ಶಿವಮೊಗ್ಗ: ಬ್ಯಾಂಕ್ನಿಂದ ಹಣ ಡ್ರಾ ಮಾಡಿಕೊಂಡು ಬರುವಾಗ ಬೈಕ್ನಲ್ಲಿ ಬಂದ ಖದೀಮರು 4 ಲಕ್ಷ ರೂಗಳನ್ನು ಎಗರಿಸಿಕೊಂಡು ಹೋಗಿರುವ ಘಟನೆ ತೀರ್ಥಹಳ್ಳಿ ಪಟ್ಟಣದಲ್ಲಿ ನಡೆದಿದೆ.
ತೀರ್ಥಹಳ್ಳಿ ಪಟ್ಟಣದ ಮಲೆನಾಡು ಕ್ಲಬ್ ಮ್ಯಾನೇಜರ್ ಶರತ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ 4 ಲಕ್ಷ ರೂಪಾಯಿ ಡ್ರಾ ಮಾಡಿಕೊಂಡು ಬಂದಿದ್ದಾರೆ. ಬ್ಯಾಂಕ್ನಿಂದ ಶರತ್ ತನ್ನ ಬೈಕ್ನ ಬ್ಯಾಗ್ನಲ್ಲಿ ಹಣ ಇಟ್ಟು ಕೊಂಡು ಆಗುಂಬೆ ರಸ್ತೆಯ ತಪಸ್ವಿಯವರ ಅಂಗಡಿಗೆ ಬೈಕ್ ನಿಲ್ಲಿಸಿ ಹಾರ್ಡ್‌ವೇರ್ ಶಾಪ್‌ಗೆ ಹೋಗಿ ಚೆಕ್ ಕೊಟ್ಟು ವಾಪಸ್ ಬರುವಷ್ಟರಲ್ಲಿ ಕಳ್ಳರು ಹೊಂಚು ಹಾಕಿ ಬ್ಯಾಗಿನಿಂದ ಹಣ ಲಪಟಾಯಿಸಿಕೊಂಡು ಪರಾರಿಯಾಗಿದ್ದಾರೆ.
ಈ ನಾಲ್ಕು ಲಕ್ಷ ರೂಪಾಯಿ ಹಣ ಅರಮನೆಕೇರಿಯ ರವಿಶಂಕರ್ ಎಂಬುವರಿಗೆ ಸೇರಿದ್ದಾಗಿದೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ಪಟ್ಟಣದಲ್ಲಿ ಆಗುಂಬೆ ಭಾಗದ ಹಳ್ಳಿಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೊಂಚು ಹಾಕಿ ಹಣ ದರೋಡೆ ಮಾಡುವ ಪ್ರಕರಣಗಳು ನಡೆಯುತ್ತಿದೆ. ಈಗಾಗಲೇ ಹಳ್ಳಿಗಳಲ್ಲಿ ಅಡಿಕೆ ಕೊಯ್ಲಿನ ಸಮಯವಾಗಿದ್ದು ರೈತರು ಬ್ಯಾಂಕಿನಲ್ಲಿ ಹಣವನ್ನು ಡ್ರಾ ಮಾಡುವುದನ್ನು ಕಳ್ಳರು ಹೊಂಚು ಹಾಕಿ ಕಾದು ಕುಳಿತು ದರೋಡೆ ಮಾಡುವಂತಹ ಘಟನೆಗಳು ಮರುಕಳಿಸಬಹುದಾಗಿದೆ.
ಇನ್ನು ಪೊಲೀಸರು ಬೈಕ್ ಖದೀಮರನ್ನು ಹಿಡಿದು ಶಿಕ್ಷಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.