ಶಿವಮೊಗ್ಗ: ತಾಲೂಕು ಕಂದಾಯ ಇಲಾಖಾ ನೌಕರರಿಗೆ ಕೋವಿಡ್ ಸುರಕ್ಷತಾ ಪಡೆಯಿಂದ ನಗರದ ಜಿಲ್ಲಾಧಿಕಾರಿ ಸಂಭಾಗಣದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದ ಔಷಧ ಕಿಟ್ ಅನ್ನು ಸಚಿವ ಕೆ. ಎಸ್. ಈಶ್ವರಪ್ಪ ವಿತರಿಸಿದರು. ಈ ವೇಳೆ, ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ. ಬಿ. ಶಿವಕುಮಾರ್ ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಈಶ್ವರಪ್ಪ, ಆತ್ಮವಿಶ್ವಾಸದಿಂದ ಕೊರೊನಾ ಎದುರಿಸಬಹುದು. ಹಾಗಾಗಿ ಯಾರೂ ಕೂಡಾ ಕೊರೊನಾ ತಗುಲಿದಾಗ ಆತ್ಮ ವಿಶ್ವಾಸ ಕಳೆದುಕೊಳ್ಳಬಾರದು ಎಂದರು.
ಜನರು ಈಗ ಸ್ವಯಂ ಜಾಗೃತರಾಗಿ ಕೋವಿಡ್ ನಿಯಮ ಪಾಲಿಸುತ್ತಿದ್ದಾರೆ. ಹೀಗಾಗಿ ಕೊರೊನಾ ನಿಯಂತ್ರಣವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.