ETV Bharat / state

ಗ್ರಾಪಂ ಚುನಾವಣೆವರೆಗೂ ಹಾಲಿ ಸದಸ್ಯರನ್ನೇ ಮುಂದುವರೆಸಿ: ಪ್ರಸನ್ನ ಕುಮಾರ್ - ಗ್ರಾ.ಪಂ ಚುನಾವಣೆ

ಗ್ರಾಪಂ ಚುನಾವಣೆ ನಡೆಯುವವರೆಗೂ ಹಾಲಿ ಸದಸ್ಯರನ್ನೇ ಮುಂದುವರೆಸಿ ಎಂದು ಎಂಎಲ್ ಸಿ.ಆರ್.ಪ್ರಸನ್ನ ಕುಮಾರ್ ಆಗ್ರಹಿಸಿದ್ದಾರೆ.

MLC prasanna speak about grama panchayat election
ಗ್ರಾ.ಪಂ ಚುನಾವಣೆವರೆಗೂ ಹಾಲಿ ಸದಸ್ಯರನ್ನೇ ಮುಂದುವರೆಸಿ : ಪ್ರಸನ್ನ ಕುಮಾರ್
author img

By

Published : May 14, 2020, 9:19 PM IST

ಶಿವಮೊಗ್ಗ: ರಾಜ್ಯ ಸರ್ಕಾರ ಗ್ರಾಮ ಪಂಚಾಯತ್ ಚುನಾವಣೆ ನಡೆಸುವವರೆಗೂ ಹಾಲಿ ಗ್ರಾಮ ಪಂಚಾಯತ್ ಸದಸ್ಯರನ್ನೇ ಮುಂದುವರೆಸಬೇಕು ಎಂದು ಕಾಂಗ್ರೆಸ್​​ನ ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್ ಆಗ್ರಹಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಗ್ರಾಮ ಪಂಚಾಯತ್​​ಗಳ ಮೀಸಲಾತಿ ಹಾಗೂ ಅಧ್ಯಕ್ಷರ ಅಧಿಕಾರವಧಿಯನ್ನು ಬದಲಾವಣೆ ಮಾಡಿದೆ. ರಾಜ್ಯ ಸರ್ಕಾರ 10 ವರ್ಷಗಳ ಮೀಸಲಾತಿಯನ್ನು ಐದು ವರ್ಷಕ್ಕೆ ಬದಲಾಯಿಸಿದೆ. ಅದೇ ರೀತಿ ಅಧಕ್ಷರ ಅಧಿಕಾರದಾವಧಿಯು 5 ವರ್ಷಕ್ಕೆ ಬದಲಾಗಿ 30 ತಿಂಗಳಿಗೆ ಇಳಿಸಿದೆ. ಇದು ಸರಿಯಲ್ಲ.

ಅಲ್ಲದೆ ಗ್ರಾಮ ಪಂಚಾಯತಿಯ ಚುನಾವಣೆ ನಡೆಯುವವರೆಗೂ ಆಡಳಿತಾಧಿಕಾರಿ ನೇಮಕ ಮಾಡಲು ಹೊರಟಿದೆ. ಆಡಳಿತಾಧಿಕಾರಿ ನೇಮಕವಾದ್ರೆ ಕೆಲಸಗಳು ಸರಿಯಾಗಿ ನಡೆಯುವುದಿಲ್ಲ. ಅಲ್ಲದೆ ಉದ್ಯೋಗ ಖಾತ್ರಿಯಂತಹ ಯೋಜನೆಗಳು ಸಹ ನಡೆಯುವುದಿಲ್ಲ. ಇದರಿಂದ ಸರ್ಕಾರ ಗಮನ ಹರಿಸಬೇಕು ಎಂದು ಆಗ್ರಹಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.