ETV Bharat / state

ವಶಪಡಿಸಿಕೊಂಡ ಅರಣ್ಯಭೂಮಿ ಬದಲಿಗೆ ಕಂದಾಯ ಭೂಮಿ; ಕೆಲವೆಡೆ ಪಾಲನೆಯಾಗದ ನಿಯಮ - ಅಣೆಕಟ್ಟು ನಿರ್ಮಾಣಕ್ಕೆ ಶಿವಮೊಗ್ಗದಲ್ಲಿ ಅರಣ್ಯ ನಾಶ

ಜನೋಪಯೋಗಿ ಯೋಜನೆಯಾಗಿದ್ದರೆ ಅರಣ್ಯ ಭೂಮಿಯ 4 ಪಟ್ಟು‌ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಬೇಕು ಎಂಬ ನಿಯಮವಿದೆ. ಈ ನಿಯಮ ಒಂದೊಮ್ಮೆ ಅಧಿಕಾರಿಗಳು ಜಾರಿಗೆ ತರುತ್ತಾರೆ. ಇನ್ನೊಮ್ಮೆ ಅವು ಕೇವಲ ದಾಖಲೆಗಳಲ್ಲಿ ಉಳಿಯುತ್ತವೆ.

Destruction of forest in Shimoga for dam construction
ಜಿಲ್ಲಾಧಿಕಾರಿ ಭವನ
author img

By

Published : Nov 10, 2020, 5:21 PM IST

ಶಿವಮೊಗ್ಗ: ಅಭಿವೃದ್ದಿ ಹೆಸರಿನಲ್ಲಿ‌ ಮಲೆನಾಡಿನ ಅರಣ್ಯ ಪ್ರದೇಶಗಳು ನಾಶವಾಗಿವೆ. ಇದು ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಅಣೆಕಟ್ಟು ನಿರ್ಮಾಣಕ್ಕೆ ಅರಣ್ಯ ನಾಶ: ಜಿಲ್ಲೆಯಲ್ಲಿ ವಿದ್ಯುತ್ ಉತ್ಪಾದನೆಗೆ ಲಿಂಗನಮಕ್ಕಿ ಅಣೆಕಟ್ಟು, ಚಕ್ರಾ, ಸಾವೆಹಕ್ಲು, ನೀರಾವರಿ ಯೋಜನೆಗಾಗಿ ಭದ್ರಾ, ತುಂಗಾ, ಅಂಜನಾಪುರ ಅಂಬ್ಲಿಗೊಳ ಜಲಾಶಯಗಳನ್ನು ನಿರ್ಮಾಣ ಮಾಡಲಾಗಿದೆ. ಈ ಅಣೆಕಟ್ಟುಗಳನ್ನು ಕಟ್ಟಿದಾಗ ಸಾವಿರಾರು ಎಕರೆ ಅರಣ್ಯ ಪ್ರದೇಶ ಅಣೆಕಟ್ಟೆಯ ಹಿನ್ನೀರಿನಲ್ಲಿ ಮುಳುಗಿವೆ.

ಪರಿಸರವಾದಿಗಳು ಮಾತನಾಡಿದರು

ಯಾವುದೇ ಕಾರ್ಯಕ್ಕೆ ಅರಣ್ಯ ಭೂಮಿ ಕಬಳಿಸುವಂತಿಲ್ಲ. ಒಂದು ವೇಳೆ ಅದು ಜನೋಪಯೋಗಿ ಯೋಜನೆಯಾಗಿದ್ದರೆ ಅರಣ್ಯ ಭೂಮಿಯ 4 ಪಟ್ಟು‌ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಬೇಕು ಎಂಬ ನಿಯಮವಿದೆ. ಈ ನಿಯಮ ಒಂದೊಮ್ಮೆ ಅಧಿಕಾರಿಗಳು ಜಾರಿಗೆ ತರುತ್ತಾರೆ. ಇನ್ನೊಮ್ಮೆ ಅವು ಕೇವಲ ದಾಖಲೆಗಳಲ್ಲಿ ಉಳಿಯುತ್ತವೆ.

