ETV Bharat / state

ಅಶ್ಲೀಲ ವಿಡಿಯೋಗಳ ಬಗ್ಗೆ ಆರಗ ಜ್ಞಾನೇಂದ್ರ ಅವರೇ ಹೇಳಬೇಕು: ಮಾಜಿ ಶಾಸಕ ಕಿಮ್ಮನೆ ರತ್ನಾಕರ್ - ಕಿಮ್ಮನೆ ರತ್ನಾಕರ್ ಪ್ರತಿಕ್ರಿಯೆ

obscene video viral case: ಆರಗ ಜ್ಞಾನೇಂದ್ರ ಅವರೇ ಅತ್ಯಾಚಾರದ ಆರೋಪಿಯ ಜತೆ ಡಿಗ್ರಿ ಕಾಲೇಜ್​​ನಲ್ಲಿ ಪ್ರಚಾರದ ವೇಳೆ ವೋಟು ಕೇಳಲು ಹೋಗಿದ್ದರು. ಈಗ ನೋಡಿದರೆ ಆತ ಎಬಿವಿಪಿ ಅಧ್ಯಕ್ಷ ಅಲ್ಲ ಎನ್ನುತ್ತಿದ್ದಾರೆ. ಇದಕ್ಕೆ ನಮ್ಮ ಬಳಿ ಸಾಕ್ಷಿ ಇದೆ ಎಂದು ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.

Former MLA Kimmane Ratnakar
ಮಾಜಿ ಶಾಸಕ ಕಿಮ್ಮನೆ ರತ್ನಾಕರ್
author img

By

Published : Jun 21, 2023, 7:49 AM IST

Updated : Jun 21, 2023, 10:38 AM IST

ಅಶ್ಲೀಲ ವಿಡಿಯೋ ವೈರಲ್​ ಪ್ರಕರಣ ..ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಪ್ರತಿಕ್ರಿಯೆ

ಶಿವಮೊಗ್ಗ: ತೀರ್ಥಹಳ್ಳಿ ಕಾಲೇಜು ವಿದ್ಯಾರ್ಥಿನಿಯರ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಪ್ರತಿಕ್ರಿಯಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು "ಅಶ್ಲೀಲ ವಿಡಿಯೋಗಳ ಬಗ್ಗೆ ಶಾಸಕ ಆರಗ ಜ್ಞಾನೇಂದ್ರ ಅವರೇ ಹೇಳಬೇಕು. ನನಗೆ ಬಂದ ಮಾಹಿತಿ ಪ್ರಕಾರ 30 ರಿಂದ 40 ಜನ ಹೆಣ್ಣು ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಎಬಿವಿಪಿ ಅಧ್ಯಕ್ಷ ಹರಿಬಿಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಜ್ಞಾನೇಂದ್ರ ಅವರು ಪ್ರತಿಭಟನೆ ಮಾಡಬೇಕಿತ್ತು. ಅದೇ ಎಬಿವಿಪಿ ಅಧ್ಯಕ್ಷನ ಬದಲಾಗಿ ಕಾಂಗ್ರೆಸ್ ಅಥವಾ ಮುಸ್ಲಿಂ ವ್ಯಕ್ತಿ ಮಾಡಿದ್ದರೆ ಇಂದು ಶಿವಮೊಗ್ಗ ಬಂದ್ ನಾಳೆ, ಕರ್ನಾಟಕ ಬಂದ್ ಮಾಡ್ತಿದ್ರು. ಇವರಿಗೆ ತಲೆ ಇದೆಯೇ?" ಎಂದು ಪ್ರಶ್ನಿಸಿದರು.

ಯಾರ ಮೇಲೆ ಆಪಾದನೆ ಬರುತ್ತದೆ ಆಗ ಅವರಿಗೂ ನಮಗೂ ಸಂಬಂಧ ಇಲ್ಲ ಎಂದು ಹೇಳುತ್ತಾರೆ. ಎಲ್ಲರೂ ಇದೇ ರೀತಿ ಹೇಳೋದು. ಆರಗ ಜ್ಞಾನೇಂದ್ರ ಅವರು ಕೇಸರಿ ಶಾಲು ಧರಿಸಿ ಈ ಪ್ರಕರಣದ ಆರೋಪಿಯ ಜೊತೆ ಕಾಲೇಜಿನ ಒಳಗೆ ಹೋಗಿ ಪ್ರಚಾರ ಮಾಡಿರುವ ವಿಡಿಯೋ ನಾನೇ ತೋರಿಸ್ತೇನೆ. ಇದಕ್ಕೆ ಜ್ಞಾನೇಂದ್ರ ಅವರು ಚಾಲೆಂಜ್ ಮಾಡ್ತಾರಾ? ಎಂದು ಸವಾಲು ಹಾಕಿದ್ದಾರೆ. ಆರಗ ಜ್ಞಾನೇಂದ್ರ ಅವರೇ ಅತ್ಯಾಚಾರದ ಆರೋಪಿಯ ಜತೆ ಡಿಗ್ರಿ ಕಾಲೇಜ್​​ನಲ್ಲಿ ಪ್ರಚಾರದ ವೇಳೆ ವೋಟು ಕೇಳಲು ಹೋಗಿದ್ದರು. ಈಗ ನೋಡಿದರೆ ಆತ ಎಬಿವಿಪಿ ಅಧ್ಯಕ್ಷ ಅಲ್ಲ ಎನ್ನುತ್ತಿದ್ದಾರೆ. ಇದಕ್ಕೆ ನಮ್ಮ ಬಳಿ ಸಾಕ್ಷಿ ಇದೆ ಎಂದು ಕಿಮ್ಮನೆ ರತ್ನಾಕರ್ ಅವರು ಹೇಳಿದ್ದಾರೆ. ಈ ಪ್ರಕರಣದ ಸಂಬಂಧ ತೀರ್ಥಹಳ್ಳಿಯಲ್ಲಿ ಪ್ರತಿಭಟನೆ ನಡೆಸುವುದಾಗಿ ಅವರು ಈ ಸಂದರ್ಭದಲ್ಲಿ ಹೇಳಿದರು.

