ETV Bharat / state

ಮತದಾರರ ಅಂತಿಮ ಪಟ್ಟಿ ಪ್ರಕಟ: ಜಿಲ್ಲೆಯಲ್ಲಿ ಒಟ್ಟು 14,41,833 ಅರ್ಹ ಮತದಾರರು - ಪರಿಷ್ಕರಣೆಗೊಂಡ ಅಂತಿಮ ಮತದಾರರ ಪಟ್ಟಿ

ಶಿವಮೊಗ್ಗ ಜಿಲ್ಲಾಧಿಕಾರಿ ವಿವಿಧ ರಾಜಕೀಯ ಪ್ರತಿನಿಧಿಗಳ ಸಮ್ಮುಖದಲ್ಲಿ ಪರಿಷ್ಕರಣೆಗೊಂಡ ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ.

DC meeting with Political parties
ವಿವಿಧ ಪಕ್ಷಗಳ ಪ್ರತಿನಿಧಿಗಳ ಜೊತೆ ಡಿಸಿ ಆರ್.ಸೆಲ್ವಮಣಿ ಸಭೆ
author img

By

Published : Jan 6, 2023, 4:42 PM IST

ಶಿವಮೊಗ್ಗ: ಜಿಲ್ಲೆಯ ಮತದಾರರ ಪಟ್ಟಿಯನ್ನು ಪರಿಷ್ಕರಣೆಗೊಳಿಸಲಾಗಿದ್ದು, ಅಂತಿಮ ಮತದಾರರ ಪಟ್ಟಿಯಲ್ಲಿ 7,27,310 ಮಹಿಳಾ ಮತದಾರರು ಹಾಗೂ 7,14,490 ಪುರುಷ ಮತದಾರರು ಸೇರಿ ಒಟ್ಟು 14,41,833 ಅರ್ಹ ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್ ಸೆಲ್ವಮಣಿ ಅವರು ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ 2023ರ ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಅಂತಿಮ ಮತದಾರರ ಪಟ್ಟಿಯಲ್ಲಿ ಮತದಾರರ ಲಿಂಗಾನುಪಾತ ಉತ್ತಮಗೊಂಡಿದ್ದು, 1 ಸಾವಿರ ಪುರುಷ ಮತದಾರರಿಗೆ 1,018 ಮಹಿಳಾ ಮತದಾರರು ಇದ್ದಾರೆ. ಮತದಾರರ ಪಟ್ಟಿಯಲ್ಲಿ ಹೊಸದಾಗಿ 22,185 ಯುವ ಮತದಾರರ ಸೇರ್ಪಡೆಯಾಗಿದ್ದು, ಇವರಲ್ಲಿ 11 760ಪುರುಷ ಹಾಗೂ 10,419 ಮಹಿಳಾ ಮತದಾರರು ಇದ್ದಾರೆ. ಜಿಲ್ಲೆಯಲ್ಲಿ ಪ್ರಸ್ತುತ 1,775 ಮತಗಟ್ಟೆಗಳು ಇವೆ ಎಂದರು.

ವಿಧಾನಸಭಾ ಕ್ಷೇತ್ರವಾರು ವಿವರ: ಮತದಾರರ ಅಂತಿಮ ಪಟ್ಟಿಯಲ್ಲಿ ಶಿವಮೊಗ್ಗ ಗ್ರಾಮಾಂತರದಲ್ಲಿ 1,03,534 ಪುರುಷ, 1,04,525 ಮಹಿಳಾ, ಮೂವರು ತೃತೀಯ ಲಿಂಗಿ ಸೇರಿದಂತೆ ಒಟ್ಟು 2,08,062 ಮತದಾರರು ಇದ್ದಾರೆ. ಭದ್ರಾವತಿ ಕ್ಷೇತ್ರದಲ್ಲಿ 1,01,058 ಪುರುಷ, 1,06,546 ಮಹಿಳಾ, ಐವರು ತೃತೀಯ ಲಿಂಗಿ ಸೇರಿದಂತೆ ಒಟ್ಟು 1,06,546 ಮತದಾರರು ಇದ್ದಾರೆ.

