ETV Bharat / state

ಜಿಲ್ಲೆಯ ಇಬ್ಬರು ಹಿರಿಯ ನಾಯಕರಿಗೆ ಸಚಿವ ಸ್ಥಾನ ನೀಡಿದಾಗ ನಾವು ಅದನ್ನು ಸ್ವಾಗತಿಸಬೇಕು : ಕುಮಾರ್ ಬಂಗಾರಪ್ಪ - ಶಿವಮೊಗ್ಗ ಸುದ್ದಿ

ಒಂದೇ ಜಿಲ್ಲೆಗೆ ಮೂರ್ನಾಲ್ಕು ಖಾತೆ ಹೇಗೆ ನೀಡುತ್ತಾರೆ. ಹಾಗಾಗಿ, ನಮಗೆ ಅವಕಾಶ ಸಿಕ್ಕಿಲ್ಲ. ಜಿಲ್ಲೆಯ ಇಬ್ಬರಿಗೆ ಸಿಕ್ಕ ಮೇಲೆ ನಮಗೂ ಕೊಡಿ ಎನ್ನುವುದು ಸರಿಯಲ್ಲ. ಯಾವ ಜಿಲ್ಲೆಗೆ ಅವಕಾಶ ಸಿಕ್ಕಿಲ್ಲವೊ ಆ ಜಿಲ್ಲೆಗೆ ಸಚಿವ ಸ್ಥಾನ ನೀಡಲಿ ಎನ್ನುತ್ತೇನೆ ಹೊರತು ನಮ್ಮ ಜಿಲ್ಲೆಗೆ ಇನ್ನೊಂದು ಕೊಡಲಿ ಎನ್ನಲ್ಲ..

mla kumar bangarappa reaction on minister post aspiration
ಶಾಸಕ ಕುಮಾರ್ ಬಂಗಾರಪ್ಪ ಪ್ರತಿಕ್ರಿಯೆ
author img

By

Published : Aug 22, 2021, 8:24 PM IST

ಶಿವಮೊಗ್ಗ : ಜಿಲ್ಲೆಯ ಇಬ್ಬರು ಹಿರಿಯ ನಾಯಕರಿಗೆ ಸಚಿವ ಸ್ಥಾನ ನೀಡಿದಾಗ ಅದನ್ನು ನಾವು ಸ್ವಾಗತಿಸಬೇಕು ಎಂದು ಸೊರಬ ಶಾಸಕ ಕುಮಾರ್ ಬಂಗಾರಪ್ಪ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಸಚಿವ ಸ್ಥಾನ ನೀಡಿಲ್ಲ ಎಂಬ ಯಾವುದೇ ಬೇಸರ ಇಲ್ಲ. ಪಕ್ಷದ ಹಿರಿಯರಿಗೆ ಸಚಿವ ಸ್ಥಾನ ನೀಡಿರುವುದನ್ನು ನಾವು ಸ್ವಾಗತಿಸಬೇಕು ಎಂದರು.

ಈಶ್ವರಪ್ಪನವರು ಹಾಗೂ ಆರಗ ಜ್ಞಾನೇಂದ್ರ ಅವರು ಪಕ್ಷದ ಹಿರಿಯ ನಾಯಕರು ಹಾಗೂ ಪಕ್ಷವನ್ನು ಕಟ್ಟಿಕೊಂಡು ಬಂದವರು. ಹಾಗಾಗಿ, ಪಕ್ಷ ಅವರಿಗೆ ಅವಕಾಶ ಕೊಟ್ಟಿದೆ ಎಂದಾಗ ನಾವು ಸ್ವಾಗತಿಸಬೇಕು ಎಂದರು.

ಶಾಸಕ ಕುಮಾರ್ ಬಂಗಾರಪ್ಪ ಪ್ರತಿಕ್ರಿಯೆ

ಒಂದೇ ಜಿಲ್ಲೆಗೆ ಮೂರ್ನಾಲ್ಕು ಖಾತೆ ಹೇಗೆ ನೀಡುತ್ತಾರೆ. ಹಾಗಾಗಿ, ನಮಗೆ ಅವಕಾಶ ಸಿಕ್ಕಿಲ್ಲ. ಜಿಲ್ಲೆಯ ಇಬ್ಬರಿಗೆ ಸಿಕ್ಕ ಮೇಲೆ ನಮಗೂ ಕೊಡಿ ಎನ್ನುವುದು ಸರಿಯಲ್ಲ. ಯಾವ ಜಿಲ್ಲೆಗೆ ಅವಕಾಶ ಸಿಕ್ಕಿಲ್ಲವೊ ಆ ಜಿಲ್ಲೆಗೆ ಸಚಿವ ಸ್ಥಾನ ನೀಡಲಿ ಎನ್ನುತ್ತೇನೆ ಹೊರತು ನಮ್ಮ ಜಿಲ್ಲೆಗೆ ಇನ್ನೊಂದು ಕೊಡಲಿ ಎನ್ನಲ್ಲ ಎಂದ್ರು.

ಈ ಮೂಲಕ ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ ಎನ್ನುವುದನ್ನು ತಿಳಿಸಿದರು. ಇನ್ನು, ಸೊರಬ ಕ್ಷೇತ್ರದಲ್ಲಿ ಪಕ್ಷದೊಳಗೆ ಯಾವುದೇ ಗೊಂದಲ ಇಲ್ಲ. ರಾಜ್ಯಾಧ್ಯಕ್ಷರು ಬಂದು ಎಲ್ಲವನ್ನೂ ಬಗೆಹರಿಸಿದ್ದಾರೆ ಎಂದರು.

ಇದನ್ನೂ ಓದಿ:'ಕೆಜಿಎಫ್ ಚಾಪ್ಟರ್-2' ಅಭಿಮಾನಿಗಳಿಗೆ ಸಿಹಿ ಸುದ್ದಿ.. ಚಿತ್ರದ ಬಿಡುಗಡೆ ದಿನಾಂಕ ಘೋಷಣೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.