ಶಿವಮೊಗ್ಗ: ಜೀವವೈವಿಧ್ಯ ನಾಶದಿಂದ ಪರಿಸರ ಹಾಳಾಗುತ್ತಿವೆ. ಪರಸರದ ಕೊಂಡಿ ಕಳಚಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಇಡೀ ಜೀವಸಂಕುಲವೇ ಒಂದಕ್ಕೊಂದು ಅವಲಂಬಿಸಿದೆ. ಇದು ಸುಸ್ಥಿರವಾಗಿದ್ದರೆ ಮಾತ್ರ ಜೀವ ಜಗತ್ತು ಉಳಿಯುತ್ತದೆ. ಇಲ್ಲದಿದ್ದರೆ ನಾಶ ಖಂಡಿತ. ಆದ್ದರಿಂದ ಮನುಷ್ಯ ತನ್ನೆಲ್ಲಾ ದುರಾಸೆಗಳನ್ನು ಬಿಟ್ಟು ಪರಿಸರ ಉಳಿಸಬೇಕು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಅವರು ಆಲ್ಕೊಳದ ಚಂದನವನದಲ್ಲಿ ವಿಶ್ವ ಜೀವವೈವಿದ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಜಿಲ್ಲೆಯ ಎಲ್ಲ ತಾಲ್ಲೂಕುಗಳ 271 ಗ್ರಾಮ ಪಂಚಾಯಿತಿಗಳಲ್ಲಿ ಜೀವವೈವಿಧ್ಯ ನಿರ್ವಹಣಾ ಸಮಿತಿಗಳು ರಚನೆಯಾಗಿದ್ದು, 181 ಜೀವವೈವಿಧ್ಯ ಸಂಪನ್ಮೂಲಗಳ ದಾಖಲೆ ಪ್ರಕ್ರಿಯೆ ಮುಗಿದಿದೆ ಎಂದರು.
ಅರಣ್ಯ ಅಧಿಕಾರಿ ಆರ್.ರವಿಶಂಕರ್, ಜಿ.ಪಂ. ಸದಸ್ಯ ಕೆ.ಇ. ಕಾಂತೇಶ್, ಮೇಯರ್ ಸುವರ್ಣಾ ಶಂಕರ್, ಉಪಮೇಯರ್ ಸುರೇಖಾ ಮುರಳೀಧರ್, ವೀರಭದ್ರಪ್ಪ ಪೂಜಾರ್, ಜಿಪಂ ಸಿಇಓ ಎಂ.ಎಲ್. ವೈಶಾಲಿ, ಗೀತಾಬಾಯಿ ಸೇರಿದಂತೆ ಹಲವರಿದ್ದರು.