿಮಂಡಲದ ಅಧ್ಯಕ್ಷ ಡಿಎಸ್ ಅರುಣ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ: ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾದ ನಾಡಹಬ್ಬ; ಎರಡನೇ ದಿನದ ಛಾಯಾಚಿತ್ರಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.