ಶಿವಮೊಗ್ಗ: ಮುಕ್ತ ವ್ಯಾಪಾರ ಒಪ್ಪಂದದ ವ್ಯಾಪ್ತಿಯಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯ ಶಿವಮೊಗ್ಗ ಹಾಲು ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಶಿಮೂಲ್ ಒಕ್ಕೂಟದಿಂದ ಶಿವಮೊಗ್ಗದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಅಧ್ಯಕ್ಷರು, ನಿರ್ದೇಶಕರು, ನೌಕರರು ಹಾಗೂ ರೈತರು ಭಾಗಿಯಾಗಿದ್ದರು. ಪ್ರಧಾನಿ ಮೋದಿಯವರು ಎಫ್ಟಿಎ/ಆರ್ಸಿಇಪಿ ಒಪ್ಪಂದ ಮಾಡಿಕೊಂಡರೆ ವಿದೇಶಗಳಿಂದ ಕಳಪೆಮಟ್ಟದ ಹಾಲಿನ ಉತ್ಪನ್ನಗಳು ದೇಶಕ್ಕೆ ಅಮದು ಆಗುತ್ತವೆ.
ಅತಿ ಕಡಿಮೆ ದರದಲ್ಲಿ ಹಾಲು ಉತ್ಪನ್ನಗಳು ಬರುವುದರಿಂದ ದೇಶದ ಹಾಲು ಉತ್ಪಾದಕರಿಗೆ ನಷ್ಟವುಂಟಾಗುತ್ತದೆ. ಇನ್ನು ಹಾಲು ಉತ್ಪಾದನೆ ನಂಬಿಕೊಂಡು ದೇಶದಲ್ಲಿ ಕೋಟ್ಯಂತರ ಮಂದಿ ಜೀವನ ಸಾಗಿಸುತ್ತಿದ್ದಾರೆ.
ಮೋದಿಯವರು ಜಾಗತಿಕ ಮಟ್ಟದಲ್ಲಿ ಒಪ್ಪಂದ ಮಾಡಿಕೊಂಡಿರೆ ಕೋಟ್ಯಂತರ ಮಂದಿ ಬೀದಿಗೆ ಬರುತ್ತಾರೆ. ಕೂಡಲೇ ಮೋದಿಯವರು ಮುಕ್ತ ವ್ಯಾಪಾರ ಒಪ್ಪಂದದಿಂದ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಕೈ ಬಿಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.