ETV Bharat / state

ಬೇಸಿಗೆಯಲ್ಲಿ ಕುಡಿಯುವ ನೀರು, ಮೇವಿನ ಕೊರತೆ ಆಗದಂತೆ ಕ್ರಮ: ಸಚಿವ ಮಧು ಬಂಗಾರಪ್ಪ

ಶಿವಮೊಗ್ಗದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಲವು ವಿಚಾರಗಳ ಬಗ್ಗೆ ಚರ್ಚಿಸಿ ಮಾಹಿತಿ ನೀಡಿದ್ದಾರೆ.

ಸಚಿವ ಮಧು ಬಂಗಾರಪ್ಪ
ಸಚಿವ ಮಧು ಬಂಗಾರಪ್ಪ
author img

By ETV Bharat Karnataka Team

Published : Nov 27, 2023, 2:44 PM IST

Updated : Nov 27, 2023, 3:31 PM IST

ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ: ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರು ಹಾಗೂ ಮೇವಿಗೆ ಕೊರತೆ ಆಗದಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶಿಕ್ಷಣ ಮತ್ತು ಸಾಕ್ಷರತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಶಿವಮೊಗ್ಗದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರಗಾಲದ ವಿಚಾರವಾಗಿ ಸಿಎಂ ಸಮರ್ಥವಾಗಿ ನಿರ್ವಹಣೆ ಮಾಡುತ್ತಿದ್ದಾರೆ. ನೀರಿನ ಸಮಸ್ಯೆ, ಮೇವಿನ ಕೊರತೆ ನೀಗಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ನಾವು ಈಗಾಗಲೇ ಕೆಡಿಪಿ ಸಭೆ ನಡೆಸಿ ಜಿಲ್ಲೆಯ ಸಮಗ್ರ ಮಾಹಿತಿ ಪಡೆದಿದ್ದು, ನವೆಂಬರ್ 15 ರ ಒಳಗೆ ವರದಿ ನೀಡುವಂತೆ ಸೂಚಿಸಿದ್ದರು‌. ಈಗ ವರದಿ ಸಿದ್ದವಾಗಿದೆ ಎಂದರು.

ಮೇವಿಗೆ ಸದ್ಯ ಯಾವುದೇ ಸಮಸ್ಯೆ ಆಗಲ್ಲ ಎಂದು ಡಿಸಿ ತಿಳಿಸಿದ್ದಾರೆ. ಸೊರಬ ತಾಲೂಕಿನ ಆನವಟ್ಟಿ ಹಾಗೂ ಸೊರಬದ ಒಂದೂಂದು ವಾರ್ಡ್​ಗೆ ಟ್ಯಾಂಕರ್ ನಲ್ಲಿ ಕುಡಿಯುವ ನೀರನ್ನು ಪೊರೈಕೆ ಮಾಡಲಾಗುತ್ತಿದೆ. ಬೇಸಿಗೆಯಲ್ಲಿ ಜಿಲ್ಲೆಯ 238 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗಲಿದೆ ಎಂದು ಸಮೀಕ್ಷೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ 6.42 ಲಕ್ಷ ಮೇವು ಬೇಕಾಗುತ್ತಿದೆ. ಸದ್ಯ ವಾರಕ್ಕೆ 27 ಟನ್ ಮೇವು ಬೇಕಾಗುತ್ತದೆ ಎಂದು ವಿವರಿಸಿದರು.

ಬಿಜೆಪಿರವರಿಗೆ ಧಮ್​ ತಾಕತ್​ ಇದ್ದರೆ ಕೇಂದ್ರದಿಂದ ಹಣ ತರಲಿ: ತೋಟಗಾರಿಕೆ ಬೆಳೆಯ ನಷ್ಟದ ಕುರಿತು ಈಗ ಸಮೀಕ್ಷೆ ಮಾಡಲಾಗುತ್ತಿದೆ. ರಾಜ್ಯದಿಂದ‌ 17 ಸಾವಿರ ಕೋಟಿ ರೂ. ನಷ್ಟ ಉಂಟಾಗಿದೆ ಎಂಬ ವರದಿಯನ್ನು ಕೇಂದ್ರಕ್ಕೆ ಕಳುಹಿಸಲಾಗುತ್ತಿದೆ. ಆದರೆ, ಕೇಂದ್ರದ ಅವರು ಹಣ ಬಿಡುಗಡೆ ಕುರಿತು ಯಾರು ಮಾತನಾಡುತ್ತಿಲ್ಲ. ಅಲ್ಲಿ ಅಧಿಕಾರಿಗಳು ಸಹ ಮಾತನಾಡುತ್ತಿಲ್ಲ. ಬಿಜೆಪಿರವರು ಬರ ಅಧ್ಯಯನ ನಡೆಸುತ್ತಿದ್ದಾರೆ. ಅವರು ಬರ ಅಧ್ಯಯನದ ವರದಿ ಯಾರಿಗೆ ನೀಡುತ್ತಾರಂತೆ ಎಂದು ಪ್ರಶ್ನೆ ಮಾಡಿದ ಮಧು ಬಂಗಾರಪ್ಪ ಬಿಜೆಪಿ ಅವರಿಗೆ ಧಮ್ ತಾಕತ್ ಇದ್ರೆ ಕೇಂದ್ರದಿಂದ ಹಣ ಬಿಡುಗಡೆ ಮಾಡಿಸಲಿ ಎಂದು ಕಿಡಿಕಾರಿದರು.

ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆ ಇಲ್ಲ: ವಿದ್ಯುತ್ 7 ಗಂಟೆಗಳ‌ ಕಾಲ ನೀಡಲಾಗುತ್ತಿದೆ. ಬೆಳೆಗೆ ನೀರು ನೀಡಲಾಗುತ್ತಿದೆ. ನನಗೆ ದೂರು ಬಂದ ಕಡೆ ನಾನೇ ಮಾತನಾಡುತ್ತಿದ್ದೇನೆ ಎಂದರು. ಶಿವಮೊಗ್ಗದ ಸಿಟಿಗೂ ದಿನದ 24 ಗಂಟೆ ವಿದ್ಯುತ್​ ಪೂರೈಕೆ ಮಾಡುತ್ತಿದೆ. ನಮ್ಮ ರಾಜ್ಯದಲ್ಲಿ ಲೋಡ್ಡ್ ಶೆಡ್ಡಿಂಗ್ ನಡೆಸುತ್ತಿಲ್ಲ, ನಮ್ಮಲ್ಲಿ ಯಾವುದೇ ವಿದ್ಯುತ್ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಗೃಹ ಜ್ಯೋತಿ ಯೋಜನೆಯಡಿ 5.31 ಲಕ್ಷದ 4.63 ಲಕ್ಷ ಬಳಕೆದಾರರಿದ್ದಾರೆ. ಇದರಲ್ಲಿ 53 ಕೋಟಿ ರೂ ವಿದ್ಯುತ್ ನೀಡಲಾಗುತ್ತಿದೆ ಎಂದರು. ಗೃಹ ಲಕ್ಷ್ಮಿ ಯೋಜನೆಗೆ ಯಾರು ಅರ್ಜಿ ಸಲ್ಲಿಸಿದ್ದಾರೆ. ಯಾರಿಗೆ ಇದುವರೆಗೂ ಹಣ ಬಂದಿಲ್ಲವೋ ಕೆಲವು ತಾಂತ್ರಿಕ ಸಮಸ್ಯೆಯಿಂದ ಹೀಗಾಗಿದೆ. ಮುಂದೆ ಅವರಿಗೂ ಹಿಂದಿನದು ಎಲ್ಲ ಸೇರಿಕೊಂಡು ಬರುತ್ತದೆ ಎ‌ಂದರು.

ವಿರೋಧ ಪಕ್ಷದವರು ಶ್ಯಾಡೋ ಗವರ್ನಮೆಂಟ್​ನಂತೆ​ ಕೆಲಸ ಮಾಡಲಿ: ವಿರೋಧ ಪಕ್ಷದ ಅಶೋಕ್ ಸರ್ಕಾರ ಬಿದ್ದು ಹೋಗುತ್ತದೆ ಎಂದು ಹೇಳುತ್ತಿದ್ದಾರೆ. ಅವರು ಈಗ ವಿರೋಧ ಪಕ್ಷದ ನಾಯಕನಾಗುತ್ತಿದ್ದಂತಯೇ ಹೀಗೆ ಮಾತನಾಡುತ್ತಿದ್ದಾರೆ ಅಷ್ಟೆ, ವಿರೋಧ ಪಕ್ಷದವರು ಸರ್ಕಾರದ ನೆರಳಿನಂತೆ ಕೆಲಸ ಮಾಡಬೇಕಿದೆ. ವಿಪಕ್ಷದವರು ರಾಜ್ಯದ ಅಭಿವೃದ್ದಿಗೆ ನಮಗೆ ಸಹಕರಿಸಬೇಕಾಗುತ್ತದೆ ಎಂದರು.

ಮೃತ ಕಾರ್ಮಿಕನಿಗೆ ಪರಿಹಾರ ನೀಡಲಾಗುವುದು: ಮೇಲ್ಸುತುವೆ ಕಾಮಗಾರಿ ವೇಳೆ ಕಾರ್ಮಿಕ ಸಾವನ್ನಪ್ಪಿದ್ದಾನೆ. ಈ ಕುರಿತು ನಾವು ವರದಿ ಪಡೆದುಕೊಂಡಿದ್ದೇವೆ. ವರದಿ ಬಂದ ನಂತರ ಪರಿಹಾರ ನೀಡಲಾಗುವುದು ಎಂಬ ಭರವಸೆಯನ್ನು ಸಚಿವರು ನೀಡಿದರು.

