ETV Bharat / state

ಸೋರುತ್ತಿರುವ ಕೋಡೂರು ಪ್ರೌಢಶಾಲೆಗೆ ಬಿಇಓ ಭೇಟಿ: ಶಾಲಾ ದುರಸ್ತಿಗೆ 3 ಲಕ್ಷ ರೂ. ಬಿಡುಗಡೆ - etv bharat kannada

ಹೊಸನಗರ ತಾಲೂಕಿನ ಕೋಡೂರು ಗ್ರಾಮದ ಸರ್ಕಾರಿ ಶಾಲೆ ಸೋರುತ್ತಿದೆ ಎಂಬ ಸುದ್ದಿ ತಿಳಿದು ಬಿಇಓ ಕೃಷ್ಣಮೂರ್ತಿ ಅವರು ಭೇಟಿ ನೀಡಿದರು. ತತಕ್ಷಣ ದುರಸ್ತಿಯಾಗದ ಹಿನ್ನೆಲೆ ಶಾಲೆಯ ಅಲ್ಲಲ್ಲಿ ಈ ಸಮಸ್ಯೆ ಉಂಟಾಗಿದ್ದು ರಿಪೇರಿಗೆ ಹಣ ಬಿಡುಗಡೆ ಮಾಡಲಾಗಿದೆ.

ಕೋಡೂರು ಪ್ರೌಢಶಾಲೆ
ಕೋಡೂರು ಪ್ರೌಢಶಾಲೆ
author img

By

Published : Jul 8, 2023, 3:48 PM IST

Updated : Jul 8, 2023, 9:05 PM IST

ಶಿವಮೊಗ್ಗ: ಸೋರುತ್ತಿದ್ದ ಕೋಡೂರು ಶಾಲೆಗೆ ಹೊಸನಗರ ಬಿಇಓ ಕೃಷ್ಣಮೂರ್ತಿ ಅವರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮದ ಸರ್ಕಾರಿ ಶಾಲೆಯು ಸುಮಾರು 40 ವರ್ಷದ ಹಳೆಯದ್ದು. ಶಾಲೆಯ ಮೇಲ್ಛಾವಣಿ ಹಂಚಿನಿಂದ ನಿರ್ಮಾಣವಾಗಿದೆ. ಹೊಸನಗರ ಭಾಗದಲ್ಲಿ ವಿಪರೀತ ಮಳೆ. ಇದರಿಂದ ಇಲ್ಲಿನ‌ ಮೇಲ್ಛಾವಣಿಗಳು ಬೇಗನೇ ಹಳಾಗುತ್ತವೆ. ಆದರೆ, ಹಳಾದ ಮೇಲ್ಛಾವಣಿ ಸರಿಪಡಿಸುವ ಕಾರ್ಯವನ್ನು ನಿಧಾನವಾಗಿ ಮಾಡುವ ಪರಿಣಾಮ ಶಾಲೆಗಳು ಅಲ್ಲಲ್ಲಿ ಸೋರುತ್ತವೆ. ಅದೇ ರೀತಿ ಕೋಡೂರಿನ ಸರ್ಕಾರಿ ಪ್ರೌಢಶಾಲೆಯ ಕಾರಿಡಾರ್ ಮಳೆ‌ ನೀರಿಗೆ ಸೂರುತ್ತಿದೆ. ಅಲ್ಲದೆ 9ನೇ ತರಗತಿಯಲ್ಲಿ ಹಂಚುಗಳು ಗಾಳಿ ಮಳೆಗೆ ಜರುಗಿದ ಪರಿಣಾಮ ತರಗತಿಯಲ್ಲಿ ಮಳೆ ನೀರಿನ ಸಣ್ಣ ಸಣ್ಣ ಹನಿಗಳು ಬೀಳುತ್ತಿದ್ದವು.