ಇದನ್ನೂ ಓದಿ: ಅಶ್ಲೀಲ ವಿಡಿಯೋ ಪ್ರಭಾವ : 4ರ ಬಾಲೆಯ ಮೇಲೆ 12 ವರ್ಷದ ಬಾಲಕನಿಂದ ಅತ್ಯಾಚಾರ

ಪ್ರಕರಣದ ಹಿನ್ನೆಲೆ: ಕಾಲೇಜೊಂದರ ವಿದ್ಯಾರ್ಥಿ ಹಾಗೂ ಎಬಿವಿಪಿ ತೀರ್ಥಹಳ್ಳಿ ತಾಲೂಕು ಘಟಕದ ಯುವಕನೊಬ್ಬನ ಅಶ್ಲೀಲ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದವು. ಕೆಲವು ಯುವತಿಯರ ಜೊತೆಗೆ ಈತ ಸಲುಗೆಯಿಂದ ಇರುವ ವಿಡಿಯೋ ಮಾಡಿ ಬಳಿಕ ಬ್ಲಾಕ್ ಮೇಲ್ ಮಾಡುತ್ತಿದ್ದ. ಈ ವಿದ್ಯಾರ್ಥಿಯು ಸಂಘಟನೆಯೊಂದರಲ್ಲಿ (ಎಬಿವಿಪಿ) ತೊಡಗಿಸಿಕೊಂಡಿದ್ದ. ಘಟನೆ ಬಳಿಕ ಆರೋಪಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತೀರ್ಥಹಳ್ಳಿ ಪೊಲೀಸರಿಗೆ ಮನವಿ ಮಾಡಲಾಗಿತ್ತು. ಇದಾದ ಬಳಿಕ ಕರ್ನಾಟಕ ಕಾಂಗ್ರೆಸ್ ಸಹ ಟ್ವೀಟ್ ಮಾಡಿ ಕೂಡಲೇ ಯುವಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿತ್ತು.

ಆರೋಪಿ ಬಂಧನ: ಪ್ರಕರಣಕ್ಕೆ ಸಂಬಂಧಿಸಿದಂತೆ ಅಶ್ಲೀಲ ವಿಡಿಯೋ ಚಿತ್ರೀಕರಿಸಿಕೊಂಡಿದ್ದ ವಿದ್ಯಾರ್ಥಿ ಸಂಘಟನೆಯ ಮುಖಂಡನನ್ನು ತೀರ್ಥಹಳ್ಳಿ ಪೊಲೀಸರು ಬಂಧಿಸಿದ್ದರು. ಈ ಕುರಿತು ತೀರ್ಥಹಳ್ಳಿ ಪೊಲೀಸರು ಸುಮೋಟೂ ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ವಿದ್ಯಾರ್ಥಿ ಸಂಘಟನೆ ಮುಖಂಡನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಆರಗ ಜ್ಞಾನೇಂದ್ರ ಹೇಳಿದ್ದೇನು?:ತೀರ್ಥಹಳ್ಳಿಯ ಕಾಲೇಜಿನ​ ವಿದ್ಯಾರ್ಥಿಯೊಬ್ಬ ಅಶ್ಲೀಲ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿರುವುದು ವ್ಯಾಪಕವಾಗಿ ಪ್ರಚಾರವಾಗುತ್ತಿದೆ. ಈ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಅಂತಹ ವಿಡಿಯೋ ರಿಲೀಸ್ ಮಾಡುವ ಅವಶ್ಯಕತೆ ಇಲ್ಲ, ಇಂತಹ ಅಶ್ಲೀಲತೆ ಯಾರಿಗೂ ಶೋಭೆ ತರುವುದಿಲ್ಲ. ಅವರು ಯಾವುದೇ ಸಂಘಟನೆಯಲ್ಲಿದ್ದರೂ ಸಹ ಮುಲಾಜಿಲ್ಲದೇ ಕಾನೂನು ಕ್ರಮ ಕೈಗೊಳ್ಳಬೇಕು. ಅವನೊಬ್ಬ ಕೊಳಕು ಮನುಷ್ಯ. ಈ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದು ಹೇಳಿದ್ದರು.

ಇದನ್ನೂ ಓದಿ: ಅಶ್ಲೀಲ ವಿಡಿಯೋ ವೈರಲ್ ಪ್ರಕರಣ: ಆರಗ ಜ್ಞಾನೇಂದ್ರ ಹೇಳಿದ್ದೇನು?

Last Updated : Jun 21, 2023, 10:38 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.