ಶಿವಮೊಗ್ಗ: ಜಿಲ್ಲೆ ಸೇರಿದಂತೆ ದಾವಣಗೆರೆ, ಚಿಕ್ಕಮಗಳೂರು ಹಾಗೂ ಐದಾರು ಜಿಲ್ಲೆಯ ಜೀವನಾಡಿ ಭದ್ರಾ ಅಣೆಕಟ್ಟಿಗೆ ರಾಜ್ಯ ರೈತ ಸಂಘದಿಂದ ಬಾಗಿನ ಅರ್ಪಿಸಲಾಯಿತು.
ಭದ್ರಾ ಅಣೆಕಟ್ಟೆ ತುಂಬಲು ಎರಡು ಅಡಿ ಬಾಕಿ ಇದ್ದು, ಈಗಾಗಲೇ ಮಳೆ ಪ್ರಮಾಣ ಸಹ ಕಡಿಮೆಯಾಗಿದೆ. ಇದರಿಂದ ಅಣೆಕಟ್ಟೆಗೆ ಕೇವಲ 3 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಸದ್ಯ ತುಂಬಿರುವ ಭದ್ರೆಗೆ ರಾಜ್ಯ ರೈತ ಸಂಘದ ಮುಖಂಡರಾದ ಕೆ.ಟಿ. ಗಂಗಾಧರ್ ರವರ ನೇತೃತ್ವದಲ್ಲಿ ಬಾಗಿನ ಅರ್ಪಿಸಲಾಯಿತು.
ಇದೇ ರೀತಿ ಪ್ರತಿವರ್ಷ ಭದ್ರೆ ತುಂಬಿ, ತನ್ನನ್ನು ನಂಬಿದ ರೈತರ ಮುಖದಲ್ಲಿ ಮಂದಹಾಸ ಮೂಡಿಸಲಿ ಎಂದು ಬೇಡಿಕೊಳ್ಳಲಾಯಿತು. ಈ ವೇಳೆ ರೈತರಾದ ವೀರೇಶ ಸೇರಿ ಮೂರು ಜಿಲ್ಲೆಯ ರೈತರು ಭಾಗಿಯಾಗಿದ್ದರು.