ETV Bharat / state

ಸ್ಥಳಕ್ಕಾಗಿ ಸರ್ಕಾರಿ ಇಲಾಖೆಗಳ ಮಧ್ಯೆ ಜಟಾಪಟಿ: ಅನಾಥವಾದ ಪಶು ಸಂಗೋಪನಾ ಇಲಾಖೆ - ಜಾಗ ಕಳೆದು‌ಕೊಂಡ ಪಶು ಸಂಗೋಪನ ಇಲಾಖೆ

ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ನಡುವೆ ಹೊಂದಾಣಿಕೆ ಇಲ್ಲದಿರುವುದು ಸಾಮಾನ್ಯ. ಆದ್ರೆ, ಶಿವಮೊಗ್ಗದಲ್ಲಿ ಎರಡು‌ ಸರ್ಕಾರಿ ಇಲಾಖೆಗಳ ನಡುವೆ ಹೊಂದಾಣಿಕೆ ಇಲ್ಲದಿರುವುದು ಜಟಾಪಟಿಗೆ ಕಾರಣವಾಗಿದೆ.

ಪಶು ಸಂಗೋಪನ ಇಲಾಖೆ
author img

By

Published : Oct 13, 2019, 1:44 PM IST

ಶಿವಮೊಗ್ಗದ: ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಾಗೂ ಜಿಲ್ಲಾ ಪಶು ವೈದ್ಯಸೇವಾ ಇಲಾಖೆ ನಡುವೆ ಹೊಂದಾಣಿಕೆ ಇಲ್ಲದೆ ಜಟಾಪಟಿ ನಡೆಸುತ್ತಿವೆ.

ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿನ ಗೆಸ್ಟ್ ಹೌಸ್ ಅನ್ನು ಪಶು ಸಂಗೋಪನಾ ಇಲಾಖೆಯ ಶಿವಮೊಗ್ಗ ಸಹಾಯಕ‌ ನಿರ್ದೇಶಕರ ಕಚೇರಿಗೆ ನೀಡಲಾಗಿತ್ತು. ಸದ್ಯ ನಮ್ಮ ವ್ಯಾಪ್ತಿಯ ಕಟ್ಟಡವನ್ನ ಖಾಲಿ ಮಾಡಿ ಇಲ್ಲವೆ, ಕಟ್ಟಡಕ್ಕೆ ಬಾಡಿಗೆ ನೀಡಿ ಎಂದು ಎಪಿಎಂಸಿ ತಕರಾರು ತೆಗೆದಿದ್ದು, ಪಶು ಸಂಗೋಪನಾ ಇಲಾಖೆಗೆ ನೋಟಿಸ್ ನೀಡುತ್ತಿದೆ.

ಸ್ವಂತ ಜಾಗ ಕಳೆದು‌ಕೊಂಡ ಪಶು ಸಂಗೋಪನಾ ಇಲಾಖೆ

ಎಪಿಎಂಸಿ ಆವರಣದ ಕಟ್ಟಡದಲ್ಲಿ ಕಳೆದ 10 ವರ್ಷಗಳಿಂದ ಪಶು ಸಂಗೋಪನಾ ಇಲಾಖೆ ಕಾರ್ಯ ನಿರ್ವಹಿಸುತ್ತಿದೆ. ಎಪಿಎಂಸಿಯ ಗೆಸ್ಟ್ ಹೌಸ್ ಎದುರಿಗೆ ಪಶು ಆಸ್ಪತ್ರೆ ಹಾಗೂ ಪಶು ವೈದ್ಯಕೀಯ ಚಿಕಿತ್ಸೆಗೆ ಬೇಕಾದ ಔಷಧಗಳನ್ನು ಸ್ಟಾಕ್ ಮಾಡುವ ಕೊಠಡಿ ಸೇರಿ ಒಟ್ಟು ಮೂರು ಕಟ್ಟಡಗಳಲ್ಲಿ ಪಶು ಸಂಗೋಪನಾ ಇಲಾಖೆ ಕಾರ್ಯ ನಿರ್ವಹಿಸುತ್ತಿದೆ. ಎಪಿಎಂಸಿ ಆವರಣದಲ್ಲಿ ಪಶು ಆಸ್ಪತ್ರೆಯಿಂದಾಗಿ ಸಾಕಷ್ಟು ಕಿರಿಕಿರಿ ಆಗುತ್ತಿದೆ. ಅಲ್ಲದೆ ಈಗ ಪಶು ಸಂಗೋಪನ ಇಲಾಖೆಗೆ ನೀಡುವ ಅತಿಥಿ ಗೃಹ ಎಪಿಎಂಸಿ ಕಾರ್ಯದರ್ಶಿ ರವರ ಅತಿಥಿ ಗೃಹವಾಗಿದೆ. ಕೇವಲ ಒಂದೆರಡು ವರ್ಷಗಳು ಅಂತ ಹೇಳಿ ಈಗ ಬರೋಬ್ಬರಿ‌ 10 ವರ್ಷಗಳಾದ್ರೂ‌ ಸಹ ಯಾವುದೇ ಬದಲಾವಣೆ ಬಾರದೆ ತಮ್ಮ ಕಟ್ಟಡ ಪಶು‌ ಸಂಗೋಪನಾ ಇಲಾಖೆಗೆ ನೀಡಿದ್ದು ಎಪಿಎಂಸಿ‌‌ ಸದಸ್ಯರು‌‌ ಆಕ್ರೋಶ ವ್ಯಕ್ತಪಡಿಸುವಂತಾಗಿದೆ. ಇದರಿಂದ ಎಪಿಎಂಸಿಯ ಕಾರ್ಯದರ್ಶಿಗಳು ಗೆಸ್ಟ್ ಹೌಸ್ ಖಾಲಿ ಮಾಡಿಸುವಂತೆ ತಮ್ಮ ಕಚೇರಿಯ ಸಿಬ್ಬಂದಿಯನ್ನು ಕಳುಹಿಸಿದ್ದರು. ಅಲ್ಲದೆ ಕಾರ್ಪೆಂಟರ್​ನ ಕಳುಹಿಸಿ ಗೆಸ್ಟ್ ಹೌಸ್ ಕಟ್ಟಡದ ಬಾಗಿಲಿಗೆ ಹೊಸ ಚಿಲಕವನ್ನು ಹಾಕಿಸಿದ್ದಾರೆ.