600 ಕೆಪಿಎಸ್ ಶಾಲೆ ತೆರೆಯಲಾಗುವುದು: ಮುಂದಿನ ಬಜೆಟ್ ಅವಧಿಗೆ 600 ಕೆಪಿಎಸ್ ಶಾಲೆ ತೆರೆಯಲಾಗುತ್ತದೆ. ಇದರ ಜೊತೆ ಅವಶ್ಯಕತೆ ಇರುವ ಎಲ್ಲ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. 8.500 ಕೊಠಡಿ ನಿರ್ಮಾಣ ಮಾಡಲಾಗುತ್ತಿದೆ. 13 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದರು.

ಆರಗ ಜ್ಞಾನೇಂದ್ರ ಅಮಿತ್ ಶಾ ವಿರುದ್ದ ಪ್ರತಿಭಟಿಸಲಿ: ಅಡಕೆ ಸುಲಿಯುವ ಯಂತ್ರಕ್ಕೆ ವಿದ್ಯುತ್​ ಉಚಿತ ಮಾಡಿಕೊಡುವಂತೆ ಸಿಎಂ ಹಾಗೂ ಕೆ.ಜೆ.ಜಾರ್ಜ್​ಗೆ ಪತ್ರ ಬರೆಯಲಾಗಿದೆ. ವಿದ್ಯುತ್ ವಿಜಿಲಿಯನ್ಸ್​​ನವರು ದಂಡ ಹಾಕುತ್ತಿದ್ದಾರೆ. ಅವರಿಗೆ ನಾನು ಹಾಗೆ ಮಾಡದಂತೆ ಸೂಚಿಸಿದ್ದೇನೆ. ವಿದ್ಯುತ್ ಯಂತ್ರಕ್ಕೆ ಬಿಜೆಪಿ ಸರ್ಕಾರವೇ ದರ ನಿಗದಿ ಮಾಡಿತ್ತು. ಈಗ ಅದರ ವಿರುದ್ದವೇ ಆರಗ ಜ್ಞಾನೇಂದ್ರ ಪ್ರತಿಭಟನೆಗೆ ಮುಂದಾಗಿದ್ದಾರೆ. ನೀವು ಮೊದಲು ಅಮಿತ್ ಶಾ ವಿರುದ್ದ ಪ್ರತಿಭಟನೆ ನಡೆಸಿ ಎಂದು ಆರಗ ಜ್ಞಾನೇಂದ್ರ ವಿರುದ್ಧ ವಾಗ್ಧಾಳಿ ನಡೆಸಿದರು.

ಜಾತಿ ಗಣತಿ ಜಾರಿ ಮಾಡಬೇಕು: ಜಾತಿಗಣತಿ ಆಗಬೇಕು ಎಂಬುದು ನಮ್ಮ ಪಕ್ಷ‌ದ ನಿಲುವು. ಜಾತಿ ಗಣತಿ ಬಿಡುಗಡೆ ಕುರಿತು ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ನಮ್ಮ ಎಲ್ಲರ ಬೇಡಿಕೆ ಜಾತಿ ಗಣತಿ ಬಿಡುಗಡೆ ಮಾಡಬೇಕು ಎಂಬುದೇ ಆಗಿದೆ. ಸಚಿವ ಸಂಪುಟದಲ್ಲಿ ಚರ್ಚೆ ನಡೆಸಿ, ಪ್ರಕರಣ ವಾಪಸ್ ಪಡೆದುಕೊಳ್ಳಲಾಗುತ್ತಿದೆ. ಸಚಿವ ನಾಗೇಂದ್ರ ಅವರ ಪ್ರಕರಣವನ್ನು ಸಹ ಚರ್ಚೆ ನಡೆಸಿ ತೀರ್ಮಾನ ಮಾಡಲಾಗುತ್ತದೆ. ಕೋಮುವಾದಿ ಪಕ್ಷದ ವಿರುದ್ದ ದೇವೇಗೌಡರು ಹೋರಾಟ ಮಾಡಿಕೊಂಡವರು ಈಗ ಅವರ ಜೊತೆಯೇ ಹೋದರೆ ಎಲ್ಲರೂ ಸಹ ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಅವರೇ ಉತ್ತರ ನೀಡಬೇಕು ಎಂದರು.

ಇದನ್ನೂ ಓದಿ: ಬಿಜೆಪಿಯವರು 9 ವರ್ಷಗಳಿಂದ ಸಿಬಿಐ, ಇಡಿ ಬಳಸಿಕೊಂಡು ರಾಜಕಾರಣ ಮಾಡ್ತಿದ್ದಾರೆ: ಎಂ.ಬಿ.ಪಾಟೀಲ್‌

Last Updated : Nov 27, 2023, 3:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.