ETV Bharat / state

ಮೆಗ್ಗಾನ್ ಬೋಧನಾಸ್ಪತ್ರೆಯಲ್ಲಿ ನಡೆಯುತ್ತೆ ತಿಂಗಳಿಗೆ 800ಕ್ಕೂ ಹೆಚ್ಚು ಆಪರೇಷನ್​ಗಳು!

ಮೆಗ್ಗಾನ್​​ ಬೋಧನಾಸ್ಪತ್ರೆಯಲ್ಲಿ ಒಟ್ಟು 16 ಆಪರೇಷನ್ ಥಿಯೇಟರ್​ಗಳಿವೆ. ಇಲ್ಲಿ ನಡೆಯುವ ಎಲ್ಲ ರಿತಿಯ ಆಪರೇಷನ್​ಗಳಿಗೆ ಬೇಕಾದ ಸೂಕ್ತ ವೈದ್ಯಕೀಯ ಸಲಕರಣೆಗಳಿದ್ದು, ಪ್ರತೀ ತಿಂಗಳು ಕನಿಷ್ಠ 800 ಆಪರೇಷನ್​ಗಳು ನಡೆಯುತ್ತವೆ.

author img

By

Published : May 7, 2021, 9:02 AM IST

meggan hospital
ಮೆಗ್ಗಾನ್ ಬೋಧನಾಸ್ಪತ್ರೆ

ಶಿವಮೊಗ್ಗ: ಮಲೆನಾಡು, ಅರೆ ಬಯಲು ಸೀಮೆಯ‌ ಜತೆ ಇತರೆ ಜಿಲ್ಲೆಯ ಜನರ ಪಾಲಿಗೆ ಶಿವಮೊಗ್ಗದ ಮೆಗ್ಗಾನ್​ ಆಸ್ಪತ್ರೆ ಸಂಜೀವಿನಿಯಾಗಿದೆ. ಸಿಮ್ಸ್ ಮೆಗ್ಗಾನ್ ಬೋಧನಾಸ್ಪತ್ರೆಯಲ್ಲಿ ಹರಿಗೆ, ಗರ್ಭಕೋಶ ಸಂಬಂಧಿತ ಆಪರೇಷನ್​​ ಹೀಗೆ ಹಲವು ಆಪರೇಷನ್​ಗಳನ್ನು ಮಾಡಲಾಗುತ್ತದೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಪ್ರತೀ ತಿಂಗಳು ಕನಿಷ್ಠ 800 ಆಪರೇಷನ್​ಗಳು ನಡೆಯುತ್ತವೆ. ಇಷ್ಟೊಂದು ದೊಡ್ಡ ಪ್ರಮಾಣದ ಆಪರೇಷನ್ ಬೆಂಗಳೂರು ಬಿಟ್ಟರೆ ಶಿವಮೊಗ್ಗದಲ್ಲಿ ನಡೆಯುತ್ತಿದೆ ಎನ್ನಲಾಗುತ್ತಿದೆ.

ಮೆಗ್ಗಾನ್ ಬೋಧನಾಸ್ಪತ್ರೆಯಲ್ಲಿ ನಡೆಯುತ್ತೆ ತಿಂಗಳಿಗೆ 800ಕ್ಕೂ ಹೆಚ್ಚು ಆಪರೇಶಷ​ಗಳು!

ಮೆಗ್ಗಾನ್​​ ಬೋಧನಾಸ್ಪತ್ರೆಯಲ್ಲಿ ಒಟ್ಟು 16 ಆಪರೇಷನ್ ಥಿಯೇಟರ್​ಗಳಿವೆ. ಆಸ್ಪತ್ರೆಯ 3 ಮತ್ತು 4ನೇ ಅಂತಸ್ತಿನಲ್ಲಿ ಆಪರೇಷನ್ ಥಿಯೇಟರ್​ಗಳಿವೆ. 3ನೇ ಅಂತಸ್ತಿನಲ್ಲಿ 5 ಆಪರೇಷನ್ ಥಿಯೇಟರ್​ಗಳಿದ್ದರೆ, 4ನೇ ಅಂತಸ್ತಿನಲ್ಲಿ 7 ಆಪರೇಷನ್ ಥಿಯೇಟರ್​ಗಳಿವೆ. ಹೆರಿಗೆ ವಿಭಾಗದಲ್ಲಿ 4 ಆಪರೇಷನ್​​ ಥಿಯೇಟರ್​​ಗಳಿವೆ.

