ETV Bharat / state

ಹಳೆ ಹೊರಗುತ್ತಿಗೆ ನೌಕರರನ್ನೇ ಸೇವೆಯಲ್ಲಿ ಮುಂದುವರಿಸಲು ಈಶ್ವರಪ್ಪ ಸೂಚನೆ - KB Sivakumar DC

ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಅಭಿಯಾನದ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ಹಲವು ಬೇಡಿಕೆಗಳ ಈಡೇರಿಸುವಂತೆ ಮನವಿ ಮಾಡಿ ಧರಣಿ ಸಹ ನಡೆಸಿದ್ದರು. ಈ ಹಿನ್ನೆಲೆ ಎಲ್ಲಾ ಹಳೆಯ ಗುತ್ತಿಗೆ ನೌಕರರನ್ನೇ ಸೇವೆಯಲ್ಲಿ ಮುಂದುವರಿಸುವಂತೆ ಈಶ್ವರಪ್ಪ ಸೂಚಿಸಿದ್ದಾರೆ.

KS Eshwarappa
ಕೆ.ಎಸ್​​ ಈಶ್ವರಪ್ಪ
author img

By

Published : Oct 1, 2020, 4:53 PM IST

ಶಿವಮೊಗ್ಗ: ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಕಾಲೇಜಿನ ಹೊರ ಗುತ್ತಿಗೆ ಕಾರ್ಮಿಕರನ್ನು ಸೇವೆಯಲ್ಲಿ ಮುಂದುವರೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇಂದು ಸಿಮ್ಸ್ ಮೆಡಿಕಲ್‌ ಕಾಲೇಜಿನಲ್ಲಿ ನಿರ್ದೇಶಕ ಡಾ.ಸಿದ್ದಪ್ಪ, ಜಿಲ್ಲಾ‌ ಸರ್ಜನ್ ಡಾ.ರಘುನಂದನ್, ಮೆಗ್ಗಾನ್​ ಎಂ.ಎಸ್.‌ಡಾ.ಶ್ರೀಧರ್ ನೇತೃತ್ವದಲ್ಲಿ ಸಭೆ ನಡೆಸಿದರು. ಸಭೆಯಲ್ಲಿ ಎಲ್ಲರ ಅಭಿಪ್ರಾಯ ಪಡೆದುಕೊಂಡು ಹಳೆಯ ಹೊರಗುತ್ತಿಗೆ ಕಾರ್ಮಿಕರನ್ನೇ ಮುಂದುವರೆಸಲು ತೀರ್ಮಾನಿಸಲಾಯಿತು.

ಸಚಿವ ಕೆ.ಎಸ್ ಈಶ್ವರಪ್ಪ, ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ನೇತೃತ್ವದಲ್ಲಿ ಸಭೆ

ಹೊರಗುತ್ತಿಗೆಯಲ್ಲಿ 183 ಜನ ಸ್ವೀಪರ್ಸ್, ಲ್ಯಾಬ್ ಅಟೆಂಡರ್ 81, ನರ್ಸ್-93, ಫಾರ್ಮಸಿಸ್ಟ್- 8 ಹಾಗೂ 130 ಮಂದಿ ಸೆಕ್ಯೂರಿಟಿಗಳಿದ್ದಾರೆ. ಸೆಕ್ಯೂರಿಟಿಯವರನ್ನು ಬಿಟ್ಟು ಉಳಿದವರನ್ನು ಹಾಗೆಯೇ ಮುಂದುವರೆಸಲಾಗುವುದು ಎಂದರು. ಸದ್ಯ 130 ಜನ ಸೆಕ್ಯೂರಿಟಿಗಳಿದ್ದಾರೆ. ಇದರಲ್ಲಿ ಸದ್ಯ‌ 50 ಜನರನ್ನು ಹೋಂಗಾರ್ಡ್ ಮೂಲಕ ತೆಗೆದುಕೊಳ್ಳಲಾಗುವುದು. ಉಳಿದ 80 ಜನರನ್ನು ಏಜೆನ್ಸಿ ಮೂಲಕ ತೆಗೆದುಕೊಳ್ಳಲಾಗುವುದು ಎಂದರು.‌

ಹೊರಗುತ್ತಿಗೆ ನೌಕರರೆಲ್ಲಾ ಬಡವರು, ಅವರು ಬೇರೆಯವರ ಮಾತು ಕೇಳಿ ಧರಣಿ ನಡೆಸಿದ್ದರು. ನಾನು ಅವರಿಗೆ ನಿನ್ನೆ ಬುದ್ದಿ ಹೇಳಿದ್ದೇನೆ. ಅವರು ನನ್ನ ಮಾತು ಕೇಳಿ ಧರಣಿ ವಾಪಸ್ ಪಡೆದುಕೊಂಡಿದ್ದಾರೆ. ಕೋವಿಡ್ ಸಮಯದಲ್ಲಿ ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದು ತಿಳಿ ಹೇಳಲಾಗಿದೆ ಎಂದು ಸಚಿವ ಈಶ್ವರಪ್ಪ ತಿಳಿಸಿದ್ದಾರೆ.

ಇದನ್ನೂ ಓದಿ: ಗುತ್ತಿಗೆ ಕಾರ್ಮಿಕರ ಬೇಡಿಕೆ ಈಡೇರಿಸಿ: ಸರ್ಕಾರಕ್ಕೆ ವಿಶ್ವರಾಧ್ಯ ಹೆಚ್​.ಯಮೋಜಿ ಆಗ್ರಹ

ಇನ್ನೂ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್​ ಮಾತನಾಡಿ, ನಿಮ್ಮ ಬೇಡಿಕೆಗಳನ್ನು ಆಸ್ಪತ್ರೆಯ ನಿರ್ದೇಶಕರ ಬಳಿ ಚರ್ಚೆ ಮಾಡಿ, ಅಲ್ಲಿ ಸರಿಯಾದ ಪ್ರತಿಕ್ರಿಯೆ ಸಿಗದೆ ಹೋದರೆ, ನಂತರ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಬೇಕಾಗುತ್ತದೆ. ನೀವೆಲ್ಲ ನಾಳೆಯಿಂದಲೇ ಕೆಲಸಕ್ಕೆ ಬನ್ನಿ, ಕೋವಿಡ್ ಸಂದರ್ಭದಲ್ಲಿ ಸಹಕಾರ ಅಗತ್ಯವಾಗಿದೆ. ಇದನ್ನು ಮನಗಂಡು ಕೆಲಸ ಮಾಡಿ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.