ETV Bharat / state

India vs Bharat: 'ಭಾರತ್ ಮಾತಾಕಿ ಜೈ ಎನ್ನುತ್ತೆವೆಯೇ ಹೊರತು, ಇಂಡಿಯಾ ಮಾತಾಕಿ ಜೈ ಎನ್ನೋದಿಲ್ಲ'; ಆರಗ ಜ್ಞಾನೇಂದ್ರ - ಇಂಡಿಯಾ ಮಾತಾಕೀ ಜೈ ಎನ್ನೋದಿಲ್ಲ

India vs Bharat: ಜಿ20 ಶೃಂಗಸಭೆಯಲ್ಲಿ ಭಾಗವಹಿಸಲಿರುವ ಗಣ್ಯರ ಔತಣಕೂಟದ ಆಮಂತ್ರಣ ಪತ್ರದಲ್ಲಿ 'ರಿಪಬ್ಲಿಕ್​ ಆಫ್​​ ಇಂಡಿಯಾ' ಬದಲಿಗೆ 'ರಿಪಬ್ಲಿಕ್​ ಆಫ್​ ಭಾರತ್' ಎಂಬ ಹೆಸರು ನಮೋದಿಸಿರುವ ಕುರಿತು ಭಾರಿ ಚರ್ಚೆಗೆ ಗ್ರಾಸವಾಗಿದೆ. ''ಭಾರತ್ ಮಾತಾಕಿ ಜೈ ಎನ್ನುತ್ತೆವೆಯೇ ಹೊರತು, ಇಂಡಿಯಾ ಮಾತಾಕಿ ಜೈ ಎಂದು ಕೂಗೋದಿಲ್ಲ'' ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದರು.

Former Minister Araga Gyanendra statement
'ಭಾರತ್ ಮಾತಾಕೀ ಜೈ ಎನ್ನುತ್ತವೆಯೇ ಹೊರತು, ಇಂಡಿಯಾ ಮಾತಾಕೀ ಜೈ ಎನ್ನೋದಿಲ್ಲ': ಆರಗ ಜ್ಞಾನೇಂದ್ರ
author img

By ETV Bharat Karnataka Team

Published : Sep 6, 2023, 12:46 PM IST

ಮಾಜಿ ಸಚಿವ ಆರಗ ಜ್ಞಾನೇಂದ್ರ ಪ್ರಕ್ರಿಯೆ

ಶಿವಮೊಗ್ಗ: ''ಭಾರತ್ ಮಾತಾಕಿ ಜೈ ಎನ್ನುತ್ತೆವೆಯೇ ಹೊರತು, ಇಂಡಿಯಾ ಮಾತಾಕಿ ಜೈ ಎಂದು ಕೂಗೋದಿಲ್ಲ'' ಎಂದು ಇಂಡಿಯಾ ಎಂಬುದನ್ನು ಭಾರತ್ ಎಂದು ಬದಲಾವಣೆಯ ಮಾಡುವ ಕುರಿತು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಸರ್ಮಥಿಸಿಕೊಂಡಿದ್ದಾರೆ.

''ರಿಪಬ್ಲಿಕ್ ಆಫ್ ಭಾರತ್ ಎಂದು ನಾಮಕರಣದ ಬಗ್ಗೆ ಈಗ ಬಹಳ ಚರ್ಚೆಯಾಗುತ್ತಿದೆ. ಇಂಡಿಯಾ ಹಾಗೂ ಭಾರತ್ ಎಂಬ ಹೆಸರುಗಳು ಏಕೆ ಬಂದಿವೆ. ಚರ್ಚೆಯಾಗುವುದು ಬಹಳ ಒಳ್ಳೆಯದು. ಇಂಡಿಯಾ ಎಂಬ ಹೆಸರಿಗೆ ಬಹಳ ಹಿನ್ನೆಲೆ ಇಲ್ಲ. ಇಂಡಸ್ ವ್ಯಾಲಿ ಇದ್ದುದರಿಂದ ಈ ಹೆಸರು ಬಂತು. ಭಾರತ ಎಂದು ಉಚ್ಚಾರಣೆ ಮಾಡಲು ಬ್ರಿಟಿಷರಿಗೆ ಬಾರದೇ ಇದ್ದುದ್ದರಿಂದ ಇಂಡಿಯಾ ಎಂದು ಕರೆದರು'' ಎಂದರು.

