ETV Bharat / state

ತುಂಗೆಗೆ ಬಾಗಿನ ಸಮರ್ಪಿಸಿದ ಕೆ.ಎಸ್​. ಈಶ್ವರಪ್ಪ - ತುಂಗಾ ನದಿಗೆ ಪೊಜೆ

ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಲ್ಲೂ ತೀವ್ರ ಮಳೆಯಾಗುತ್ತಿದ್ದು, ಕೆಲವೆಡೆ ಪ್ರವಾಹ, ಕೆಲವೆಡೆ ನೀರು ಇಲ್ಲದಂತಾಗಿದೆ. ಆದ್ದರಿಂದ ಯಾವ ಪ್ರದೇಶಕ್ಕೆ ಎಷ್ಟು ಮಳೆ ಅವಶ್ಯಕತೆ ಇದೆಯೋ ಅಷ್ಟೇ ಮಳೆಯಾಗಲಿ ಎಂದು ಪ್ರಾರ್ಥಿಸಿದ ಕೆ.ಎಸ್​. ಈಶ್ವರಪ್ಪ ತುಂಗಾ ನದಿಗೆ ಕುಟುಂಬ ಸಮೇತರಾಗಿ ಆಗಮಿಸಿ ಬಾಗಿನ ಅರ್ಪಿಸಿದರು

ತುಂಗೆಗೆ ಬಾಗಿನ ಅರ್ಪಿಸಿದ ಈಶ್ವರಪ್ಪ ಮತ್ತು ಕುಟುಂಬ
author img

By

Published : Aug 6, 2019, 5:53 PM IST

Updated : Aug 6, 2019, 7:27 PM IST

ಶಿವಮೊಗ್ಗ: ಆಶ್ಲೇಷ ಮಳೆಯಿಂದ ತುಂಬಿ ಹರಿಯುತ್ತಿರುವ ತುಂಗಾ ನದಿಗೆ ಶಾಸಕ ಕೆ.ಎಸ್.ಈಶ್ವರಪ್ಪ ತಮ್ಮ ಕುಟುಂಬ ಸಮೇತರಾಗಿ ಬಂದು ಬಾಗಿನ ಅರ್ಪಿಸಿದ್ದಾರೆ.

ತುಂಗೆಗೆ ಬಾಗಿನ ಅರ್ಪಿಸಿದ ಈಶ್ವರಪ್ಪ ಮತ್ತು ಕುಟುಂಬ

ನಗರದ ಕೊರ್ಪಲಯ್ಯನ ಛತ್ರದ ಬಳಿ ಈಶ್ವರಪ್ಪ‌ ತಮ್ಮ ಪತ್ನಿ ಜಯಲಕ್ಷ್ಮಿ, ಸೊಸೆ ಶಾಲಿನಿ ಹಾಗೂ‌ ಮೊಮ್ಮಗನ ಜೊತೆ ಸೇರಿ‌ ತುಂಗಾ ನದಿಗೆ ಪೊಜೆ ಸಲ್ಲಿಸಿ ಬಾಗಿನ ಅರ್ಪಿಸಿದ್ದಾರೆ. ತುಂಗೆ ಬಾಗಿನ ಅರ್ಪಿಸಿದ ನಂತರ ಮಾತನಾಡಿದ ಈಶ್ವರಪ್ಪ, ಈ ವರ್ಷ ತಡವಾದರೂ ತುಂಗೆ ತುಂಬಿ ಹರಿಯುತ್ತಿದ್ದಾಳೆ. ಇದು ಎಲ್ಲರಿಗೂ ಸಂತೋಷ ತಂದಿದೆ. ಮಳೆ ಶಿವಮೊಗ್ಗ ಮಾತ್ರವಲ್ಲದೇ ರಾಜ್ಯಾದ್ಯಂತ ಸುರಿಯುತ್ತಿದೆ. ಅಲ್ಲದೇ ಇತರ ರಾಜ್ಯಗಳಲ್ಲೂ ಸಹ ಮಳೆ ಸಾಕಷ್ಟು ಹಾನಿಯನ್ನುಂಟು ಮಾಡಿದೆ. ಕಳೆದ ತಿಂಗಳು ಮಳೆ ಇಲ್ಲದೇ ಸಾಕಷ್ಟು ಸಮಸ್ಯೆಯನ್ನುಂಟು ಮಾಡಿ ಬರದ ಪರಿಸ್ಥಿತಿ ಇತ್ತು. ಈಗ ನೋಡಿದರೆ ಪ್ರವಾಹದ ಪರಿಸ್ಥಿತಿ ಬಂದಿದೆ. ಆದ್ದರಿಂದ ಎಲ್ಲಿ, ಎಷ್ಟು ಬೇಕೋ ಅಷ್ಟು ಮಳೆ ಸುರಿಸಪ್ಪ ಅಂತ ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದರು.

Intro:ಅಶ್ಲೇಷ ಮಳೆಯಿಂದ ತುಂಬಿ ಹರಿಯುತ್ತಿರುವ ತುಂಗಾ ನದಿಗೆ ಶಾಸಕ ಕೆ.ಎಸ್.ಈಶ್ವರಪ್ಪನವರು ತಮ್ಮ ಕುಟುಂಬ ಸಮೇತ ಬಾಗಿನ ಅರ್ಪಿಸಿದ್ದಾರೆ. ನಗರದ ಕೊರ್ಪಲಯ್ಯನ ಛತ್ರದ ಬಳಿ ಈಶ್ವರಪ್ಪ‌ನವರು ತಮ್ಮ ಪತ್ನಿ ಜಯಲಕ್ಷ್ಮಿ, ಸೊಸೆ ಶಾಲಿನಿ ಹಾಗೂ‌ ಮೊಮ್ಮಗನ ಜೊತೆ ಸೇರಿ‌ ತುಂಗಾ ನದಿಗೆ ಪೊಜೆ ಸಲ್ಲಿಸಿ ಬಾಗಿನ ಅರ್ಪಿಸಿದ್ದಾರೆ. ನಗರದ ಮಂಟಪ‌ ತುಂಬಿ ಹರಿದರೆ ಶಾಸಕ ಈಶ್ವರಪ್ಪ ಅಧಿಕಾರದಲ್ಲಿ ಇರಲಿ , ಬಿಡಲಿ ತುಂಗೆ ಬಾಗಿನ ಅರ್ಪಿಸುತ್ತಾರೆ.

Body:ತುಂಗೆ ಬಾಗಿನ ಅರ್ಪಿಸಿದ ನಂತ್ರ ಮಾತನಾಡಿದ ಈಶ್ವರಪ್ಪನವರು, ಈ ವರ್ಷ ತುಂಗಾ ನದಿ ತಡವಾದ್ರೂ ಸಹ ತುಂಬಿ ಹರಿಯುತ್ತಿದ್ದಾಳೆ. ಇದು ಎಲ್ಲಾರಿಗೂ ಸಂತೋಷ ತಂದಿದೆ. ಮಳೆ ಶಿವಮೊಗ್ಗ ಅಷ್ಟೆ ಅಲ್ಲದೆ ರಾಜ್ಯಾದ್ಯಾಂತ ಸುರಿಯುತ್ತಿದೆ. ಅಲ್ಲದೆ ಇತರೆ ರಾಜ್ಯಗಳಲ್ಲೂ ಸಹ ಮಳೆ ಸಾಕಷ್ಟು ಹಾನಿಯನ್ನುಂಟು ಮಾಡಿದೆ. ಕಳೆದ ತಿಂಗಳು ಮಳೆ ಇಲ್ಲದೆ ಸಾಕಷ್ಟು ಸಮಸ್ಯೆಯನ್ನುಂಟು ಮಾಡಿ ಬರದ ಪರಿಸ್ಥಿತಿ ಇತ್ತು. ಈಗ ನೋಡಿದ್ರ ಪ್ರವಾಹದ ಪರಿಸ್ಥಿತಿ ಬಂದಿದೆ. ಇದರಿಂದ ಎಲ್ಲಿ, ಎಷ್ಟು ಬೇಕೂ ಅಷ್ಟು ಮಳೆಯನ್ನು ಸುರಿಸಪ್ಪ ಅಂತ ದೇವರಲ್ಲಿ ಪ್ರಾರ್ಥನೆ ಮಾಡಿದ್ದೆನೆ ಎಂದರು.

Conclusion:ಬಾಗಿನ ಅರ್ಪಣೆ ಮಾಡುವ ವೇಳೆ ಪಾಲಿಕೆಯ ಬಿಜೆಪಿ ಸದಸ್ಯರು ಹಾಗೂ ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹಾಜರಿದ್ದರು.

ಬೈಟ್: ಕೆ.ಎಸ್.ಈಶ್ವರಪ್ಪ. ಶಾಸಕರು. ಶಿವಮೊಗ್ಗ.

ಕಿರಣ್ ಕುಮಾರ್. ಶಿವಮೊಗ್ಗ.
Last Updated : Aug 6, 2019, 7:27 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.