ETV Bharat / state

ಸುಷ್ಮಾ ಸ್ವರಾಜ್​ಗೆ ಜಿಲ್ಲಾ ಬಿಜೆಪಿಯಿಂದ ಶ್ರದ್ಧಾಂಜಲಿ! - shivamogga latest news

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ  ನಡೆದ ಶ್ರದ್ದಾಂಜಲಿ  ಸಭೆಯಲ್ಲಿ, ಪಕ್ಷದ ಪ್ರಮುಖ ನಾಯಕರು  ಸುಷ್ಮಾ ಸ್ವರಾಜ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ  ಸಂತಾಪ ಸೂಚಿಸಿದರು.

ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​ಗೆ ಜಿಲ್ಲಾ ಬಿಜೆಪಿಯಿಂದ ಶ್ರದ್ದಾಂಜಲಿ
author img

By

Published : Aug 7, 2019, 8:49 PM IST

ಶಿವಮೊಗ್ಗ: ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಶ್ರದ್ದಾಂಜಲಿ ಸಭೆಯಲ್ಲಿ, ಪಕ್ಷದ ಪ್ರಮುಖ ನಾಯಕರು ಸುಷ್ಮಾ ಸ್ವರಾಜ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿಸುವ ಮೂಲಕ ಸಂತಾಪ ಸೂಚಿಸಿದರು.

ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​ಗೆ ಜಿಲ್ಲಾ ಬಿಜೆಪಿಯಿಂದ ಶ್ರದ್ದಾಂಜಲಿ

ಈ ವೇಳೆ ಮಾತಾನಾಡಿದ ಶಾಸಕ ಕೆ.ಎಸ್​.ಈಶ್ವರಪ್ಪ, ಸುಷ್ಮಾ ಸ್ವರಾಜ್ ಅವರು ಮಹಿಳೆಯಾಗಿ ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದರು. ಅವರು ಪಕ್ಷವನ್ನು ಸಹ‌‌ ಅಷ್ಟೆ ಚೆನ್ನಾಗಿ ಮುನ್ನಡೆಸಿಕೊಂಡು ಹೋಗಿದ್ರು. ಅವರು ಮಂತ್ರಿಯಾಗಿ, ಸಿಎಂ ಆಗಿ, ವಿದೇಶಾಂಗ ಸಚಿವೆಯಾಗಿ ಸಾಕಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ. ಅಲ್ಲದೇ, ತಮಗೆ ವಹಿಸಿದ ಜವಾಬ್ದಾರಿಯನ್ನು ಅಷ್ಟೆ ಚೆನ್ನಾಗಿ‌ ನಿಭಾಯಿಸಿದ್ದಾರೆ. ಅವರು ನಮ್ಮಂತಹ ಸಾವಿರಾರು ಕಾರ್ಯಕರ್ತರಿಗೆ ಮಾರ್ಗದರ್ಶಕರಾಗಿದ್ದರು. ಅವರು ಬಳ್ಳಾರಿಗೆ ಬಂದು ಚುನಾವಣೆ ಎದುರಿಸಬೇಕು ಎಂದು ಹೇಳಿದಾಗ ಪಕ್ಷದ ಕಟ್ಟಾಳುವಿನಂತೆ ಚುನಾವಣೆ ಎದುರಿಸಿ, ಆ ಭಾಗದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ್ದರು. ಅವರ ಅಗಲಿಕೆ ನಮಗೆ ತೀವ್ರ ನೋವುಂಟು ಮಾಡಿದೆ. ನಮ್ಮ ತಾಯಿ ಕಳೆದುಕೊಂಡಷ್ಟೇ ದುಃಖವಾಗಿದೆ. ಅವರ ಆತ್ಮಕ್ಕೆ ಸಿಗಲಿ ಎಂದರು.

ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಮಾತಾನಾಡಿ, ಸುಷ್ಮಾ ಸ್ವರಾಜ್ ಅವರು ಹರಿಯಾಣದಲ್ಲಿ ಮಂತ್ರಿಯಾಗಿ, ದೆಹಲಿಯ ಸಿಎಂ ಆಗಿ ಕೇಂದ್ರದಲ್ಲಿ ವಿದೇಶಾಂಗ ಸಚಿವೆಯಾಗಿ ಕೆಲಸ ಮಾಡಿದ್ದಾರೆ. ಅವರದ್ದು‌ ಶಿಸ್ತು ಬದ್ದ ಜೀವನವಾಗಿತ್ತು. ಬಳ್ಳಾರಿ ಚುನಾವಣೆ ವೇಳೆ‌ ಅವರ ಸಂಪೂರ್ಣ ಚುನಾವಣಾ ಉಸ್ತುವಾರಿ ನೋಡಿಕೊಂಡಿದ್ದೆ. ಅವರು ರಾಜ್ಯಕ್ಕೆ ಬಂದಾಗ ಅವರ ಭಾಷಣಗಳನ್ನು ಭಾಷಾಂತರ ಮಾಡುವ ಸೌಭಾಗ್ಯ ನನ್ನದಾಗಿತ್ತು ಎಂದು ನೆನಪಿಸಿಕೊಂಡಿದ್ದಾರೆ.

