ETV Bharat / state

ಶಿವಮೊಗ್ಗದಲ್ಲಿ ಗಣೇಶೋತ್ಸವಕ್ಕೆ ಸಿದ್ಧತೆ.. ಕೇಸರಿ ಧ್ವಜ, ತಿಲಕ್, ಸಾವರ್ಕರ್​ ಫ್ಲೆಕ್ಸ್ ವಿತರಣೆ - ಈಟಿವಿ ಭಾರತ ಕನ್ನಡ

ಗಣೇಶೋತ್ಸವಕ್ಕೆ ಸಿದ್ಧತೆ : ಗಣೇಶೋತ್ಸವ ಸಮಿತಿಯವರಿಗೆ ತಮ್ಮ ತಮ್ಮ ಪೆಂಡಾಲ್​ನಲ್ಲಿ ಹಾಕಲು ಬಾಲಗಂಗಾಧರ್ ತಿಲಕ್, ವಿನಾಯಕ ದಾಮೋದರ್ ಸಾವರ್ಕರ್​ ಫ್ಲೆಕ್ಸ್ ಹಾಗೂ ಎರಡು ಕೇಸರಿ ಧ್ವಜಗಳನ್ನು ಹಿಂದು ರಾಷ್ಟ್ರ ಭಕ್ತರ ಬಳಗ ವಿತರಿಸಿದೆ.

ganesha festival special tilak Sarvakar flex distribution in Shivamogga
ಕೇಸರಿ ಧ್ವಜ, ತಿಲಕ್, ಸಾವರ್ಕರ್​ ಫ್ಲೆಕ್ಸ್ ವಿತರಣೆ
author img

By

Published : Aug 27, 2022, 5:45 PM IST

ಶಿವಮೊಗ್ಗ: ಎಲ್ಲೆಡೆ ಗಣೇಶ ಹಬ್ಬಕ್ಕೆ ಸಿದ್ಧತೆ ನಡೆಯುತ್ತಿದೆ. ಶಿವಮೊಗ್ಗ ನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಗಣೇಶೋತ್ಸವ ಸಮಿತಿಯವರಿಗೆ ತಮ್ಮ ತಮ್ಮ ಪೆಂಡಾಲ್​ನಲ್ಲಿ ಹಾಕಲು ಬಾಲಗಂಗಾಧರ್ ತಿಲಕ್, ವಿನಾಯಕ ದಮೋದರ್ ಸಾವರ್ಕರ್ ಫ್ಲೆಕ್ಸ್ ಹಾಗೂ ಎರಡು ಕೇಸರಿ ಧ್ವಜಗಳನ್ನು ಹಿಂದು ರಾಷ್ಟ್ರ ಭಕ್ತರ ಬಳಗ ವಿತರಿಸಿದೆ.

ಈ ಮೂಲಕ ಗಣೇಶ ಮೂರ್ತಿ ನೋಡಲು ಬರುವವರಿಗೆ ದೇಶ ಭಕ್ತರ ಪರಿಚಯ ಮಾಡಲು ರಾಷ್ಟ್ರ ಭಕ್ತರ ಬಳಗ ನಿರ್ಧರಿಸಿದೆ. ಇಂದು ಶಿವಮೊಗ್ಗದ ಕೋಟೆ ಆಂಜನೇಯ ದೇವಾಲಯದ ಆವರಣದಲ್ಲಿ ಧ್ವಜ ಹಾಗೂ ಫ್ಲೆಕ್ಸ್ ಅನ್ನು ವಿತರಿಸಲಾಯಿತು.

ಕೇಸರಿ ಧ್ವಜ, ತಿಲಕ್, ಸಾವರ್ಕರ್​ ಫ್ಲೆಕ್ಸ್ ವಿತರಣೆ

ಸ್ವಾತಂತ್ರ್ಯ ಹೋರಾಟಗಾರರಾದ ಬಾಲ ಗಂಗಾಧರ್ ತಿಲಕರು ಬ್ರಿಟಿಷರಿಂದ ಭಾರತವನ್ನು ಸ್ವಾತಂತ್ರ್ಯಗೊಳಿಸಲೆಂದು ದೇಶದ ಜನರನ್ನು ಒಗ್ಗೂಡಿಸಲು ಗಣೇಶನ ಮೂರ್ತಿಯನ್ನು ಸಾರ್ವಜನಿಕವಾಗಿ ಪ್ರತಿಷ್ಠಾಪಿಸಲು ಸೂಚಿಸಿದ್ದರು. ಇದನ್ನೇ ಒಂದು ಆಂದೋಲವನ್ನಾಗಿ ಮಾಡಿಕೊಂಡಿದ್ದರು. ಇದರಂತೆ ಸಾವರ್ಕರ್​ ಅವರು ಸಹ ಸ್ವಾತಂತ್ರ್ಯಕ್ಕಾಗಿ ಹೋರಾಡಿ 23 ವರ್ಷಗಳ ಕಾಲ ಕಾರಾಗೃಹ ವಾಸ ಅನುಭವಿಸಿದ್ದರು. ಹಾಗಾಗಿ ತಿಲಕರ ಹಾಗೂ ಸಾವರ್ಕರ್​ ಅವರ ಭಾವಚಿತ್ರ ಇರುವ ಫ್ಲೆಕ್ಸ್ ಅನ್ನು ವಿತರಿಸಲಾಗುತ್ತಿದೆ ಎಂದು ಹಿಂದು ರಾಷ್ಟ್ರ ಭಕ್ತರ ಬಳಗದವರು ತಿಳಿಸಿದರು.

ಇದನ್ನೂ ಓದಿ: ಎಲ್ಲಡೆ ಗಣೇಶೋತ್ಸವಕ್ಕೆ ಭರದ ಸಿದ್ಧತೆ.. ಸಂಪ್ರದಾಯಬದ್ಧ ಆಚರಣೆಯಿಂದ ಪ್ರಸನ್ನನಾಗುತ್ತಾನೆ ಗಣಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.