''ಭಾರತ ತನ್ನತನವನ್ನು ಈಗ ಕಂಡುಕೊಳ್ಳುತ್ತಿದೆ. ಆಗಿನ‌ ಕಾಲದಲ್ಲಿ ಉಂಟಾಗಿದ್ದ ಲೋಪಗಳನ್ನು ಸರಿಪಡಿಸಲಾಗುತ್ತಿದೆ. ಇಂಗ್ಲಿಷರ, ಮೊಘಲರ ಕಾಲದಲ್ಲಿ ಪರಿವರ್ತನೆ ಮಾಡಲಾಗಿದ್ದು, ಈಗ ಸರಿಪಡಿಸಲಾಗುತ್ತಿದೆ. ಸಾಂಸ್ಕೃತಿಕ ಭಾರತವಾಗಲು ಈಗ ಚರ್ಚೆಯಾಗುತ್ತಿದೆ. ಮದ್ರಾಸ್ ಹೋಗಿ ಚೆನ್ನೈ ಆಗಿದೆ. ಬ್ಯಾಂಗಲೋರ್ ಹೋಗಿ ಬೆಂಗಳೂರು ಆಗಿದೆ. ಕೂರ್ಗ್ ಹೋಗಿ ಕೊಡಗು ಆಗಿದೆ'' ಎಂದು ಆರಗ ಜ್ಞಾನೇಂದ್ರ ತಿಳಿಸಿದರು.

ಭಾರತ ಎಂಬುದು ನಮ್ಮ ಪರಂಪರೆಯ ಹೆಸರು- ಆರಗ: ''ಇವೆಲ್ಲ ನಮ್ಮ ಭಾವನಾತ್ಮಕವಾಗಿ ಆಗಿರುವಂತಹದ್ದು. ಕೇಂದ್ರ ಸರ್ಕಾರ, ಭಾರತ್ ಎಂದು ಹೆಸರಿಟ್ಟರೆ ಬಹಳ ಒಳ್ಳೆಯದು. ನಮ್ಮ ದೇಶಕ್ಕಾಗಿ ಭಾವನಾತ್ಮಕವಾಗಿ ಇರಬೇಕಾದ ಅವಶ್ಯಕತೆ ಇದೆ. ಈ ದೇಶ ಪರದೇಶ ಅಲ್ಲ. ಇದು ಧರ್ಮದ ಛತ್ರ ಅಲ್ಲ. ಹೇಗೆ ಬೇಕೋ ಹಾಗೆ ಇರಲು ಆಗಲ್ಲ. ಒಂದು ದೇಶ, ವ್ಯವಸ್ಥೆಯಲ್ಲಿರಬೇಕಾದರೆ ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ನಿರ್ಮಾಣವಾಗಬೇಕು. ಭಾರತ ಎಂಬುದು ನಮ್ಮ ಪರಂಪರೆಯ ಹೆಸರು. ಭಾರತ ಎಂದು ಕರೆದಾಗ ಬಹಳ ಸಂತಸವಾಗುತ್ತದೆ ಎಂದರು.

ದೇಶದಲ್ಲಿ ಪರ ಮತ್ತು ವಿರೋಧ ಚರ್ಚೆ: ಪ್ರಸ್ತುತ ದೇಶದಲ್ಲಿ ಹೊಸ ಚರ್ಚೆಯೊಂದು ಪ್ರಾರಂಭವಾಗಿದೆ. 'ಇಂಡಿಯಾ' ಬದಲಿಗೆ 'ಭಾರತ' (Bharat) ಎಂಬ ಹೆಸರು ಅಧಿಕೃತವಾಗಿ ಬಳಸಲು ಪ್ರಸ್ತಾಪವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸೆ.18ರಿಂದ 22ರ ವರೆಗೆ ಜರುಗಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆ ಪರ ಹಾಗೂ ವಿರೋಧ ಚರ್ಚೆಗಳು ನಡೆಯುತ್ತಿವೆ. ಜಿ20 ಶೃಂಗಸಭೆಯಲ್ಲಿ ಭಾಗವಹಿಸಲಿರುವ ಗಣ್ಯರ ಔತಣಕೂಟದ ಆಮಂತ್ರಣ ಪತ್ರದಲ್ಲಿ 'ರಿಪಬ್ಲಿಕ್​ ಆಫ್​​ ಇಂಡಿಯಾ' ಬದಲಿಗೆ 'ರಿಪಬ್ಲಿಕ್​ ಆಫ್​ ಭಾರತ್' ಎಂಬ ಹೆಸರು ಉಲ್ಲೇಖ ಮಾಡಿರುವ ಬಗ್ಗೆ ಭಾರಿ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: ಜಿ20 ಶಂಗಸಭೆ, 'ಭಾರತ' ಫೈಟ್​ ನಡುವೆ ರಾಹುಲ್​ ಗಾಂಧಿ ಒಂದು ವಾರ ಯುರೋಪ್​ ಪ್ರವಾಸ; ಅನಿವಾಸಿ ಭಾರತೀಯರೊಂದಿಗೆ ಸಂವಾದ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.