ಇನ್ನೂ, ಡಿ.ಹೆಚ್.ಶಂಕರಮೂರ್ತಿರವರ ಪುತ್ರ ಡಿ.ಎಸ್.ಅರುಣ್ ಮಾತಾನಾಡಿ, ಸುಷ್ಮಾ ಸ್ವರಾಜ್ ಶಿವಮೊಗ್ಗ ನಗರಕ್ಕೆ ಬಂದಾಗ ಅವರನ್ನು ಹೆಲಿಪಾಡ್​ನಿಂದ ನನ್ನ ಕಾರಿನಲ್ಲೆ ಪ್ರಚಾರ ಸಭೆಗೆ ಕರೆದುಕೊಂಡು ಬಂದಿದ್ದೆ. ಅವರು ಸರಳ ಸ್ವಭಾವದವರು. ನಮ್ಮನ್ನು ತಮ್ಮ ಮನೆ ಮಗನಂತೆ ನೋಡಿದರು ಎಂದು ಅರುಣ್ ತಮ್ಮ ನೆನಪು ಮೆಲುಕು ಹಾಕಿದರು.

Intro:ಮಾಜ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರವರು ಕಳೆದ 2003 ರ ವಿಧಾನ ಸಭ ಚುನಾವಣೆಯಲ್ಲಿ ಶಿವಮೊಗ್ಗ ನಗರಕ್ಕೆ ಆಗಮಿಸಿದ್ದರು. ಹಾಲಿ ಶಾಸಕ ಕೆ.ಎಸ್.ಈಶ್ವರಪ್ಪನವರು ಶಾಸಕ ಸ್ಥಾನಕ್ಕೆ ಸ್ಪರ್ಧೆ ಮಾಡಿದಾಗ ಅವರ ಪರ ಪ್ರಚಾರಕ್ಕೆ ಆಗಮಿಸಿದ್ದರು. ಆ ವೇಳೆ ನಗರದ ಎನ್ ಇ ಎಸ್ ಮೈದಾನದಲ್ಲಿ ಪ್ರಚಾರ ಸಭೆ ನಡೆಸಲಾಗಿತ್ತು. ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಬಂದು ಪ್ರಚಾರ ಸಭೆ ನಡೆಸಿ ವಾಪಸ್ ಆಗಿದ್ದರು. ಶಿವಮೊಗ್ಗ ಜಿಲ್ಲೆಯ ಬಿಜೆಪಿಯ ಎಲ್ಲಾ ದಿಗ್ಗಜರು ಸಹ ಅವರೂಂದಿಗೆ ಒಡನಾಟ ಇಟ್ಟು ಕೊಂಡಿದ್ದರು. ಅವರ ಕುರಿತು ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ, ಶಾಸಕ ಕೆ.ಎಸ್. ಈಶ್ವರಪ್ಪ ಮನಪೂರ್ವಕವಾಗಿ ಮಾತಿನ ಶ್ರದ್ದಾಂಜಲಿ ಸಲ್ಲಿಸಿದ್ದಾರೆ.

Body:ಸುಷ್ಮ ಸ್ವರಾಜ್ ರವರು ಹರಿಯಾಣದಲ್ಲಿ ಮಂತ್ರಿಯಾಗಿ, ದೆಹಲಿಯ ಸಿಎಂ ಆಗಿ ಕೇಂದ್ರದಲ್ಲಿ ವಿದೇಶಾಂಗ ಸಚಿವೆಯಾಗಿ ಕೆಲ್ಸ ಮಾಡಿದ್ದಾರೆ. ಅವರದು‌ ಶಿಸ್ತು ಬದ್ದ ಜೀವನವಾಗಿತ್ತು. ಅವರು ಪಕ್ಷದ ಕಟ್ಟಾಳು ಆಗಿದ್ದರು. ಪಕ್ಷ ಸೂಚಿಸಿದೆ ಎಂದು ದೆಹಲಿಯಿಂದ ಬಂದು ಬಳ್ಳಾರಿಯಲ್ಲಿ ಸೋನಿಯ ಗಾಂಧಿ ವಿರುದ್ದ ಸ್ಪರ್ಧೆ ಮಾಡಿದ್ದರು. ಅವರು ವಿದೇಶಾಂಗ ಖಾತೆಯನ್ನು ಹೇಗೆ ನಿರ್ವಹಣೆ ಮಾಡಬಹುದು ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ. ಬಳ್ಳಾರಿ ಚುನಾವಣೆ ವೇಳೆ‌ ಅವರ ಸಂಪೂರ್ಣ ಚುನಾವಣಾ ಉಸ್ತುವಾರಿ ನೋಡಿ ಕೊಂಡಿದ್ದೆ. ಅವರು ಉತ್ತಮ ರಾಜಕೀಯ ಪಟುವಾಗಿದ್ದರು. ಅವರು ರಾಜ್ಯಕ್ಕೆ ಬಂದಾಗ ಅವರ ಭಾಷಣಗಳನ್ನು ಭಾಷಾಂತರ ಮಾಡುವ ಸೌಭಾಗ್ಯ ನನ್ನದಾಗಿತ್ತು. ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ ಎಂದು ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಸಂತಾಪ ಸೂಚಿಸಿದ್ದಾರೆ.