ಸ್ವಂತ ಜಾಗ ಕಳೆದು‌ಕೊಂಡ ಪಶು ಸಂಗೋಪನಾ ಇಲಾಖೆ:

ಸಚಿವ ಈಶ್ವರಪ್ಪನವರ ಕಚೇರಿಯ ಜಾಗ ಹಿಂದೆ ಪಶು ಸಂಗೋಪನಾ ಇಲಾಖೆಗೆ ಸೇರಿದ ಜಾಗವಾಗಿತ್ತು. ಈ ಜಾಗದಲ್ಲಿ ಉತ್ತಮ ಕಟ್ಟಡವನ್ನು ಕಟ್ಟಲಾಗುವುದು ಎಂದು 2009 ರಲ್ಲಿ ಪಶು ಇಲಾಖೆಯ ಜಾಗವನ್ನು ಪಾಲಿಕೆ ವಶಕ್ಕೆ ಪಡೆದಿತ್ತು. ನಂತರ ಇಲ್ಲಿ ನಾಲ್ಕು ಅಂತಸ್ತಿನ ಕಟ್ಟಡವನ್ನು ಕಟ್ಟಲಾಯಿತು. ಬಳಿಕ ಇಲ್ಲಿ ಶಾಸಕರುಗಳ‌ ಕಚೇರಿ, ಸ್ಮಾರ್ಟ್ ಸಿಟಿ ಕಚೇರಿ ಹಾಗೂ ಪಶು ಇಲಾಖೆಯ ಉಪ ನಿರ್ದೇಶಕರ ಕಚೇರಿಗೆ ಜಾಗ ನೀಡಲಾಗಿದೆ. ಆದರೆ, ಹಿಂದಿನಂತೆ ಪಶು ಆಸ್ಪತ್ರೆಗಾಗಲಿ, ಸಹಾಯಕ ನಿರ್ದೇಶಕರ ಕಚೇರಿಗಾಗಲಿ ಜಾಗ ನೀಡಿಲ್ಲ. ‌ಪಶು ಇಲಾಖೆಗೆ ಈ ಜಾಗವನ್ನು ದಾನಿಗಳೊಬ್ಬರು ದಾನ ನೀಡಿದ್ದರು. ‌ಇಂತಹ ಜಾಗ ಕಳೆದುಕೊಂಡ ಆಸ್ಪತ್ರೆ ಈಗ ಎಪಿಎಂಸಿಯಿಂದಲೂ ಎತ್ತಂಗಡಿ ಆಗುವ ಆತಂಕದಲ್ಲಿದೆ. ಸದ್ಯ ಎರಡು ಇಲಾಖೆಗಳ ಜಟಾಪಟಿಯ ಚೆಂಡು ಜಿಲ್ಲಾಧಿಕಾರಿ ಅವರ ಕೋರ್ಟ್​ನಲ್ಲಿದೆ. ಇದಕ್ಕೆ ಡಿಸಿ ಸೂಕ್ತ ಪರಿಹಾರ ನೀಡಿದರೆ ಮಾತ್ರ ಪಶು ಅಸ್ಪತ್ರೆ ಹಾಗೂ ಇಲಾಖೆ ಉಳಿಯುತ್ತದೆ.

