ಶಿವಮೊಗ್ಗ: ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟ್ ಬರೆದಿದ್ದು, ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದೂರು ದಾಖಲು ಮಾಡಿಕೊಂಡಿದ್ದಾರೆ.
ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಗಣೇಶ್(22) ಈ ನಿರ್ಧಾರ ಕೈಗೊಂಡಿರುವ ಯುವಕ. ಸಾಗರದ ಕೆಳದಿ ಗ್ರಾಮದ ವಿದ್ಯಾರ್ಥಿಯಾಗಿದ್ದ ಈತ ಗ್ರಾಮದ ಸುಬ್ರಮಣ್ಯ ಎಂಬುವವರ ಮಗನೆಂದು ತಿಳಿದು ಬಂದಿದೆ. ಉಡುಪಿಯಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದನು. ಆದರೆ, ಲಾಕ್ಡೌನ್ ಆಗಿದ್ದ ಕಾರಣ ಕಳೆದ ಕೆಲ ತಿಂಗಳ ಹಿಂದೆ ತನ್ನೂರಿಗೆ ಆಗಮಿಸಿದ್ದನು.
ಇದನ್ನೂ ಓದಿರಿ: ಮದುವೆ ಬೇಡ ಎಂದು ಮರ್ಮಾಂಗ ಕತ್ತರಿಸಿಕೊಂಡ ಯುವಕ... ಕಾರಣ?
ಇದು ಏಕಾಏಕಿ ಆತ್ಮಹತ್ಯೆಗೆ ಶರಣಾಗಿದ್ದು, ಅದಕ್ಕೂ ಮುಂಚಿತವಾಗಿ ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು, ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಗಣೇಶ್ ಇಂದು ಬೆಳಗ್ಗೆ ಆನ್ಲೈನ್ ಕ್ಲಾಸ್ ಮುಗಿಸಿಕೊಂಡು ರೂಂನೊಳಗೆ ಸೇರಿಕೊಂಡಿದ್ದನು. ತಾಯಿ ದೇವಾಲಯಕ್ಕೆ ಹೋಗಿ ಬರುವಷ್ಟರಲ್ಲಿ ಈ ನಿರ್ಧಾರ ಕೈಗೊಂಡಿದ್ದಾನೆ. ಗಣೇಶನಿಗೆ ಐವರು ಸಹೋದರಿಯರಿದ್ದು, ಈತ ಕೊನೆಯವನಾಗಿದ್ದನು. ಘಟನೆಗೆ ಸಂಬಂಧಿಸಿದಂತೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.