ಕೋಡೂರು ಪ್ರೌಢಶಾಲೆಗೆ ಭೇಟಿ ನೀಡಿದ ಬಿಇಓ
ಕೋಡೂರು ಪ್ರೌಢಶಾಲೆಗೆ ಭೇಟಿ ನೀಡಿದ ಬಿಇಓ

ಈ ವಿಚಾರ ತಿಳಿದ ಹೊಸನಗರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ ಅವರು ಶಾಲೆಗೆ ಭೇಟಿ ನೀಡಿ ಶಾಲೆಯ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಶಾಲೆಯ ಪರಿಸ್ಥಿತಿಯ ಬಗ್ಗೆ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಪೋಷಕರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಶಾಲೆಯ ಕಾರಿಡಾರ್​ನಲ್ಲಿ ಮಳೆ ಹನಿ ಸೋರುತ್ತಿರುವುದು ಗಮನಕ್ಕೆ ಬಂದಿದೆ. ಕಾರಿಡಾರ್​ನ ಮೇಲ್ಛಾವಣಿಯಲ್ಲಿ ಹಂಚಿನ ಕೆಳಗೆ ಇರುವ ಮರದ ತುಂಡುಗಳ ನಡುವೆ ಸಂದಿ ಉಂಟಾಗಿದೆ. ಇದರಿಂದ ನೀರು ಕೆಳಗೆ ಸುರಿಯುತ್ತಿದೆ.

ಇನ್ನೂ ತರಗತಿಯ ಒಳಗೆ ಛತ್ರಿ ಹಿಡಿದುಕೊಂಡು ಕೂರುವಷ್ಟು ಸಮಸ್ಯೆ ಇಲ್ಲ. ಮಳೆ ಜೋರಾಗಿ ಬಂದಾಗ ಮಳೆಯ ಹನಿಗಳು ಸಿಡಿಯುತ್ತಿವೆ. ಇದರಿಂದ ಛತ್ರಿ ಹಿಡಿದುಕೊಂಡು ಕುಳಿತು ಕೊಳ್ಳುವಷ್ಟು ಸಮಸ್ಯೆ ಇಲ್ಲದಂತಾಗಿದೆ. ಈ ಕುರಿತ ವರದಿಯನ್ನು ಬಿಇಓ ಕೃಷ್ಣಮೂರ್ತಿ ಅವರು ಸೋಮವಾರ ಡಿಡಿಪಿಐ ಅವರಿಗೆ ಕೋಡೂರು ಶಾಲೆಯ ವರದಿಯನ್ನು ಸಲ್ಲಿಸುತ್ತಿದ್ದಾರೆ. ಇನ್ನೂ ಶಾಲೆಯ ದುರಸ್ತಿತಿಗೆ ಶಿಕ್ಷಣ ಇಲಾಖೆಯಿಂದ ಹೊಸನಗರ ತಾಲೂಕು ಆಡಳಿತದ ಹೆಡ್​ಗೆ 3 ಲಕ್ಷ ರೂ ಬಿಡುಗಡೆಯಾಗಿದೆ. ಮಳೆ ಕಡಿಮೆಯಾಗುತ್ತಿದ್ದಂತಯೇ ದುರಸ್ತಿ ಕಾರ್ಯ ನಡೆಯಲಿದೆ ಎಂದು ಬಿಇಓ ಕೃಷ್ಣಮೂರ್ತಿ ಅವರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

