ETV Bharat / state

ಶತಾಯುಷಿ ಮತದಾರರಿಗೆ ಗೌರವ ಪ್ರಮಾಣ ಪತ್ರ ನೀಡಿದ ಚುನಾವಣಾ ಆಯೋಗ

ಭಾರತ ಚುನಾವಣಾ ಆಯೋಗವು ಶತಾಯುಷಿ ಮತದಾರರನ್ನು ಗುರುತಿಸಿ ಗೌರವ ಸರ್ಮಪಣೆ ಮಾಡಿದೆ.

election commission
ಶತಾಯುಷಿ ಮತದಾರರು
author img

By

Published : Oct 2, 2022, 9:21 AM IST

ಶಿವಮೊಗ್ಗ: ಅಂತಾರಾಷ್ಟ್ರೀಯ ಹಿರಿಯರ ದಿನಾಚರಣೆ ಅಂಗವಾಗಿ ಚುನಾವಣಾ ಆಯೋಗವು ದೇಶಾದ್ಯಂತ ಶತಾಯುಷಿ ಮತದಾರರನ್ನು ಗುರುತಿಸಿ ಅವರಿಗೆ ಗೌರವ ಪೂರ್ವಕವಾಗಿ ಪ್ರಮಾಣ ಪತ್ರ ನೀಡಿದೆ.

ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಮೂರು ಜನ‌ ಶತಾಯುಷಿಗಳನ್ನು ಗುರುತಿಸಿ, ಮಹಾನಗರ ಪಾಲಿಕೆಯ ಚುನಾವಣಾ ವಿಭಾಗದ ಅಧಿಕಾರಿಗಳು ಶನಿವಾರ ಗೌರವ ಪೂರ್ವಕವಾಗಿ ಪ್ರಮಾಣ ಪತ್ರವನ್ನು ನೀಡಿದ್ದಾರೆ. ಬೊಮ್ಮನಕಟ್ಟೆ ನಿವಾಸಿ ಕರಿಯಮ್ಮ(107), ಗುಂಡಪ್ಪ ಶೆಟ್​ನ ನಿವಾಸಿ ಸೀತರಾಮ್ ಭಟ್(101) ಹಾಗೂ ಓ.ಟಿ.ರಸ್ತೆ ಪುಟ್ಟನಂಜಪ್ಪನ ಕೇರಿಯ‌ ನಿವಾಸಿ ಕೌಶಲ್ಯಯಮ್ಮ(100) ಗೆ ಚುನಾವಣಾ ಆಯೋಗ ಗೌರವ ಸರ್ಮಪಿಸಿದೆ.‌

ಇದನ್ನೂ ಓದಿ: ಶಾಲೆಯಲ್ಲಿ ಚುನಾವಣೆ: ಮೊಬೈಲ್ ಇವಿಎಂ ಬಳಸಿ ಮತದಾನ ಮಾಡಿದ ವಿದ್ಯಾರ್ಥಿಗಳು

ಭಾರತ ಚುನಾವಣಾ ಆಯೋಗದ ರಾಜೀವ್ ಕುಮಾರ್ ಅವರು ಹಿರಿಯ ಮತದಾರರಿಗೆ ಗೌರವಯುತವಾಗಿ ಪತ್ರ ಬರೆದಿದ್ದಾರೆ. 'ದೇಶದ ಚುನಾವಣಾ ಪ್ರಕ್ರಿಯೆಯಲ್ಲಿ ನಿಮ್ಮ ನಿರಂತರ ಕೊಡುಗೆಗಾಗಿ ಧನ್ಯವಾದ ತಿಳಿಸಲು ಆಯೋಗವು ಹರ್ಷಿಸುತ್ತದೆ. ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಉತ್ಸಾಹದಿಂದ ನಿರಂತರವಾಗಿ ಭಾಗವಹಿಸುತ್ತಾ ಆ ಮೂಲಕ ಭಾರತದ ಪ್ರಜಾಪ್ರಭುತ್ವ ಬಲಪಡಿಸಿ, ನೀವು ದೇಶದ ಯುವಕರಿಗೆ ಮಾದರಿಯಾಗಿದ್ದೀರಿ. ನಿಮ್ಮಂತಹ ಜವಾಬ್ದಾರಿಯುತ ಹಿರಿಯ ಮತದಾರರಿಂದಾಗಿ ಜಗತ್ತಿನ ಪ್ರಜಾಪ್ರಭುತ್ವ ಪ್ರವರ್ಧಮಾನವಾಗಿ ಉಜ್ವಲಿಸುತ್ತಿದೆ. ನೀವು ಬದಲಾಗುತ್ತಿರುವ ದೇಶದ ಸಾಮಾಜಿಕ, ರಾಜಕೀಯ, ಆರ್ಥಿಕ, ಅಭಿವೃದ್ಧಿ ಮತ್ತು ತಂತ್ರಜ್ಞಾನ ವಿಕಾಸಕ್ಕೆ ಸಾಕ್ಷಿಯಾಗಿದ್ದೀರಿ' ಎಂದು ಗೌರವ ಸಮರ್ಪಣೆ ಮಾಡಿದ್ದಾರೆ.

ಇದನ್ನೂ ಓದಿ: ಚುನಾವಣಾ ಆಯೋಗ ಬದುಕಿದೆಯೋ ಸತ್ತಿದೆಯೋ.. ಪರಿಷತ್‌ ಎಲೆಕ್ಷನ್‌ ಬಗ್ಗೆ ಸಚಿವ ಈಶ್ವರಪ್ಪ ಪ್ರತಿಕ್ರಿಯೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.