ETV Bharat / state

ಬರೀ ಟೀಕೆಯಲ್ಲ ನಾವು ಮಾಡಿದ ಕೆಲಸವನ್ನೂ ಸ್ವೀಕರಿಸಲಿ : ಸಚಿವ ಕೆ ಎಸ್‌ ಈಶ್ವರಪ್ಪ ಕಿವಿಮಾತು - ಸಚಿವ ಕೆ.ಎಸ್ ಈಶ್ವರಪ್ಪ

ಇಡೀ ದೇಶಕ್ಕೆ ಉಚಿತ ಲಸಿಕೆ ನೀಡುವುದನ್ನು ಇವರ್ಯಾರೂ ಸ್ವೀಕಾರ ಮಾಡ್ತಿಲ್ಲ. ಅವರು ಅಧಿವೇಶನ ಕರೆಯಿರಿ ಅಂತ ಕೇಳಿದ್ದಾರೆ. ಅದರಲ್ಲಿ ಯಾವುದೇ ತಪ್ಪಿಲ್ಲ. ಮುಖ್ಯಮಂತ್ರಿಗಳು ಈ ಬಗ್ಗೆ ಕ್ರಮಕೈಗೊಳ್ಳುತ್ತಾರೆ..

ಕೆ.ಎಸ್ ಈಶ್ವರಪ್ಪ
ಕೆ.ಎಸ್ ಈಶ್ವರಪ್ಪ
author img

By

Published : Jun 25, 2021, 6:12 PM IST

ಶಿವಮೊಗ್ಗ : ವಿರೋಧ ಪಕ್ಷದವರ ಟೀಕೆಗಳನ್ನು ಒಳ್ಳೆಯ ಸಲಹೆ ಅಂತ ಸ್ವೀಕಾರ ಮಾಡಿ ಇನ್ನೂ ಒಳ್ಳೆಯ ಆಡಳಿತ ಕೊಡುವ ದಿಕ್ಕಿನಲ್ಲಿ ಪ್ರಯತ್ನ ಮಾಡುತ್ತೇವೆ ಎಂದು ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ. ತುರ್ತು ಅಧಿವೇಶನ ಕರೆಯುವಂತೆ ಮಾಜಿ ಸಿಎಂ ಕುಮಾರಸ್ವಾಮಿ ಪತ್ರ ಬರೆದಿರುವ ವಿಚಾರವಾಗಿ ಅವರು ನಗರದಲ್ಲಿ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಬರೀ ಟೀಕೆಯಲ್ಲ ನಾವು ಮಾಡಿದ ಕೆಲಸವನ್ನೂ ಸ್ವೀಕರಿಸಲಿ : ಸಚಿವ ಈಶ್ವರಪ್ಪ ಕಿವಿಮಾತು

ಆಡಳಿತದಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ. ವಿರೋಧ ಪಕ್ಷವಾಗಿ ಡಿಕೆಶಿ, ಸಿದ್ದರಾಮಯ್ಯ, ಕುಮಾರಸ್ವಾಮಿ ಅವರು ಹೇಳಿಕೆ ಕೊಡಬೇಕು, ಅದಕ್ಕೆ ಹೇಳಿಕೆ ಕೊಡ್ತಿದ್ದಾರೆ ಅಷ್ಟೇ ಎಂದರು. ಕೋವಿಡ್ ಸಂದರ್ಭದಲ್ಲಿ 2ನೇ ಅಲೆ ನಿಭಾಯಿಸುವ ಕೆಲಸ ರಾಜ್ಯ ಸರ್ಕಾರ ಮಾಡಿದೆ. ಕಳೆದ ಎರಡು ದಿನದ ಹಿಂದೆ ಒಂದೇ ದಿನ 11 ಲಕ್ಷ ಲಸಿಕೆ ನೀಡಿದೆವು.

ಇಡೀ ಭಾರತದಲ್ಲಿಯೇ ಕರ್ನಾಟಕ ಕೋವಿಡ್ ತಡೆಯುವಲ್ಲಿ ಯಶಸ್ವಿಯಾಗಿದೆ. ಇದನ್ನ ಅವರು ಹೇಳಲಿ. ಬರೀ ಟೀಕೆ ಮಾಡುವುದು ಅಷ್ಟೇ ಅಲ್ಲ.. ಇಡೀ ದೇಶಕ್ಕೆ ಉಚಿತ ಲಸಿಕೆ ನೀಡುವುದನ್ನು ಇವರ್ಯಾರೂ ಸ್ವೀಕಾರ ಮಾಡ್ತಿಲ್ಲ ಎಂದರು. ಅವರು ಅಧಿವೇಶನ ಕರೆಯಿರಿ ಅಂತ ಕೇಳಿದ್ದಾರೆ. ಅದರಲ್ಲಿ ಯಾವುದೇ ತಪ್ಪಿಲ್ಲ. ಮುಖ್ಯಮಂತ್ರಿಗಳು ಈ ಬಗ್ಗೆ ಕ್ರಮಕೈಗೊಳ್ಳುತ್ತಾರೆ ಎಂದು ಸಮಜಾಯಿಷಿ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.