ಶಿವಮೊಗ್ಗ : ಕಡಿಮೆ ಬೆಲೆಗೆ ಒಳ್ಳೆಯ ಕಂಡಿಷನ್ ಲಾರಿ ಕೊಡಿಸುವುದಾಗಿ ವ್ಯಕ್ತಿಯೊಬ್ಬರಿಗೆ 5 ಲಕ್ಷ ರೂಪಾಯಿ ಪಂಗನಾಮ ಹಾಕಿದವನನ್ನು ಹೊಳೆಹೊನ್ನೂರು ಪೊಲೀಸರು ಬಂಧಿಸಿದ್ದಾರೆ.
ಜೂನ್ 12 ರಂದು ಸೊರಬ ತಾಲೂಕು ಕುಪ್ಪಗುಡ್ಡೆ ಗ್ರಾಮದ ಸುರೇಶ್ ಎಂಬವರಿಗೆ, ನಮ್ಮ ಬಳಿ ಒಳ್ಳೆಯ ಕಂಡಿಷನ್ ಇರುವ ಲಾರಿ ಇದೆ. ಕಡಿಮೆ ದರಕ್ಕೆ ನಿಮಗೆ ನೀಡುತ್ತೇವೆ ಎಂದು ರಾಜೇಂದ್ರ ಎಂಬಾತ 5 ಲಕ್ಷ ರೂ. ಹಣ ಪಡೆದಿದ್ದ. ಹೊಳೆಹೊನ್ನೂರು ಗ್ರಾಮಕ್ಕೆ ಕರೆಯಿಸಿದ ರಾಜೇಂದ್ರ, ಸುರೇಶ್ ಅವರಿಂದ ಹಣ ಪಡೆದು ಲಾರಿ ಕೊಡಿಸದೆ ಪರಾರಿಯಾಗಿದ್ದ ಎಂದು ಆರೋಪಿಸಲಾಗಿದೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡ ಹೊಳೆಹೊನ್ನೂರು ಪೊಲೀಸರು, ಆರೋಪಿ ಭದ್ರಾವತಿಯ ವೀರಾಪುರದ ರಾಜೇಂದ್ರನನ್ನು ಬಂಧಿಸಿದ್ದಾರೆ. ಆರೋಪಿಯಿಂದ 5 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.
ಓದಿ : ಬೆಳಗಾವಿ ಚಿನ್ನ ಕಳ್ಳತನ ಪ್ರಕರಣ: ಮೂರು ಕೇಸ್ ದಾಖಲು - ತನಿಖೆ ಚುರುಕು