Intro:ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ನಡುವೆ ಹೊಂದಾಣಿಕೆ ಇಲ್ಲದೆ ಇರುವುದು ಸಾಮಾನ್ಯ, ಆದ್ರೆ, ಶಿವಮೊಗ್ಗದ ಎರಡು‌ ಸರ್ಕಾರಿ ಇಲಾಖೆಗಳ ನಡುವೆ ಹೊಂದಾಣಿಕೆ ಇಲ್ಲದೆ ಜಟಾಪಟಿಗೆ ಬಿದ್ದಿವೆ. ಶಿವಮೊಗ್ಗದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಾಗೂ ಜಿಲ್ಲಾ ಪಶುಪಾಲನಾ ಮತ್ತು ಪಶು ವೈದ್ಯಸೇವಾ ಇಲಾಖೆ ನಡುವೆ ಹೊಂದಾಣಿಕೆ ಇಲ್ಲದೆ ಜಟಾಪಟಿ ನಡೆಸುತ್ತಿವೆ. ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿನ ಗೆಸ್ಟ್ ಹೌಸ್ ನ್ನು ಪಶು ಇಲಾಖೆಯ ಶಿವಮೊಗ್ಗ ಸಹಾಯಕ‌ ನಿರ್ದೇಶಕರ ಕಚೇರಿಗೆ ನೀಡಲಾಗಿತ್ತು.ಈಗ ಇದು ತಮ್ಮ ವ್ಯಾಪ್ತಿಯ ಕಟ್ಟಡ ಇದನ್ನು ಖಾಲಿ ಮಾಡಿ ಇಲ್ಲವೆ, ಕಟ್ಟಡಕ್ಕೆ ಬಾಡಿಗೆ ನೀಡಿ ಎಂದು ಎಪಿಎಂಸಿ ತಕರಾರು ತೆಗೆದಿದೆ. ಇದಕ್ಕೆ ಪಶು ಸಂಗೋಪನಾ ಇಲಾಖೆಗೆ ನೋಟಿಸ್ ನೀಡುತ್ತಿದೆ.

Body:ಎಪಿಎಂಸಿ ಆವರಣದ ಕಟ್ಟಡದಲ್ಲಿ ಕಳೆದ 10 ವರ್ಷಗಳಿಂದ ಪಶು ಸಂಗೋಪನಾ ಇಲಾಖೆ ಕಾರ್ಯ ನಿರ್ವಹಿಸುತ್ತಿದೆ.ಎಪಿಎಂಸಿಯ ಗೆಸ್ಟ್ ಹೌಸ್ ಎದುರಿಗೆ ಪಶು ಆಸ್ಪತ್ರೆ ಹಾಗೂ ಪಶು ವೈದ್ಯಕೀಯ ಚಿಕಿತ್ಸೆಗೆ ಬೇಕಾದ ಔಷಧಗಳನ್ನು ಸ್ಟಾಕ್ ಮಾಡುವ ಕೊಠಡಿ ಸೇರಿ ಒಟ್ಟು ಮೂರು ಕಟ್ಟಡಗಳಲ್ಲಿ ಪಶು ಸಂಗೋಪನಾ ಇಲಾಖೆ ಕಾರ್ಯ ನಿರ್ವಹಿಸುತ್ತಿದೆ. ಎಪಿಎಂಸಿ ಆವರಣದಲ್ಲಿ ಪಶು ಆಸ್ಪತ್ರೆ ಯಿಂದಾಗಿ ಸಾಕಷ್ಟು ಕಿರಿಕಿರಿ ಆಗುತ್ತಿದೆ. ಅಲ್ಲದೆ ಈಗ ಪಶು ಇಲಾಖೆಗೆ ನೀಡುವ ಗೆಸ್ಟ್ ಹೌಸ್ ಎಪಿಎಂಸಿ ಕಾರ್ಯದರ್ಶಿ ರವರ ಅತಿಥಿ ಗೃಹವಾಗಿದೆ. ಕೇವಲ ಒಂದೆರಡು ವರ್ಷಗಳು ಅಂತ ಹೇಳಿ ಈಗ ಬರೂಬ್ಬರಿ‌ 10 ವರ್ಷಗಳಾದ್ರೂ‌ ಸಹ ಯಾವುದೆ ಬದಲಾವಣೆ ಬಾರದೆ ತಮ್ಮ ಕಟ್ಟಡ ಪಶು‌ ಸಂಗೋಪನಾ ಇಲಾಖೆಗೆ ನೀಡಿದ್ದು ಎಪಿಎಂಸಿ‌‌ ಸದಸ್ಯರು‌‌ ಆಕ್ರೋಶ ವ್ಯಕ್ತಪಡಿಸುವಂತೆ ಆಗಿದೆ. ಇದರಿಂದ ಎಪಿಎಂಸಿಯ ಕಾರ್ಯದರ್ಶಿಗಳು ಗೆಸ್ಟ್ ಹೌಸ್ ಖಾಲಿ ಮಾಡಿಸುವಂತೆ ತಮ್ಮ ಕಚೇರಿಯ ಸಿಬ್ಬಂದಿಗಳನ್ನು ಕಳುಹಿಸಿದ್ದರು. ಅಲ್ಲದೆ ಕಾರ್ಪೆಂಟರ್ ಕಳುಹಿಸಿ ಗೆಸ್ಟ್ ಹೌಸ್ ಕಟ್ಟಡದ ಬಾಗಿಲಿಗೆ ಹೊಸ ಚಿಲಕವನ್ನು ಹಾಕಿಸಿದ್ದಾರೆ. ಇದರಿಂದ ಎಪಿಎಂಸಿರವರಯ ಯಾವಾಗ ಬೇಕಾದರೂ ಸಹ ಹೊಸ ಬೀಗ ಹಾಕಬಹುದಾಗಿದೆ.

