ETV Bharat / state

ಶಿವಮೊಗ್ಗ: ಸ್ನೇಹಿತನನ್ನು ಕರೆಯಿಸಿ ಕೊಂದವನಿಗೆ ಜೀವಾವಧಿ ಶಿಕ್ಷೆ - ಈಟಿವಿ ಭಾರತ ಕರ್ನಾಟಕ

ಶಿವಮೊಗ್ಗದಲ್ಲಿ ಸ್ನೇಹಿತನನ್ನೆ ಹಣದ ಆಸೆಗೆ ಗುಡ್ಡಕ್ಕೆ‌ ಕರೆಯುಸಿ ಗುಂಡಿಕ್ಕಿ ಕೊಂದ ತೀರ್ಥಹಳ್ಳಿ ತಾಲೂಕಿನ ವಾಟಗಾರು ಗ್ರಾಮದ ಭುಜಂಗ (45) ಎಂಬುವರಿಗೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ.

Accused Bhujanga sentenced to life imprisonment
ಆರೋಪಿ ಭುಜಂಗನಿಗೆ ಜೀವಾವಧಿ ಶಿಕ್ಷೆ
author img

By

Published : Nov 15, 2022, 1:16 PM IST

ಶಿವಮೊಗ್ಗ: ಸ್ನೇಹಿತನನ್ನು ಹಣದ ಆಸೆಗೆ ಗುಡ್ಡಕ್ಕೆ‌ ಕರೆಯಿಸಿ ಗುಂಡಿಕ್ಕಿ ಕೊಂದ ತೀರ್ಥಹಳ್ಳಿ ತಾಲೂಕಿನ ವಾಟಗಾರು ಗ್ರಾಮದ ಭುಜಂಗ (45) ಎಂಬುವರಿಗೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಭುಜಂಗ ತಮ್ಮ ಪಕ್ಕದ ಗ್ರಾಮದ ಮಳಲಿಮಕ್ಕಿ ಗ್ರಾಮದ ನಾಗರಾಜ್ (35) ನನ್ನು ಕೆಸಿನಮನೆ ಗ್ರಾಮದ ಅಭಯಾರಣ್ಯದ ಗುಡ್ಡಕ್ಕೆ ಕರೆಯಿಸಿ ತನ್ನ ಬಳಿ ಇದ್ದ ನಾಡ ಬಂದೂಕುನಿಂದ ಗುಂಡಿಕ್ಕಿ ಕೊಂದಿದ್ದರು. ಬಳಿಕ ನಾಗರಾಜ್ ಬಳಿ ಇದ್ದ ಬೈಕ್, ಹಣ, ಬಂಗಾರದ ಚೈನ್ ಹಾಗೂ ಉಂಗುರವನ್ನು ತೆಗೆದುಕೊಂಡು ಪರಾರಿಯಾಗಿದ್ದರು.

ಈ ಘಟನೆ ಮಾಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಹಿನ್ನೆಲೆ ಅಂದಿನ ಡಿವೈಎಸ್ಪಿ‌ ಓಂಕಾರ ನಾಯ್ಕ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಈ ಕುರಿತು ಸರ್ಕಾರದ ಪರ ವಕೀಲರಾದ ಪುಷ್ಪ ಮಂಡಿಸಿದ ವಾದವನ್ನು ಅಲಿಸಿದ ನ್ಯಾಯಾಧೀಶರಾದ ಬಿ.ಆರ್. ಪಲ್ಲವಿ ಅವರು ಕಲಂ 302 ಮತ್ತು ಕಲಂ7 , 25 ಶಸ್ತ್ತಾಸ್ತ್ರ ಕಾಯ್ಧೆ ಅಡಿ ಆರೋಪ ದೃಢಪಟ್ಟಿದ್ದರಿಂದ ಭುಜಂಗ ಅವರಿಗೆ ಜೀವಾವಧಿ ಶಿಕ್ಷೆ ಹಾಗೂ 2 ಲಕ್ಷ ರೂಪಾಯಿ ದಂಡವನ್ನು ನೀಡಿ ಆದೇಶ ನೀಡಿದೆ. ಒಂದು ವೇಳೆ ದಂಡ ಕಟ್ಟಲು ಆಗದೆ ಹೋದರೆ ಒಂದು ವರ್ಷ ಹೆಚ್ಚುವರಿ ಶಿಕ್ಷೆಯನ್ನು ಅನುಭವಿಸಲು ಸೂಚಿಸಿದೆ.

ಇದನ್ನೂ ಓದಿ: ನಡುರಸ್ತೆಯಲ್ಲೇ ವಿದ್ಯಾರ್ಥಿನಿಗೆ ಗುಂಡಿಕ್ಕಿ ಕೊಂದ ದುಷ್ಕರ್ಮಿ... ಸಿಸಿಟಿವಿ ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.