ಆದರೆ, ಶಿವಮೊಗ್ಗದ ಮಟ್ಟಿಗೆ ಮಾತ್ರ ನಿಯಮ ಪಾಲನೆಯಾಗಿದೆ. 2004 ರಲ್ಲಿ ತುಂಗಾ ಅಣೆಕಟ್ಟು ಎತ್ತರಿಸಿ, ತುಂಗಾ ಮೇಲ್ಡಂಡೆ ಯೋಜನೆ ಕಾಮಗಾರಿಗೆ‌ ಶಿವಮೊಗ್ಗ ತಾಲೂಕು ಹಾಗೂ ತೀರ್ಥಹಳ್ಳಿ ಅರಣ್ಯ ಪ್ರದೇಶ ಬಳಕೆಯಾಗಿತ್ತು.‌ ಇದಕ್ಕಾಗಿ ಸರ್ಕಾರ ಅರಣ್ಯ ಇಲಾಖೆಗೆ ತೀರ್ಥಹಳ್ಳಿ ತಾಲೂಕಿನಲ್ಲಿ 165.49 ಹೆಕ್ಟರ್ ಭೂಮಿಯನ್ನು‌ ನೀಡಿದೆ. ಅದೇ ರೀತಿ ಶಿವಮೊಗ್ಗ- ಶಿಕಾರಿಪುರ‌‌ ರಾಜ್ಯ ಹೆದ್ದಾರಿ ಅಗಲೀಕರಣದ ವೇಳೆ ಬಿಕ್ಕೂನಹಳ್ಳಿ ಸುತ್ತಕೋಟೆ,‌ ಕೊಮ್ಮನಾಳ್ ಭಾಗದಲ್ಲಿ‌ ರಸ್ತೆ ನಿರ್ಮಾಣಕ್ಕೆ‌‌ ಭೂಮಿ ಪಡೆಯಲಾಗಿತ್ತು. ಇದರಿಂದ ಬದಲಿ ಭೂಮಿಯಾಗಿ 2 ಎಕರೆ 09 ಹೆಕ್ಟರ್ ಪಡೆಯಲಾಗಿದೆ.‌

ಕೆಪಿಟಿಸಿಎಲ್ ರವರು ತಮ್ಮ ಅಭಿವೃದ್ದಿಗಾಗಿ ಅರಣ್ಯ ಭೂಮಿಯನ್ನು ಪಡೆದು‌ಕೊಂಡಿದ್ದಾರೆ. ಇದಕ್ಕಾಗಿ‌ 7.374 ಹೆಕ್ಟರ್ ಭೂಮಿ ಪಡೆಯಲಾಗಿದೆ. ಈ ರೀತಿ ಜಿಲ್ಲೆಯಲ್ಲಿ‌‌‌ ಮೇಲಿನ ಪ್ರಕರಣದಲ್ಲಿ ಒಟ್ಟು 199.18 ಹೆಕ್ಟರ್​ ಭೂಮಿ ಅರಣ್ಯ ಇಲಾಖೆ ಪರ್ಯಾಯವಾಗಿ ಪಡೆದುಕೊಂಡಿದೆ.

ಕುವೆಂಪು ವಿ.ವಿ‌ ನಿರ್ಮಾಣಕ್ಕೆ ಅರಣ್ಯ ಇಲಾಖೆಯ 250 ಎಕರೆ ಭೂಮಿಯನ್ನು ನೀಡಿದೆ. ಕಾನೂನು ಪ್ರಕಾರ ಅರಣ್ಯ ಇಲಾಖೆಗೆ ಬದಲಿ‌ ಭೂಮಿಯನ್ನು‌ ನೀಡಬೇಕಿತ್ತು.‌ ಆದರೆ, ‌ಇದುವರೆಗೂ ಆ ಪ್ರಕ್ರಿಯೆ ನಡೆದಿಲ್ಲ.‌ಇದರಿಂದ ಅನೇಕ ಪರಿಸರ ವಾದಿಗಳು ಇದರ ವಿರುದ್ದ ಹೋರಾಟ ನಡೆಸಿದ್ದಾರೆ. ಒಂದು ಮೂಲಗಳ ಪ್ರಕಾರ ಕುದುರೆಮುಖ ಭಾಗದಲ್ಲಿ ಭೂಮಿ ನೀಡಿದ್ದಾರೆ ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.