ಶಿವಮೊಗ್ಗ: ಸೋಂಕು ತಡೆಗೆ ರಾಜ್ಯದಲ್ಲಿ ಲಾಕ್ಡೌನ್ ಜಾರಿಯಲ್ಲಿದ್ದು ಜವಾಬ್ದಾರಿ ಮರೆತು ರಸ್ತೆಗಳಲ್ಲಿ ಓಡಾಡುವ ಸವಾರರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಾರೆ. ಜೊತೆಗೆ ರೋಗ ನಿಯಂತ್ರಣಕ್ಕಿರುವ ಕಟ್ಟುನಿಟ್ಟಿನ ನಿಯಮವನ್ನು ಮೀರುವ ಇಲ್ಲಿನ ಅಂಗಡಿ ಮಾಲೀಕರ ವಿರುದ್ಧ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆ 2020 ಅಡಿಯಲ್ಲಿ ಪೊಲೀಸರು 01 ಪ್ರಕರಣ ದಾಖಲಿಸಿಕೊಂಡಿದ್ದಾರೆ.
![police alert](https://etvbharatimages.akamaized.net/etvbharat/prod-images/11838223_dtert.jpg)
ಸರ್ಕಾರದ ನಿಯಮ ಉಲ್ಲಂಘನೆ ಮಾಡಿ ಅನಗತ್ಯವಾಗಿ ಓಡಾಡುತ್ತಿದ್ದ ಒಟ್ಟು 282 ವಾಹನಗಳನ್ನು (262 ದ್ವಿಚಕ್ರ ವಾಹನಗಳು ಮತ್ತು 04 ಆಟೋಗಳು, 14 ಕಾರುಗಳು) ವಶಪಡಿಸಿಕೊಳ್ಳಲಾಗಿದೆ. ಒಟ್ಟು 266 ಪ್ರಕರಣಗಳನ್ನು ದಾಖಲಿಸಿ 1,28,800 ರೂ. ದಂಡವನ್ನು ಪೊಲೀಸರು ವಸೂಲಿ ಮಾಡಿದ್ದಾರೆ.
ಇದನ್ನೂ ಓದಿ: ಕೋವಿಡ್ ರೋಗಿಗಳು ಮತ್ತು ಸಂಬಂಧಿಗಳಿಗೆ ಸಂಕಲ್ಪ ಸೇವಾ ಪ್ರತಿಷ್ಠಾನದ ಸೇವೆ