ETV Bharat / state

ಸಾಲಬಾಧೆ ಹಿನ್ನೆಲೆ... ವಿಷ ಸೇವಿಸಿ ರೈತ ಆತ್ಮಹತ್ಯೆ

ಸಾಲಬಾಧೆಯಿಂದ ಮನನೊಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಪ್ರಕಾಶ್ ಕದರಮಂಡಲಗಿ ಎನ್ನುವ ರೈತನೋರ್ವ ತನ್ನ ಸಂಬಂಧಿಕರ ಮನೆಯಲ್ಲಿ ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ವಿಷ ಸೇವಿಸಿ ರೈತನೋರ್ವ ಆತ್ಮಹತ್ಯೆ
author img

By

Published : Sep 20, 2019, 12:42 AM IST

ಶಿವಮೊಗ್ಗ: ಸಾಲಬಾಧೆಯಿಂದ ನೊಂದು ರೈತನೋರ್ವ ತನ್ನ ಸಂಬಂಧಿಕರ ಮನೆಯಲ್ಲಿ ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಮೂಲತಃ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಪ್ರಕಾಶ್ ಕದರಮಂಡಲಗಿ (32) ಎಂಬಾತ ಶಿಕಾರಿಪುರದ ಅಗ್ರಹಾರ ಮುಚ್ಚಡಿಯಲ್ಲಿರುವ ತನ್ನ ಸಂಬಂಧಿಕರ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈತ ಪ್ರಕಾಶ್ ಯೂನಿಯನ್ ಬ್ಯಾಂಕ್​ನಿಂದ ₹12 ಲಕ್ಷ ರೂ. ಹಾಗೂ ಹೆಚ್​ಡಿಎಫ್​ಸಿ ಬ್ಯಾಂಕ್​ನಲ್ಲಿ ₹5 ಲಕ್ಷ ರೂ ಹಾಗೂ ಒಂದಿಷ್ಟು ಕೈಸಾಲವನ್ನು ಮಾಡಿಕೊಂಡಿದ್ದ ಎನ್ನಲಾಗಿದೆ.

ಸಾಲಭಾದೆ : ವಿಷ ಸೇವಿಸಿ ರೈತನೋರ್ವ ಆತ್ಮಹತ್ಯೆ

ಬ್ಯಾಂಕ್​ನವರು ಸಾಲ ಮರುಪಾವತಿ ಮಾಡಬೇಕೆಂದು ಪೋನ್ ಮಾಡುತ್ತಿದ್ದರು. ಇದರಿಂದ ಪ್ರಕಾಶ್ ಬೇಸತ್ತು ಈ ಬಗ್ಗೆ ತನ್ನ ಸಂಬಂಧಿಕರ ಬಳಿ ಹೇಳಿಕೊಂಡಿದ್ದ. ಪ್ರಕಾಶ್​ನ ಹೆಂಡ್ತಿಯು ಅಗ್ರಹಾರ ಮುಚ್ಚಡಿಯ ತನ್ನ ದೊಡ್ಡಮ್ಮನ ಮನೆಯಲ್ಲಿ ಹೆರಿಗೆಯಾಗಿ ಅಲ್ಲೇ ಇದ್ದಳು. ಈಕೆಯನ್ನು ಮಂಗಳವಾರ ನೋಡಲು ಬಂದಾಗ ಸಾಲದ ಬಗ್ಗೆ ಬೇಸರ ವ್ಯಕ್ತಪಡಿಸಿ, ತನ್ನ ಇಬ್ಬರು ಮಕ್ಕಳನ್ನು ನೀವೆ ನೋಡಿಕೊಳ್ಳಿ ಎಂದು ಹೇಳಿ ಮನೆಯಿಂದ ಹೊರಗೆ ಹೋಗಿ ವಿಷ ಸೇವನೆ ಮಾಡಿದ್ದಾರೆ.

