ETV Bharat / state

ಚುನಾವಣೆಯಲ್ಲಿ ಮಧು ಬಂಗಾರಪ್ಪ ಹಣಾಹಣಿ ಕುರಿತು ಸಹೋದರನ ಪ್ರತಿಕ್ರಿಯೆ - ಮೈತ್ರಿ ಪಕ್ಷದ ಅಭ್ಯರ್ಥಿ

ಶಿವಮೊಗ್ಗ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ಮೂಲಕ ಮತ್ತೊಮ್ಮೆ ಮಾಜಿ ಸಿಎಂ ಪುತ್ರರು ಎದುರಾಳಿಗಳಾಗುತ್ತಿದ್ದಾರೆ. ಇದು ನೇರ ಹಣಾಹಣಿಯ ಚುನಾವಣೆಯಾಗಿದ್ದು, ದೇಶದ ಸಮರ್ಥ ನಾಯಕತ್ವಕ್ಕೆ ನಾವು ಚುನಾವಣೆ ಎದುರಿಸುತ್ತಿದ್ದೇವೆ ಎಂದು ಕುಮಾರ್ ಬಂಗಾರಪ್ಪ ಹೇಳಿದ್ದಾರೆ.

ಕುಮಾರ್ ಬಂಗಾರಪ್ಪ
author img

By

Published : Mar 20, 2019, 1:10 PM IST

ಶಿವಮೊಗ್ಗ: ಜಿಲ್ಲೆಯು ಮತ್ತೊಂದು ಲೋಕಸಭಾ ಚುನಾವಣೆಗೆ ಸಾಕ್ಷಿಯಾಗಲಿದೆ. ಈ ನಡುವೆ ಮತ್ತೊಮ್ಮೆ ಮಾಜಿ ಸಿಎಂ ಪುತ್ರರು ಎದುರಾಳಿಗಳಾಗುತ್ತಿದ್ದಾರೆ. ಇದರ ಬಗ್ಗೆ ಸೊರಬ ಕ್ಷೇತ್ರದ ಶಾಸಕ, ಮೈತ್ರಿ ಪಕ್ಷದ ಅಭ್ಯರ್ಥಿಗಳ ಸಹೋದರರಾದ ಕುಮಾರ್ ಬಂಗಾರಪ್ಪ ಪ್ರತಿಕ್ರಿಯಿಸಿದ್ದಾರೆ.

ಕುಮಾರ್ ಬಂಗಾರಪ್ಪ

ಹಾಲಿ ಸಂಸದ ಹಾಗೂ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪನವರ ಹಣಾಹಣಿ ಕುರಿತು ಪ್ರತಿಕ್ರಿಯಿಸಿದ ಕುಮಾರ್ ಬಂಗಾರಪ್ಪ, ಇದು ನೇರ ಹಣಾಹಣಿಯ ಚುನಾವಣೆಯಾಗಿದ್ದು, ದೇಶದ ಸಮರ್ಥ ನಾಯಕತ್ವಕ್ಕೆ ನಾವು ಚುನಾವಣೆ ಎದುರಿಸುತ್ತಿದ್ದೇವೆ. ನಮ್ಮದು ಕುಟುಂಬದ ಸಂಬಂಧಗಳನ್ನು ಮೀರಿ ನಡೆಸುತ್ತಿರುವ ಚುನಾವಣೆಯಾಗುತ್ತದೆ.

ಉಪ ಚುನಾವಣೆಯಾದ ಕಾರಣ ಮತಗಳ ಅಂತರ ಕಡಿಮೆಯಾಗಿತ್ತು. ಈ ಬಾರಿ ಎರಡು ಲಕ್ಷ ಮತಗಳ ಅಂತರದಿಂದ ರಾಘವೇಂದ್ರ ಗೆಲುವು ಸಾಧಿಸುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಜಿಲ್ಲೆಯ ನಾಯಕರ ಮೇಲೆ ನಂಬಿಕೆ ಕಳೆದುಕೊಂಡಿರುವ ಮಧು ಬಂಗಾರಪ್ಪನವರು ಡಿ.ಕೆ.ಶಿವಕುಮಾರ್ ಚುನಾವಣೆ ನಡೆಸಲು ಬರಬೇಕು ಎಂದು ಹೇಳುತ್ತಿದ್ದಾರೆ ಎಂದು ಗೇಲಿ ಮಾಡಿದರು.

Intro:ಶಿವಮೊಗ್ಗ ಮತ್ತೊಂದು ಲೋಕಸಭ ಚುನಾವಣೆಗೆ ಸಾಕ್ಷಿಯಾಗಲಿದೆ. ಈ ನಡುವೆ ಮತ್ತೊಮ್ಮೆ ಮಾಜಿ ಸಿಎಂ ಪುತ್ರರು ಮತ್ತೆ ಎದುರಾಳಿಗಳಾಗುತ್ತಿದ್ದಾರೆ. ಸೊರಬ ಕ್ಷೇತ್ರದ ಶಾಸಕರು ಮೈತ್ರಿ ಪಕ್ಷದ ಅಭ್ಯರ್ಥಿಗಳ ಸಹೋದರಾದ ಕುಮಾರ್ ಬಂಗಾರಪ್ಪನವರ ಜೊತೆ ನಮ್ಮ ಪ್ರತಿನಿಧಿ ಕಿರಣ್ ಕುಮಾರ್ ನಡೆಸಿರುವ ಚಿಟ್ ಚಾಟ್ ಇಲ್ಲಿದೆ.

Body:ಹಾಲಿ ಸಂಸದ ಹಾಗೂ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪನವರ ಹಣಾಹಣಿ ಕುರಿತ ಪ್ರಶ್ನೆಗೆ ಕುಂ ಬಂ ರವರು ಇದು ನೇರ ಹಣಾಹಣಿಯ ಚುನಾವಣೆಯಾಗಿದ್ದು, ದೇಶದ ಸಮರ್ಥ ನಾಯಕತ್ವಕ್ಕೆ ನಾವು ಚುನಾವಣೆ ಎದುರಿಸುತ್ತಿದ್ದೆವೆ. ನಮ್ಮದು ಕುಟುಂಬದ ಸಂಬಂಧಗಳನ್ನು ಮೀರಿ ನಡೆಸುತ್ತಿರುವ ಚುನಾವಣೆಯಾಗುತ್ತದೆ.

Conclusion:ಉಪ ಚುನಾವಣೆಯಾದ ಕಾರಣ ಮತಗಳ ಅಂತರ ಕಡಿಮೆಯಾಗಿತ್ತು. ಈ ಬಾರಿ ಎರಡು ಲಕ್ಷಗಳ ಅಂತರದಿಂದ ರಾಘವೇಂದ್ರ ಗೆಲುವು ಸಾಧಿಸುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಜಿಲ್ಲೆಯ ನಾಯಕರ ಮೇಲೆ ನಂಬಿಕೆ ಕಳೆದು ಕೊಂಡಿರುವ ಮಧು ಬಂಗಾರಪ್ಪನವರು ಡಿ.ಕೆ.ಶಿವಕುಮಾರ್ ಚುನಾವಣೆ ನಡೆಸಲು ಬರಬೇಕು ಎಂದು ಹೇಳುತ್ತಿದ್ದಾರೆ ಎಂದು ಗೇಲಿ ಮಾಡಿದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.