Government school in Shimoga district
ಕೋಡೂರು ಪ್ರೌಢಶಾಲೆ

ನಮ್ಮ ಶಾಲೆಯಲ್ಲಿ 8 ರಿಂದ 10ನೇ ತರಗತಿಯವರೆಗೆ ಸುಮಾರು 123 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಲ್ಲಿ ಐದು ತರಗತಿಗಳಿವೆ. 9ನೇ ತರಗತಿಯಲ್ಲಿ ಮಳೆಯಿಂದ ಸ್ವಲ್ಪ ಸಮಸ್ಯೆ ಇದೆ. ಆದರೆ, ತರಗತಿಯನ್ನು ಬದಲಾಯಿಸುಷ್ಟು ಸಮಸ್ಯೆ ಇಲ್ಲ. ಅಲ್ಲದೆ, ತರಗತಿಯಲ್ಲಿ ಛತ್ರಿ ಹಿಡಿದುಕೊಂಡು ಕುಳಿತುಕೊಳ್ಳುವಷ್ಟು ಸಮಸ್ಯೆ ಇಲ್ಲ. ನಮಗೆ ಹೆಚ್ಷುವರಿ ಎರಡು ಕೊಠಡಿಗಳಿವೆ. ಇದರಿಂದ ನಮಗೆ ಇಲ್ಲಿ ಯಾವುದೇ ಸಮಸ್ಯೆಗಳಿಲ್ಲ. ತರಗತಿಯ ಒಂದು ಕಡೆಯ ಗೋಡೆ ಮಳೆಯಿಂದ ಸಣ್ಣ ಬಿರುಕು ಬಿಟ್ಟಿದೆ. ಈಗಾಗಲೇ 9ನೇ ತರಗತಿಯನ್ನು ಬೇರೆ ಕೊಠಡಿಗೆ ವರ್ಗಾಹಿಸಲಾಗಿದೆ ಎಂದು ಶಾಲೆಯ ಮುಖ್ಯ ಶಿಕ್ಷಕರು ಬಿಇಒಗೆ ಬರವಣಿಗೆಯಲ್ಲಿ ತಿಳಿಸಿದ್ದಾರೆ.

ಶಾಲೆ ಸೋರುತ್ತಿರುತ್ತಿರುವ ಕುರಿತು ಶಾಲೆಯ ಎಸ್​ಡಿಎಂಸಿ ಅಧ್ಯಕ್ಷ ರಾಜು ಅವರು ಈಟಿವಿ ಭಾರತ ಜೊತೆ ದೂರವಾಣಿಯಲ್ಲಿ ಮಾತನಾಡಿ, ಶಾಲೆಯು 40 ವರ್ಷದ ಹಳೆಯದಾಗಿದ್ದು, ಇದುವರೆಗೂ ದುರಸ್ತಿ ಆಗಿಲ್ಲ. ಶಾಲೆಯ ದುರಸ್ತಿ ಬಗ್ಗೆ ನಾವು ಹಿಂದೆ ಹಾಲಿ‌ ಶಾಸಕ‌ ಆರಗ ಜ್ಞಾನೇಂದ್ರ ಅವರಿಗೆ ಹಾಗೂ ಗ್ರಾಮ ಪಂಚಾಯತಿಗೆ ಮನವಿ‌ ಮಾಡಿದ್ದೆವು. ಆದರೆ, ಶಿಕ್ಷಣ ಇಲಾಖೆಗೆ ಸಂಬಂಧಪಟ್ಟಂತೆ, ಹೊಸನಗರ ಬಿಇಓ ಹಾಗೂ ಡಿಡಿಪಿಐ ಅವರಿಗೆ ಮನವಿ ಮಾಡಿಕೊಂಡಿಲ್ಲ. ನಮ್ಮ ಕೋಡೂರು ಗ್ರಾಮ ಪಂಚಾಯತಿ ಅವರ ಕೋರಿಕೆಯ ಮೇಲೆ ಶಾಲೆಗೆ ಹಣ ಮಂಜೂರು ಆಗಿದೆ ಎಂಬ ಮಾಹಿತಿ ಸಿಕ್ಕಿದೆ. ಆದರೆ, ನಮಗೆ ಇದುವರೆಗೂ ಯಾವುದೇ ದಾಖಲೆ‌ ಲಭ್ಯವಾಗಿಲ್ಲ ಎಂದು ತಿಳಿಸಿದ್ದಾರೆ.‌ ಇಂದು ಶಾಲೆಗೆ ಬಿಇಓ ಅವರು ಭೇಟಿ ನೀಡಿ‌ ಪರಿಶೀಲನೆ ನಡೆಸಿರುವ ಬಗ್ಗೆಯೂ ಅವರು ಮಾಹಿತಿ ನೀಡಿದರು.

ಇದನ್ನೂ ಓದಿ: ಮೈದುಂಬಿ ಹರಿಯುತ್ತಿರುವ ತುಂಗಭದ್ರಾ ನದಿ: ಮುಳುಗಡೆಯಾದ ಸುಕ್ಷೇತ್ರ ಉಕ್ಕಡಗಾತ್ರಿಯ ಸ್ನಾನಘಟ್ಟಗಳು

Last Updated : Jul 8, 2023, 9:05 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.