ಶಿವಮೊಗ್ಗ: ಬೆಂಗಳೂರಲ್ಲಿ ಕಮಿಷನರ್ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗುತ್ತಿದೆ. ರಾಜ್ಯಾದ್ಯಂತ ಕಾನೂನು ಸುವ್ಯವಸ್ಥೆ ನಿಭಾಯಿಸಲು ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಹ ಈಗ ಬೆಂಗಳೂರಿಗೆ ಹೊರಟಿದ್ದೇನೆ. ಅಭಿಮಾನಿಗಳು ಭಾವುಕತೆಗೆ ಒಳಗಾಗುವ ಸಾಧ್ಯತೆಗಳು ಇರುತ್ತೇ ಹಾಗಾಗಿ ಪರಿಸ್ಥಿತಿ ನಿಭಾಯಿಸಲು ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ. ಅಪಾರ ಜನಮನ್ನಣೆ ಗಳಿಸಿದ ಅವರು ಮಲೆನಾಡು ಸಾಗರ , ತೀರ್ಥಹಳ್ಳಿ ಭಾಗದಲ್ಲಿ ಅನೇಕು ಬಂಧು ಮಿತ್ರರ ಹೊಂದಿದ್ದಾರೆ.
ಚಲನಚಿತ್ರದ ಜೊತೆಗೆ ಸಮಾಜ ಸೇವೆಯಲ್ಲಿಯೂ ತಮ್ಮ ಸೇವೆ ಸಲ್ಲಿಸಿದ್ದಾರೆ. ಮಲೆನಾಡು ಭಾಗದಲ್ಲಿ ಚಿತ್ರೀಕರಣಕ್ಕೆ ಬಂದಾಗ ಭೇಟಿಯಾಗಿ ಹೊಗುತ್ತಿದ್ದರು ಎಂದರು. ಅಭಿಮಾನಿಗಳು ಕಾನೂನು ಸುವ್ಯವಸ್ಥೆಗೆ ಯಾವುದೇ ದಕ್ಕೆಯಾಗದಂತೆ ತಾಳ್ಮೆಯಿಂದರಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದರು.
ರಜೆಯಲ್ಲಿದ್ದ ಪೊಲೀಸರಿಗೆ ಬುಲಾವ್
ನಗರ ಪೊಲೀಸ್ ಆಯುಕ್ತರ ಸೂಚನೆಯಂತೆ. ಬಹುತೇಕ ನಗರದ ಎಲ್ಲ ಪೊಲೀಸರು ಭದ್ರತೆಗಾಗಿ ನಿಯೋಜಿಸಲಾಗಿದೆ. ಜೊತೆಗೆ ತುರ್ತು ರಜೆ ಹೊರತುಪಡಿಸಿ ಉಳಿದಂತೆ ರಜೆ ಮೇಲಿದ್ದ ಎಲ್ಲ ಪೊಲೀಸರಿಗೂ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.
ಹಾಲಪ್ಪ ಆಚಾರ ಸಂತಾಪ
ನಟ ಪುನೀತ್ ರಾಜಕುಮಾರ್ ನಿಧನಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಹಾಲಪ್ಪ ಆಚಾರ ಸಂತಾಪ ಸೂಚಿಸಿದ್ದಾರೆ. ಕೊಪ್ಪಳದಲ್ಲಿ ಮಾತನಾಡಿರುವ ಹಾಲಪ್ಪ ಆಚಾರ್, ಈ ದಿನ ಕರಾಳ ದಿನ ಎಂಬ ಭಾವನೆ ಬರ್ತಿದೆ. ಯುವ ಪ್ರತಿಭಾವಂತ ನಟನನ್ನು ನಾವು ಕಳೆದುಕೊಂಡಿದ್ದೇವೆ. ಹೃದಯಾಘಾತದಿಂದ ಆಕಸ್ಮಿಕವಾಗಿ ಅಗಲಿಕೆ ನೋವು ತಂದಿದೆ.
ಪುನೀತ್ ರಾಜಕುಮಾರ್ ಒಬ್ಬ ಅಪ್ರತಿಮ ಕಲಾವಿದ. ಅವರ ತಂದೆಯಷ್ಟೇ ಪ್ರತಿಭೆ ಪುನೀತ್ ರಾಜಕುಮಾರಗೆ ಇತ್ತು. ಯುವ ಪ್ರತಿಭೆಯನ್ನು ಕಳೆದುಕೊಂಡಿದ್ದು ಕರ್ನಾಟಕ ಕಲಾ ಕ್ಷೇತ್ರಕ್ಕೆ ಆಘಾತವಾಗಿದೆ. ಇಡೀ ರಾಜ್ಯದ ಕಲಾ ಅಭಿಮಾನಿಗಳಿಗೆ ದೇವರು ದುಃಖ ಸಹಿಸುವ ಶಕ್ತಿ ನೀಡಲಿ. ಪುನೀತ್ ಕುಟುಂಬಕ್ಕೂ ದುಃಖ ಸಹಿಸುವ ಶಕ್ತಿ ದೇವರು ನೀಡಲಿ ಎಂದಿದ್ದಾರೆ.