ಶಿವಮೊಗ್ಗ : ಜಮೀರ್ ಅಹ್ಮದ್ ರಕ್ತದಲ್ಲೇ ಮುಸ್ಲಿಮರ ಪರ, ಹಿಂದೂಗಳ ವಿರೋಧ ಅಭಿಪ್ರಾಯ ಇದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಜಮೀರ್ ಅಹ್ಮದ್ ವಿರುದ್ಧ ಆರೋಪ ಮಾಡಿದರು.
ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಜಮೀರ್ ಅಹ್ಮದ್ ಅವರು ಮುಸ್ಲಿಂ ನಾಯಕರಾಗೋಕೆ ಆಗೊಮ್ಮೆ ಈಗೊಮ್ಮೆ ಎಂದು ಹೋಗ್ತಾರೆ. ಬೆಂಗಳೂರಿನಲ್ಲಿ ಡಿ.ಜೆ. ಹಳ್ಳಿ ಗಲಭೆ ಆದಾಗ ನಾಯಕತ್ವ ವಹಿಸಿದ್ದು ಅವರೇ ತಾನೆ.
ಇದನ್ನು ನಾನು ಹೇಳುತ್ತಿಲ್ಲ, ಬದಲಾಗಿ ಅವರದ್ದೇ ಕಾಂಗ್ರೆಸ್ ಪಕ್ಷದ ಎಂಎಲ್ಎ ಅಖಂಡ ಶ್ರೀನಿವಾಸ್ ಆರೋಪ ಮಾಡಿದ್ದರು. ಅದಕ್ಕೆ ಮೊದಲು ಉತ್ತರಿಸಲಿ ಎಂದು ಹೇಳಿದರು.
ಜಮೀರ್ ಅಹ್ಮದ್ ರಕ್ತದಲ್ಲೇ ಮುಸ್ಲಿಮರ ಪರ, ಹಿಂದೂ ವಿರೋಧ ಇದೆ. ಅವರಿಗೆ ಬೇರೆ ಕೆಲಸವೇ ಇಲ್ಲ, ಮುಸ್ಲಿಮರನ್ನು ಎತ್ತಿಕಟ್ಟಿ ಬಾಯಿಗೆ ಬಂದಂತೆ ಮಾತನಾಡುವ ಕೆಲಸ ಮಾಡುತ್ತಾರೆ.
ತೇಜಸ್ವಿ ಸೂರ್ಯರವರ ಬಗ್ಗೆ ಮಾತನಾಡಿರುವ ಪದಗಳನ್ನು ನಾನು ಗಮನಿಸಿದ್ದೇನೆ. ನಾನು ಅಂತಹ ಪದಗಳನ್ನು ಬಳಸಲು ಇಷ್ಟ ಪಡಲ್ಲ ಎಂದರು.
ಇದನ್ನೂ ಓದಿ: ನೀವು ಯಡಿಯೂರಪ್ಪ ಅವರಿಗೆ ರಾಜೀನಾಮೆ ಕೇಳಬೇಕು ಅಲ್ವಾ?: ತೇಜಸ್ವಿಗೆ ಜಮೀರ್ ಅಹ್ಮದ್ ಪ್ರಶ್ನೆ!
ಜಮೀರ್ ಅಹ್ಮದ್ ಹಾಗೂ ಡಿ.ಕೆ. ಶಿವಕುಮಾರ್ ಅವರಿಗೆ ಹೇಳೋದೇನು ಅಂದರೆ ನೀವು ಮುಸ್ಲಿಮರ ಪರ ಇರಿ. ಆದ್ರೆ, ಹಿಂದೂಗಳು ಸಹ ನಿಮಗೆ ವೋಟ್ ಹಾಕಿ ಗೆಲ್ಲಿಸಿದ್ದಾರೆ. ಅವರ ಅನ್ನವನ್ನು ನೀವು ತಿಂದಿದ್ದೀರಿ. ಇದನ್ನು ನೆನಪಿಟ್ಟುಕೊಳ್ಳಿ.
ಸಂಸದ ತೇಜಸ್ವಿ ಸೂರ್ಯ ಹಾಗೂ ನನ್ನ ಬಗ್ಗೆ ಮಾತನಾಡುತ್ತಾರೆ. ನಮಗೂ ಅವರಿಂತ ಕೆಟ್ಟ ಭಾಷೆ ಮಾತನಾಡಲು ಬರುತ್ತೆ. ಆದ್ರೆ, ನಾನು ಮಾತನಾಡಲ್ಲ. ಹಾಗಾಗಿ, ಡಿ.ಕೆ ಶಿವಕುಮಾರ್ ಹಾಗೂ ಜಮೀರ್ ಅಹ್ಮದ್ ನಾಲಿಗೆ ಬಿಗಿ ಹಿಡಿದು ಮಾತನಾಡಲಿ ಎಂದು ಗುಡುಗಿದರು.