Conclusion:ಸ್ವಂತ ಜಾಗ ಕಳೆದು‌ಕೊಂಡು ಪಶು ಸಂಗೋಪನಾ ಇಲಾಖೆ: ಶಿವಮೊಗ್ಗ ಹೃದಯ ಭಾಗ ಹಾಲಿ ಈಶ್ವರಪ್ಪನವರ ಕಚೇರಿಯ ಜಾಗ ಹಿಂದೆ ಪಶು ಸಂಗೋಪನಾ ಇಲಾಖೆಗೆ ಸೇರಿದ್ದ ಜಾಗವಾಗಿತ್ತು. ಈ ಜಾಗದಲ್ಲಿ ಉತ್ತಮ ಕಟ್ಟಡವನ್ನು ಕಟ್ಟಲಾಗುವುದು ಎಂದು 2009 ರಲ್ಲಿ ಪಶು ಇಲಾಖೆಯ ಜಾಗವನ್ನು ಪಾಲಿಕೆ ವಶ ಪಡೆದು ಕೊಂಡಿತು. ನಂತ್ರ ಇಲ್ಲಿ ನಾಲ್ಕು ಅಂತಸ್ತಿನ ಕಟ್ಟಡವನ್ನು ಕಟ್ಟಲಾಯಿತು. ಕಟ್ಟಡ ಕಟ್ಟಿದ ನಂತ್ರ ಇಲ್ಲಿ ಶಾಸಕರುಗಳ‌ ಕಚೇರಿ, ಸ್ಮಾರ್ಟ್ ಸಿಟಿ ಕಚೇರಿ ಹಾಗೂ ಪಶು ಇಲಾಖೆಯ ಉಪ ನಿರ್ದೇಶಕರ ಕಚೇರಿಗೆ ಜಾಗ ನೀಡಲಾಗಿದೆ. ಆದರೆ ಹಿಂದಿನಂತೆ ಪಶು ಆಸ್ಪತ್ರೆಗಾಗಲಿ, ಸಹಾಯಕ ನಿರ್ದೇಶಕರ ಕಚೇರಿಗಾಗಲಿ ಜಾಗ ನೀಡಿಲ್ಲ.‌ಪಶು ಇಲಾಖೆಗೆ ಈ ಜಾಗವನ್ನು ದಾನಿಗಳೊಬ್ಬರು ದಾನ ನೀಡಿದ್ದರು.‌ಇಂತಹ ಜಾಗ ಕಳೆದು ಕೊಂಡ ಆಸ್ಪತ್ರೆ ಈಗ ಎಪಿಎಂಸಿಯಿಂದಲೂ ಎತ್ತಂಗಡಿ ಆಗುವ ಲಕ್ಷಣದಲ್ಲಿದೆ. ಸದ್ಯ ಎರಡು ಇಲಾಖೆಯ ಜಟಾಪಟಿಯ ಚಂಡು ಡಿಸಿ ರವರ ಕೋರ್ಟ್ ನಲ್ಲಿದೆ. ಇದಕ್ಕೆ ಡಿಸಿ ರವರು ಸೂಕ್ತ ಪರಿಹಾರ ನೀಡಿದರೆ ಮಾತ್ರ ಪಶು ಅಸ್ಪತ್ರೆ ಹಾಗೂ ಇಲಾಖೆ ಉಳಿಯುತ್ತದೆ. ಕಿರಣ್ ಕುಮಾರ್. ಶಿವಮೊಗ್ಗ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.