ETV Bharat / state

ಪಾದಯಾತ್ರೆಯಲ್ಲಿ ಪ್ರಾಮಾಣಿಕತೆ ಇಲ್ಲ: ಸಿಟಿ ರವಿ

ತಮಿಳುನಾಡು ಸರ್ಕಾರ ಒಪ್ಪಿದರೆ ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರನ್ನು ಕರೆದುಕೊಂಡೇ ಮುಖ್ಯಮಂತ್ರಿಗಳು ಈ ಯೋಜನೆಯ ಅಡಿಗಲ್ಲು ಹಾಕುತ್ತಾರೆ...

There is no honesty in hiking c t ravi
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ
author img

By

Published : Feb 28, 2022, 8:26 PM IST

ಶಿವಮೊಗ್ಗ: ಕಾಂಗ್ರೆಸ್​ನವರ ಮೇಕೆದಾಟು ಪಾದಯಾತ್ರೆಯಲ್ಲಿ ಪ್ರಾಮಾಣಿಕತೆ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಆರೋಪಿಸಿದ್ದಾರೆ.

ಪಾದಯಾತ್ರೆಯಲ್ಲಿ ಪ್ರಾಮಾಣಿಕತೆ ಇಲ್ಲ: ಸಿಟಿ ರವಿ

ಶಿವಮೊಗ್ಗದಲ್ಲಿ ಮೇಕೆದಾಟು ಪಾದಯಾತ್ರೆ ಕುರಿತು ಸುದ್ದಿಗಾರರೊಂದಿಗ ಮಾತನಾಡಿದ ಅವರು ಈ ಪಾದಯಾತ್ರೆಯಲ್ಲಿ ಪ್ರಾಮಾಣಿಕತೆ ಇದ್ದಿದ್ದರೆ ಡಿಪಿಆರ್ ತಯಾರಿಸಲು ಆರು ವರ್ಷ ತೆಗೆದುಕೊಳ್ಳುತ್ತಿರಲಿಲ್ಲ. ರಾಜ್ಯ ಸರ್ಕಾರ ಮೇಕೆದಾಟು ಯೋಜನೆಗೆ ತುದಿಗಾಲಲ್ಲಿ ನಿಂತಿದೆ ಕೇಂದ್ರ ಸರ್ಕಾರವು ಒಪ್ಪಿಗೆ ನೀಡಿದೆ ಎಂದರು.

ಈ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ತಡವಾಗುತ್ತಿದೆ. ಇವರು ಪ್ರತಿಭಟನೆ ಮಾಡುವ ಬದಲು ಸೋನಿಯಾ ಗಾಂಧಿ ಮನೆಯ ಮುಂದೆ ಹೋಗಿ ತಮಿಳುನಾಡು ಸರ್ಕಾರದ ಜೊತೆ ಮಾತನಾಡಲು ಹೇಳಲಿ. ಈ ಪಾದಯಾತ್ರೆ ಕೇವಲ ಬೂಟಾಟಿಕೆ ಎಂದು ಟೀಕಿಸಿದರು.

ತಮಿಳುನಾಡು ಚುನಾವಣೆ ಆದಾಗ ಡಿಕೆಶಿ,ಸಿದ್ದರಾಯಮಯ್ಯ ಹಣ ಬಲ, ತೋಳ್ಬಲ ತೊರಿಸಿದ್ದಾರೆ ಹಾಗಾಗಿ ತಮಿಳುನಾಡಿನ ಮುಖ್ಯಮಂತ್ರಿಗಳ ಮನವೊಲಿಸಲಿ. ನಮ್ಮ ಸರ್ಕಾರ ಈ ಯೋಜನೆ ಮಾಡಲು ತಯಾರಿದೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರನ್ನು ಕರೆದುಕೊಂಡೇ ಮುಖ್ಯಮಂತ್ರಿಗಳು ಈ ಯೋಜನೆಯ ಅಡಿಗಲ್ಲು ಹಾಕುತ್ತಾರೆ ಎಂದರು.

ಇದನ್ನೂ ಓದಿ: ನಾನು ಪಕ್ಷ ಹೇಳಿದರೆ ಸ್ಥಾನ ಬಿಟ್ಟುಕೊಡ್ತೇನಿ.. ಹರಿಪ್ರಸಾದ್​​​ ಇಬ್ರಾಹಿಂಗೆ ಜಾಗ ಬಿಟ್ಟುಕೊಡ್ತಾರಾ?: ಈಶ್ವರಪ್ಪ ಸವಾಲು

For All Latest Updates

TAGGED:

shimogga
ETV Bharat Logo

Copyright © 2024 Ushodaya Enterprises Pvt. Ltd., All Rights Reserved.