ಶಿವಮೊಗ್ಗ: ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ ಮಹಿಳೆಯೂರ್ವರು ಬಲಿ ಆಗಿರುವ ವರದಿ ತಡವಾಗಿ ಬೆಳಕಿಗೆ ಬಂದಿದ್ದು, ಮೃತರ ಮನೆಗೆ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ.
ಸಾಗರ ತಾಲೂಕು ಶರಾವತಿ ಹಿನ್ನೀರಿನ ಶಿಗೇಮಕ್ಕಿಯ ಹೊವಮ್ಮ (58) ಕೆಎಫ್ಡಿಗೆ ಬಲಿಯಾದ ಮಹಿಳೆಯಾಗಿದ್ದಾರೆ. ಹೊವಮ್ಮ ಮಣಿಪಾಲದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ತೀವ್ರ ಜ್ವರ ದಿಂದ ಬಳಲುತ್ತಿದ್ದ ಅವರು. ಸಾಗರ ತಾಲೂಕು ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ನಡೆಸಿದ ನಂತ್ರ ಕೆಎಫ್ಡಿ ಪಾಸಿಟಿವ್ ಪತ್ತೆಯಾದ ನಂತ್ರ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಮೃತರ ಮನೆಗೆ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಭೇಟಿ ಸಾಂತ್ವನ ಹೇಳಿದ್ದಾರೆ. ಅಲ್ಲದೆ ಎಲ್ಲರು ಕೆಎಫ್ಡಿ ಲಸಿಕೆ ಹಾಕಿಸಿಕೊಂಡು ಡಿಎಂಪಿ ಆಯಿಲ್ ಬಳಸಬೇಕು ಎಂದು ಕರೆ ನೀಡಿದರು. ಈ ವೇಳೆ ಕೆಎಫ್ಡಿ ಉಪ ನಿರ್ದೇಶಕ ಡಾ.ಕಿರಣ್, ತುಮರಿ ಗ್ರಾಮ ಪಂಚಾಯತ ಸದಸ್ಯ ಸತ್ಯನಾರಾಯಣ ಜೊತೆ ಇದ್ದರು.