ಶಿವಮೊಗ್ಗ ನಗರ ಕ್ಷೇತ್ರದಲ್ಲಿ 1,23,770 ಪುರುಷ, 1,29,204 ಮಹಿಳಾ, 15 ತೃತೀಯ ಲಿಂಗಿ ಸೇರಿದಂತೆ 2,52,989 ಮತದಾರರು ಇದ್ದಾರೆ. ತೀರ್ಥಹಳ್ಳಿ ಕ್ಷೇತ್ರದಲ್ಲಿ 91,376 ಪುರುಷ, 93,475 ಮಹಿಳಾ, ಮೂವರು ತೃತೀಯ ಲಿಂಗಿ ಸೇರಿದಂತೆ 1,84,854 ಮತದಾರರು ಇದ್ದಾರೆ. ಶಿಕಾರಿಪುರ ಕ್ಷೇತ್ರದಲ್ಲಿ 98,281 ಪುರುಷ, 97,086 ಮಹಿಳಾ, ನಾಲ್ವರು ತೃತೀಯ ಲಿಂಗಿ ಸೇರಿದಂತೆ ಒಟ್ಟು 1,95,371 ಮತದಾರರು ಇದ್ದಾರೆ. ಸೊರಬ ಕ್ಷೇತ್ರದಲ್ಲಿ 97,070 ಪುರುಷ, 1,01,326 ಮಹಿಳಾ, ಇಬ್ಬರು ತೃತೀಯ ಲಿಂಗಿ ಸೇರಿದಂತೆ ಒಟ್ಟು 1,92,220 ಮತದಾರರು ಇದ್ದಾರೆ. ಸಾಗರ ಕ್ಷೇತ್ರದಲ್ಲಿ 99,401 ಪುರುಷ, 1,01,326 ಮಹಿಳಾ, ಒಂದು ತೃತೀಯ ಲಿಂಗಿ ಸೇರಿದಂತೆ ಒಟ್ಟು 2,00,728 ಮತದಾರರು ಇದ್ದಾರೆ. ಲಿಂಗಾನುಪಾತ ಅತಿ ಹೆಚ್ಚು ಭದ್ರಾವತಿ ಕ್ಷೇತ್ರದಲ್ಲಿ 1,054 ಇದ್ದು, ಅತಿ ಕಡಿಮೆ ಸೊರಬ ಕ್ಷೇತ್ರದಲ್ಲಿ 980 ಇದೆ ಎಂದರು.

ಕಳೆದ ನವೆಂಬರ್ 9 ರಂದು ಪ್ರಕಟಿಸಲಾಗಿದ್ದ ಕರಡು ಮತದಾರರ ಪಟ್ಟಿಯಲ್ಲಿ ಒಟ್ಟು 14,34,138 ಮತದಾರರ ಹೆಸರು ಪ್ರಕಟಿಸಲಾಗಿತ್ತು. ಅಂತಿಮ ಪಟ್ಟಿಯಲ್ಲಿ 40,767 ಮತದಾರರನ್ನು ಹೊಸದಾಗಿ ಸೇರ್ಪಡೆಗೊಳಿಸಲಾಗಿದ್ದು, 33,072 ಮತದಾರರ ಹೆಸರು ಕೈ ಬಿಡಲಾಗಿದೆ. 11,651 ತಿದ್ದುಪಡಿ ಮಾಡಲಾಗಿದೆ. ತೆಗೆದು ಹಾಕಿರುವುದಕ್ಕೆ 11,873 ಮರಣ, 17,064 ಸ್ಥಳಾಂತರ, 1,058 ಪುನರಾವರ್ತನೆ ಮತ್ತು 3,077 ವಲಸೆ ಕಾರಣವಾಗಿದೆ. ಕರಡು ಪಟ್ಟಿಯಲ್ಲಿ ಲಿಂಗಾನುಪಾತ 1ಸಾವಿರ ಪುರುಷ ಮತದಾರರಿಗೆ 1,014 ಮಹಿಳಾ ಮತದಾರರು ಇದ್ದರು ಎಂದು ಮಾಹಿತಿ ನೀಡಿದರು.

ಸೇರ್ಪಡೆಗೆ ಅವಕಾಶ: 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣಾ ಸಂಬಂಧ ಅರ್ಹ ಮತದಾರರು ಮತದಾರರ ಪಟ್ಟಿಗೆ ಚುನಾವಣಾ ಆಯೋಗ ನಿಗದಿಪಡಿಸುವ ದಿನಾಂಕದವರೆಗೂ ಹೆಸರು ಸೇರಿಸಲು ಅವಕಾಶವಿರುತ್ತದೆ. ನಮೂನೆ -6 ಸೇರ್ಪಡೆ, ನಮೂನೆ-6ಎ ಅನಿವಾಸಿ ಭಾರತೀಯರು ಹೆಸರು ನೊಂದಾಯಿಸಿಕೊಳ್ಳಲು, 6 - ಬಿ ಮತದಾರರ ಪಟ್ಟಿಯೊಂದಿಗೆ ಆಧಾರ್ ಜೋಡಣೆ ಮಾಡಿಕೊಳ್ಳಲು, ನಮೂನೆ-7 ತೆಗೆದು ಹಾಕಲು, ನಮೂನೆ-8ರಲ್ಲಿ ತಿದ್ದುಪಡಿ, ವರ್ಗಾವಣೆ, ಬದಲಿ ಎಪಿಕ್‌ಗೆ ಮನವಿ ಮತ್ತು ಅಂಗವೈಕಲ್ಯ ಹೊಂದಿರುವ ಮತದಾರರು ವಿವರ ದಾಖಲಿಸಲು ಅವಕಾಶವಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ ನಾಗೇಂದ್ರ ಹೊನ್ನಳ್ಳಿ ತಿಳಿಸಿದರು.

ಮತದಾರರ ಪಟ್ಟಿಯ ಹೆಸರುಗಳು https://ceo.karnataka.gov.in ನಲ್ಲಿ ಲಭ್ಯವಿದ್ದು, ಮತದಾರರು ತಮ್ಮ ಹೆಸರನ್ನು ಖಚಿತಪಡಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು. ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

ಇದನ್ನೂ ಓದಿ: 221 ವಿಧಾನಸಭೆ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿ ಪ್ರಕಟ.. ಚುನಾವಣೆಗೆ ಸಿದ್ಧತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.