ETV Bharat / state

ಶಿವಮೊಗ್ಗದಲ್ಲಿ ಏಳು ದಿನಗಳಿಂದ ಕೂತಿಲ್ಲ ಈ ಹೋರಿ: ಕಾರಣ ಚರ್ಮಗಂಟು ರೋಗ - Department of Animal Husbandry

ಶಿವಮೊಗ್ಗದ ಸೊರಬ ತಾಲೂಕಿನ ಹೀರೆಚೌಟಿ ಗ್ರಾಮದಲ್ಲಿ ಹೋರಿಯೊಂದು ಚರ್ಮಗಂಟು ರೋಗದಿಂದ ಬಳಲುತ್ತಿದೆ.

ಚರ್ಮಗಂಟು ರೋಗ
ಚರ್ಮಗಂಟು ರೋಗ
author img

By

Published : Nov 6, 2022, 7:45 PM IST

ಶಿವಮೊಗ್ಗ: ಚರ್ಮಗಂಟು ರೋಗ ಜಾನುವಾರುಗಳನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಈ ರೋಗದಿಂದ ಅನೇಕ ಜಾನುವಾರುಗಳು ತಮ್ಮ ಪ್ರಾಣವನ್ನೇ ಬಿಟ್ಟಿವೆ. ಸರಿಯಾದ ಚಿಕಿತ್ಸೆ ಇರದ ಕಾರಣ ರೈತರೂ ಸಹ ಹೈರಣಾಗಿದ್ದಾರೆ. ಈ ರೋಗಕ್ಕೆ ತುತ್ತಾದ ಸೊರಬ ತಾಲೂಕಿನ ಹೀರೆಚೌಟಿ ಗ್ರಾಮದ ಮಂಜುನಾಥ್ ಎಂಬುವರ ಹೋರಿ ಕಳೆದ ಒಂದು ವಾರದಿಂದ ಕುಳಿತುಕೊಳ್ಳದೆ ನಿಂತಲ್ಲೇ ನಿಂತಿದೆ.

ಹೋರಿಗೆ ಚರ್ಮಗಂಟು ರೋಗ (ಲಿಂಪಿ ಸ್ಕಿನ್ ಡಿಸೀಸ್) ದಿಂದ ನೋವು ತಾಳಲಾರದೆ, ಕುಳಿತು‌ಕೊಳ್ಳಲೂ ಆಗದೆ ನೋವಿನಿಂದ ಪರಿತಪಿಸುತ್ತಿದೆ.‌ ಹೋರಿಗೆ ಎಷ್ಟರ ಮಟ್ಟಿಗೆ ನೋವಿದೆ ಅಂದ್ರೆ ಅದರ ಕಾಲಿನ ಸ್ನಾಯುಗಳ ನೋವಿನಿಂದ ಅದು ಕುಳಿತುಕೊಳ್ಳಲು ಆಗದೇ ಬಳಲುತ್ತಿದೆ. ಕಳೆದೊಂದು ವಾರದಿಂದ ಇದು ಹಾಗೆಯೇ ನಿಂತಿರುವುದನ್ನು ಕಂಡು ಅದರ ಮಾಲೀಕ ಮಂಜುನಾಥ ಸೇರಿದಂತೆ ಕುಟುಂಬಸ್ಥರು ಮರುಗುತ್ತಿದ್ದಾರೆ.

ಚರ್ಮಗಂಟು ರೋಗದಿಂದ ಬಳಲುತ್ತಿರುವ ಹೋರಿ

ಚರ್ಮಗಂಟು ರೋಗದಿಂದ ಹೋರಿಯ ಮೈಮೇಲೆಲ್ಲಾ ಗಂಟು ಕಂಡುಬಂದಿದೆ. ಇದು ಹೋರಿಗೆ ತೀವ್ರ ತರಹವಾದ ನೋವುಂಟು ಮಾಡುತ್ತದೆ. ಇದರಿಂದ ಇದು ಮೇವು ತಿನ್ನುವುದನ್ನು ಬಿಡುತ್ತದೆ. ನಂತರ ಸಾವನ್ನಪ್ಪುತ್ತದೆ. ಈಗಲೂ ಸಹ ಈ ರೋಗಕ್ಕೆ ಸರಿಯಾದ ಚಿಕಿತ್ಸೆ ಇಲ್ಲ. ಆದರೆ ಗೋಟ್ ಫಾಕ್ಸ್ ಲಸಿಕೆಯಿಂದ ಇದನ್ನು ಗುಣಪಡಿಸಬಹುದು‌ ಎಂದು ಪಶು ಸಂಗೋಪನಾ ಇಲಾಖೆ ತಿಳಿಸಿದೆ.‌

ಆದರೆ, ಇನ್ನೂ ಪೂರ್ಣ ಪ್ರಮಾಣದಲ್ಲಿ ಲಸಿಕೆ ಪೂರೈಕೆ ಆಗದ ಕಾರಣ ಜಾನುವಾರುಗಳು ರೋಗದಿಂದ ಬಳಲುತ್ತಿವೆ. ಸರ್ಕಾರ ಲಸಿಕೆ ನೀಡುತ್ತೇವೆ ಎಂದು ತಿಳಿಸುತ್ತದೆ. ಆದರೆ ಈ ಲಸಿಕೆ ಮಾತ್ರ ರೈತರತ್ತ ಬಂದಿಲ್ಲ ಎಂದು ಹೋರಿ ಮಾಲೀಕ ಮಂಜುನಾಥ್ ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಜಾನುವಾರು ಚರ್ಮಗಂಟು ರೋಗ: ಪರಿಹಾರ ಧನಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.