ಆಪರೇಷನ್​ಗೆ ಬೇಕಾದ ಎಲ್ಲ ಆಧುನಿಕ ಸಲಕರಣೆಗಳಿವೆ:

ಮೆಗ್ಗಾನ್ ಬೋಧನಾಸ್ಪತ್ರೆಯಲ್ಲಿ ನಡೆಯುವ ಎಲ್ಲ ರಿತಿಯ ಆಪರೇಷನ್​ಗಳಿಗೆ ಬೇಕಾದ ವೈದ್ಯಕೀಯ ಸಲಕರಣೆಗಳಿವೆ. ಇಲ್ಲಿ ಆಗದ ಆಪರೇಷನ್​​ಗಳನ್ನು ಬೇರೆ ಆಸ್ಪತ್ರೆಗಳಿಗೆ ಕಳುಹಿಸಿ ಆಯುಷ್ಮಾನ್ ಭಾರತ್ ಕಾರ್ಡ್ ಯೋಜನೆಯಡಿ ನಡೆಸಲಾಗುತ್ತದೆ.

ಮೆಗ್ಗಾನ್ ಆಸ್ಪತ್ರೆಯಲ್ಲಿ ಪ್ರತಿದಿನ 30-40 ಆಪರೇಷನ್​​ಗಳು ನಡೆಯುತ್ತವೆ. ಇಲ್ಲಿ ಆಪರೇಷನ್​​ಗೆ ಬೇಕಾದ ಎಲ್ಲ ಸೌಲಭ್ಯಗಳು, ವೈದ್ಯರು, ತಜ್ಞರು ಇದ್ದಾರೆ ಎನ್ನುತ್ತಾರೆ ಆಸ್ಪತ್ರೆ ಮುಖ್ಯಸ್ಥ ಡಾ. ಶ್ರೀಧರ್. ಸದ್ಯ ಮೆಗ್ಗಾನ್ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಪ್ರಾರಂಭವಾಗಿದೆ ಎಂದಿದ್ದಾರೆ

ಇಲ್ಲಿ ನ್ಯೂರಾಲಜಿ, ಕ್ಯಾನ್ಸರ್, ಯೂರಲಾಜಿ ತಜ್ಞರು ಬಂದ್ರೆ ಎಲ್ಲ ಆಪರೇಷನ್​​ಗಳನ್ನು ಇಲ್ಲಿಯೇ ಮಾಡಬಹುದು ಎನ್ನುತ್ತಾರೆ ಜಿಲ್ಲಾ ಸರ್ಜನ್ ಡಾ. ಶ್ರೀನಿವಾಸ್.

ಇದನ್ನೂ ಓದಿ: ಕೊರೊನಾ ಕಾಲದಲ್ಲಿ ದಾನಿಗಳ ನೆರವಿಲ್ಲದೆ ಸಂಕಷ್ಟದಲ್ಲಿದೆ ಬೆಳಗಾವಿಯ ವೃದ್ಧಾಶ್ರಮ

ಒಟ್ಟಾರೆ, ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯಲ್ಲಿ ಅತ್ಯಂತ ಸುಸಜ್ಜಿತವಾದ ಆಪರೇಷನ್ ಥಿಯೇಟರ್​ಗಳು ಇವೆ. ಇಲ್ಲಿ ರೋಗಿಗಳಿಗೆ ಉತ್ತಮ ಸೇವೆಯ ಜತೆಗೆ ಜೀವವನ್ನು ಉಳಿಸುವ ಕಾರ್ಯ ನಡೆಸಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.