ಶಿವಮೊಗ್ಗ: ಮತಾಂತರಕ್ಕೆ ಯತ್ನಿಸಿದ ಆರೋಪದ ಮೇಲೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಇಬ್ಬರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಜೋಗದ ನಿವಾಸಿಗಳಾದ ಪ್ರಶಾಂತಿ ಹಾಗೂ ಅನಿಲ್ ಎಂಬುವರು ಸಾಗರ ತಾಲೂಕು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತಾಳಗುಪ್ಪ ಗ್ರಾಮದ ಜ್ಯೋತಿ ಎಂಬುವರ ಮನೆಗೆ ಹೋಗಿ ಮತಾಂತರ ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಬಡವರೇ ಟಾರ್ಗೆಟ್:
ಬಡವರನ್ನೇ ಟಾರ್ಗೆಟ್ ಮಾಡಿಕೊಂಡು ಅವರ ಮನೆಯ ಬಡತನ, ಆರ್ಥಿಕ ಸಮಸ್ಯೆ ಹಾಗೂ ಅನಾರೋಗ್ಯವನ್ನು ನೋಡಿ ಮತಾಂತರಕ್ಕೆ ಸೆಳೆಯಲಾಗುತ್ತಿದೆ ಎಂಬ ಆರೋಪಗಳಿವೆ.
ಇದನ್ನೂ ಓದಿ:ಮತಾಂತರ ಕಡಿವಾಣಕ್ಕೆ ಮಸೂದೆ ತರುತ್ತೇವೆ: ಗೃಹ ಸಚಿವ ಆರಗ ಜ್ಞಾನೇಂದ್ರ