Conclusion:ಸುಷ್ಮಾ ಸ್ವರಾಜ್ ರವರು ಮಹಿಳೆಯಾಗಿ ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ಧರು. ಅವರು ಪಕ್ಷವನ್ನು ಸಹ‌‌ ಅಷ್ಟೆ ಚೆನ್ನಾಗಿ ಮುನ್ನಡೆಸಿ ಕೊಂಡು ಹೋಗಿದ್ಧರು. ಅವರು ಮಂತ್ರಿಯಾಗಿ, ಸಿಎಂ ಆಗಿ, ವಿದೇಶಾಂಗ ಸಚಿವೆಯಾಗಿ ಸಾಕಷ್ಟು ಒಳ್ಳೆಯ ಕೆಲ್ಸವನ್ನು ಮಾಡಿದ್ದಾರೆ.ಅಲ್ಲದೆ ತಮಗೆ ವಹಿಸಿದ ಜವಾಬ್ದಾರಿಯನ್ನು ಅಷ್ಟೆ ಚೆನ್ನಾಗಿ‌ ನಿಭಾಯಿಸಿದ್ದಾರೆ. ಅವರು ನಮ್ಮಂತಹ ಸಾವಿರಾರು ಕಾರ್ಯಕರ್ತರಿಗೆ ಮಾರ್ಗದರ್ಶನವಾಗಿದ್ದರು. ಅವರು ಬಳ್ಳಾರಿಗೆ ಬಂದು ಚುನಾವಣೆ ಎದುರಿಸಬೇಕು ಎಂದು ಹೇಳಿದಾಗ ಪಕ್ಷದ ಕಟ್ಟಾಳುವಿನಂತೆ ಚುನಾವಣೆ ಎದುರಿಸಿ ಆ ಭಾಗದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ್ದರು. ಅವರ ಅಗಲಿಕೆ ನಮಗೆ ತೀವ್ರ ನೋವುಂಟು ಮಾಡಿದೆ. ನಮ್ಮ ತಾಯಿಯನ್ನು ಕಳೆದು ಕೊಂಡಷ್ಟೆ ದುಖಃವಾಗಿದೆ ಎಂದು ತಿಳಿಸಿದರು.

ಇನ್ನೂ ಸುಷ್ಮಾ ಸ್ವರಾಜ್ ರವರು ಶಿವಮೊಗ್ಗ ನಗರಕ್ಕೆ ಬಂದಾಗ ಅವರನ್ನು ಹೆಲಿಪಾಡ್ ನಿಂದ ಡಿ.ಹೆಚ್.ಶಂಕರಮೂರ್ತಿರವರ ಪುತ್ರ ಡಿ.ಎಸ್.ಅರುಣ್ ತಮ್ಮ ಕಾರಿನಲ್ಲೆ ಪ್ರಚಾರ ಸಭೆಗೆ ಕರೆದು ಕೊಂಡು ಬಂದಿದ್ದರು. ಶಿವಮೊಗ್ಗಕ್ಕೆ ಬಂದಿದ್ದ ಸುಷ್ಮಾರನ್ನು ಹತ್ತಿರ ದಿಂದ ನೋಡುವ ಭಾಗ್ಯ ನಮದು. ಅವರು ಸರಳ ಸ್ವಭಾವದವರು, ಅವರು ನಮ್ಮನ್ನು ತಮ್ಮ ಮನೆ ಮಗನಂತೆ ನೋಡಿದರು ಎಂದು ಅರುಣ್ ತಮ್ಮ ನೆನಪನ್ನು ಮೆಲುಕು ಹಾಕಿದರು.

ಬೈಟ್: ಡಿ.ಹೆಚ್.ಶಂಕರಮೂರ್ತಿ. ಮಾಜಿ ಸಭಾಪತಿಗಳು.

ಬೈಟ್; ಕೆ.ಎಸ್.ಈಶ್ವರಪ್ಪ.‌ಶಾಸಕರು.

ಬೈಟ್: ಡಿ.ಎಸ್.ಅರುಣ್ . ಶಂಕರಮೂರ್ತಿರವರ ಪುತ್ರ.

(ಸುಷ್ಮಾ ಶಿವಮೊಗ್ಗ ಭೇಟಿಯ ಪೋಟೊ wrap ನಲ್ಲಿ ಬಂದಿವೆ)

ಕಿರಣ್ ಕುಮಾರ್. ಶಿವಮೊಗ್ಗ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.