ETV Bharat / state

ಡಿನೋಟಿಫಿಕೇಷನ್ ರದ್ದುಗೊಳಿಸಿದ ಸರ್ಕಾರ.. ಕಮರಿದ ಶರಾವತಿ ಮುಳುಗಡೆ ಸಂತ್ರಸ್ತರ ಭೂ ಹಕ್ಕಿನ ಕನಸು - protest By sharavathi Drown Victim

ನ್ಯಾಯಾಂಗ ನಿಂದನೆ ಭಯದಿಂದ‌ ರಾಜ್ಯ ಸರ್ಕಾರ ಶರಾವತಿ ಮುಳುಗಡೆ ಸಂತ್ರಸ್ತರ ಭೂ ಹಕ್ಕಿನ ಡಿನೋಟಿಫಿಕೇಷನ್ ರದ್ದುಗೊಳಿಸಿದ್ದು ಆದೇಶ ಹೊರಡಿಸಿದ್ದು, ಸರ್ಕಾರದ ಈ ಲೋಪದಿಂದ ಸಂತ್ರಸ್ತರ ಬದುಕು ಅತಂತ್ರವಾಗಿದೆ.

sharavati flood victims
ಶರಾವತಿ ಮುಳುಗಡೆ ಸಂತ್ರಸ್ತರು
author img

By

Published : Oct 22, 2022, 5:31 PM IST

ಶಿವಮೊಗ್ಗ : ಶರಾವತಿ ಮುಳುಗಡೆ ಸಂತ್ರಸ್ತರ ಭೂ ಹಕ್ಕಿನ ಕನಸು ಮತ್ತೆ ಕಮರಿ‌ ಹೋಗಿದೆ. ನ್ಯಾಯಾಂಗ ನಿಂದನೆ ಭಯದಿಂದ‌ ರಾಜ್ಯ ಸರ್ಕಾರ ಡಿನೋಟಿಫಿಕೇಷನ್ ರದ್ದುಗೊಳಿಸಿದೆ. ಈ ಮೂಲಕ ರಾಜ್ಯಕ್ಕೆ ಬೆಳಕು ನೀಡಲು ತಮ್ಮ ಸರ್ವಸ್ವವನ್ನೇ ತ್ಯಾಗ ಮಾಡಿರುವ ಮುಳುಗಡೆ ಸಂತ್ರಸ್ತರನ್ನು ಸರ್ಕಾರ ಮತ್ತೊಮ್ಮೆ ಅನಾಥರನ್ನಾಗಿಸಿದೆ.

ಹೌದು, ವಿದ್ಯುತ್ ಉತ್ಪಾದನೆ ಸಲುವಾಗಿ ಲಿಂಗನಮಕ್ಕಿ ಜಲಾಶಯ ನಿರ್ಮಾಣದ ವೇಳೆ ಶಿವಮೊಗ್ಗದ ಸಾಗರ, ಹೊಸನಗರ ತಾಲೂಕಿನ 166 ಗ್ರಾಮಗಳ 6,177 ಕುಟುಂಬಗಳನ್ನು ಎತ್ತಂಗಡಿ ಮಾಡಲಾಗಿತ್ತು. ಅಂದಿನ‌ ರಾಜ್ಯ ಸರ್ಕಾರ 1962 ರಲ್ಲಿಯೇ ಪುನರ್ವಸತಿಗಾಗಿ ಅರಣ್ಯ ಭೂಮಿಯನ್ನ ಮಂಜೂರು ಮಾಡಿ ಆದೇಶಿಸಿತ್ತು. 1959 ರಿಂದ 1964ರ ಅವಧಿಯಲ್ಲಿ ಅರಣ್ಯ ಇಲಾಖೆ ಶಿವಮೊಗ್ಗ ಜಿಲ್ಲೆಯ ಒಟ್ಟು 13,500 ಎಕರೆ ಭೂಮಿಯನ್ನು ಪುನರ್ವಸತಿಗಾಗಿ ಬಿಡುಗಡೆ ಮಾಡಿತ್ತು. ಆದರೆ, ಅಂದಿನಿಂದ ಈವರೆಗೆ ಕಂದಾಯ ಇಲಾಖೆ ಅಧಿಕಾರಿಗಳು ಭೂಮಿ ಹಕ್ಕು ದಾಖಲೆಗಳಲ್ಲಿ ಬದಲಾವಣೆ ಮಾಡದ ಪರಿಣಾಮ‌ ಆ ದಾಖಲಾತಿಗಳಲ್ಲಿ ಆ ಭೂಮಿ ಅರಣ್ಯ ಪ್ರದೇಶವೆಂದೇ ನಮೂದಿಸಲಾಗಿದೆ. 1980 ರಲ್ಲಿ ಅರಣ್ಯ ರಕ್ಷಣೆ ಕಾಯ್ದೆ ಜಾರಿಗೆ ಬಂದ ಪರಿಣಾಮ ಆ ಭೂಮಿ ಹಂಚಿಕೆ ನೆನಗುದಿಗೆ ಬಿದ್ದಿದ್ದು, ಈ ಕುಟುಂಬಗಳಿಗೆ ಈವರೆಗೆ ಭೂಮಿ ಮಂಜೂರಾತಿ ಆಗಿಲ್ಲ. ಶಿವಮೊಗ್ಗದ ಸಾಗರ, ತೀರ್ಥಹಳ್ಳಿ, ಹೊಸನಗರ, ಶಿವಮೊಗ್ಗ, ಶಿಕಾರಿಪುರ ತಾಲೂಕುಗಳಲ್ಲಿ ಸರ್ಕಾರ ನೀಡಿದ ಭೂಮಿಯಲ್ಲಿ ನೆಲೆಕಂಡುಕೊಂಡಿರುವ 6 ಸಾವಿರಕ್ಕೂ ಹೆಚ್ಚು ಕುಟುಂಬಗಳು ಕಳೆದ ಆರು ದಶಕದಿಂದಲೂ ಭೂಮಿ ಹಕ್ಕಿಗಾಗಿ ಹೋರಾಟ ನಡೆಸುತ್ತಲೇ ಇವೆ.

ಕಮರಿದ ಶರಾವತಿ ಮುಳುಗಡೆ ಸಂತ್ರಸ್ತರ ಭೂ ಹಕ್ಕಿನ ಕನಸು

ಇದನ್ನೂ ಓದಿ: 'ನಮಗೆ ಭೂಮಿ ಕೊಡಿ, ಇಲ್ಲದಿದ್ದರೆ ವಿಷ ