ಶಿವಮೊಗ್ಗ : ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿವೆ. ಜಿಲ್ಲಾ ಉಸ್ತುವಾರಿ ಸಚಿವ ಕೆ ಎಸ್ ಈಶ್ವರಪ್ಪ ನಗರದಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಇಲ್ಲಿನ ಗಾಂಧಿ ಬಜಾರ್ಗೆ ತೆರಳಿದ ಈಶ್ವರಪ್ಪ ಅಗತ್ಯವಿರುವವರಿಗೆ ಮಾಸ್ಕ್ ವಿತರಿಸಿ ಜಾಗೃತಿ ಮೂಡಿಸಿದರು.
ಈ ವೇಳೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಕೊರೊನಾ ಹತೋಟಿಯಲ್ಲಿದೆ. ನಾಳೆಯಿಂದ 2ದಿನ ಕರ್ಫ್ಯೂ ಇರುವುದರಿಂದ ಎಲ್ಲರು ಮನೆಯಲ್ಲಿ ಇರಬೇಕು. ಸಾಯ್ಬೇಕೋ, ವ್ಯಾಪಾರ ಮಾಡ್ಬೇಕೋ ಅನ್ನೋದನ್ನ ಅವರೇ ತೀರ್ಮಾನ ಮಾಡಲಿ ಎಂದರು.
ಮನೆಯವರ ಜೊತೆ ಸಮಯ ಕಳೆಯಿರಿ, ಮನೆಯಲ್ಲಿದ್ದು ಸಹಕರಿಸಿ. ವ್ಯಾಪಾರಕ್ಕೂ ಸಮಸ್ಯೆಯಾಗುತ್ತದೆ. ವ್ಯಕ್ತಿ ಬದುಕ್ಕಿದ್ದರೆ ತಾನೇ ನಾಳೆ ವ್ಯಾಪಾರ ಮಾಡಬಹುದು.
ಕೋವಿಡ್ ಆಗಿ ಆಸ್ಪತ್ರೆ ಹೋಗಿ ಏನು ಸಿಗದೆ ಸತ್ತರೆ ಅದು ಒಳ್ಳೆಯದೋ ಅಥವಾ ಮನೆಯಲ್ಲಿದ್ದು ಮಕ್ಕಳ ಜೊತೆ 2 ದಿನ ಸಂತೋಷವಾಗಿ ಇರುವುದು ಒಳ್ಳೆಯದೋ ಎಂದರು.
ಇದನ್ನೂ ಓದಿ: ವಿದೇಶದಿಂದ 2 ಲಕ್ಷ ರೆಮ್ಡೆಸಿವಿರ್ ಖರೀದಿಗೆ ಅನುಮತಿ ಕೋರಿ ಕೇಂದ್ರಕ್ಕೆ ಪತ್ರ: ಸಚಿವ ಸುಧಾಕರ್