ಮಂಗಳವಾರ ಶಿರಾಳಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದರೂ ಸಹ ಚಿಕಿತ್ಸೆ ಫಲಕಾರಿಯಾಗದೆ ಪ್ರಕಾಶ್ ಸಾವನ್ನಪ್ಪಿದ್ದಾನೆ.‌ ಇದರಿಂದ ಪ್ರಕಾಶ್ ಹೆಂಡತಿ, ಮೂರು ವರ್ಷದ ಹೆಣ್ಣು ಮಗು ಹಾಗೂ ಮೂರು ತಿಂಗಳ ಗಂಡು ಮಗು ಅನಾಥವಾಗಿದೆ. ಸದ್ಯ ಈ ಕುರಿತು ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಸಾಲಕ್ಕಾಗಿ ಬ್ಯಾಂಕ್ ನಿಂದ ಪೀಡನೆ: ವಿಷ ಸೇವಿಸಿ ರೈತ ಆತ್ಮಹತ್ಯೆ.

ಶಿವಮೊಗ್ಗ: ಸಾಲಭಾಧೆಯಿಂದ ರೈತನೂರ್ವ ತನ್ನ ಸಂಬಂಧಿಕರ ಮನೆಯಲ್ಲಿ ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಪ್ರಕಾಶ್ ಕದರಮಂಡಲಗಿ (32) ಎಂಬಾತ ಶಿಕಾರಿಪುರದ ಅಗ್ರಹಾರ ಮುಚ್ಚಡಿ ಎಂಬಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ . ಪ್ರಕಾಶ್ ಯೂನಿಯನ್ ಬ್ಯಾಂಕ್ 12 ಲಕ್ಷ ಹಾಗೂ ಎಚ್ ಡಿಎಫ್ ಸಿ ಬ್ಯಾಂಕ್ ನಲ್ಲಿ 5 ಲಕ್ಷ ಹಾಗೂ ಕೈಸಾಲವನ್ನು ಮಾಡಿ ಕೊಂಡಿದ್ದ ಎನ್ನಲಾಗಿದೆ.Body:ಬ್ಯಾಂಕ್ ನವರು ಸಾಲ ಮರುಪಾವತಿ ಮಾಡಬೇಕು ಎಂದು ಪೋನ್ ಮಾಡುತ್ತಿದ್ದರು. ಇದರಿಂದ ಪ್ರಕಾಶ್ ಬೇಸತ್ತಿದ್ದ. ಈ ಬಗ್ಗೆ ತನ್ನ ಸಂಬಂಧಿಕರ ಬಳಿ ಹೇಳಿ ಕೊಂಡಿದ್ದ. ಪ್ರಕಾಶ್ ನ ಹೆಂಡ್ತಿಯು ಅಗ್ರಹಾರ ಮುಚ್ಚಡಿಯ ತನ್ನ ದೊಡ್ಡಮ್ಮನ ಮನೆಯಲ್ಲಿ ಹೆರಿಗೆಯಾಗಿ ಇದ್ದಳು. ಈಕೆಯನ್ನು ನಿನ್ನೆ ನೋಡಲು ಬಂದಾಗ ಸಾಲದ ಬಗ್ಗೆ ಬೇಸರ ವ್ಯಕ್ತಪಡಿಸಿ, ತನ್ನ ಇಬ್ಬರು ಮಕ್ಕಳನ್ನು ನೀವೆ ನೋಡಿ ಕೊಳ್ಳಿ ಎಂದು ಹೇಳಿ ಮನೆಯಿಂದ ಹೊರಗೆ ಹೋಗಿ ವಿಷ ಸೇವನೆ ಮಾಡಿದ್ದಾರೆ.Conclusion:ನಿನ್ನೆ ಶಿರಾಳಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದರು ಸಹ ಚಿಕಿತ್ಸೆ ಫಲಕಾರಿಯಾಗದೆ ಪ್ರಕಾಶ್ ಸಾವನ್ನಪ್ಪಿದ್ದಾನೆ.‌ ಇದರಿಂದ ಪ್ರಕಾಶ್ ಹೆಂಡತಿ, ಮೂರು ವರ್ಷದ ಹೆಣ್ಣು ಮಗು ಹಾಗೂ ಮೂರು ತಿಂಗಳ ಗಂಡು ಮಗು ಅನಾಥವಾಗಿದೆ. ಈ ಕುರಿತು ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.