ಶಿವಮೊಗ್ಗ: ಕೋವಿಡ್-19 ಅನ್ನು ಧೈರ್ಯವಾಗಿ ಎದುರಿಸಿ ಓಡಿಸೋಣ ಎಂದು ಸೊರಬ ಶಾಸಕ ಕುಮಾರ ಬಂಗಾರಪ್ಪ ವಿಡಿಯೋ ಮೂಲಕ ಜನರಿಗೆ ಕರೆ ನೀಡಿದ್ದಾರೆ.
![kumara-bangarappa](https://etvbharatimages.akamaized.net/etvbharat/prod-images/6534109_801_6534109_1585105535875.png)
ಕೋವಿಡ್-19 ಅನ್ನು ಎದುರಿಸುವ ಜವಾಬ್ದಾರಿ ನಮ್ಮ ಮೇಲಿದೆ. ಪ್ರಧಾನಿ ಹಾಗೂ ಸಿಎಂ ಹೇಳಿರುವ ಪ್ರಕಾರ ಮನೆಯಲ್ಲಿ ಇರಬೇಕು ಎಂದು ವಿಡಿಯೋದಲ್ಲಿ ವಿನಂತಿಸಿ ಕೊಂಡಿದ್ದಾರೆ.
ಸ್ವಚ್ಛತೆಯಿಂದ ಇರಿ, ದೇಶ ಭಕ್ತಿ ತೋರುವಂತಹ ಕಾಲವಿದು. ಮಾನವ ಕುಲವನ್ನು ಪ್ರೀತಿ ಮಾಡುವಂತಹ ಹಾಗೂ ಮಹಾಮಾರಿಯನ್ನು ಎದುರಿಸುವಂತಹ ಕೆಲಸಕ್ಕೆ ನಾವೆಲ್ಲಾ ಸಜ್ಜಾಗಬೇಕಿದೆ ಎಂದರು.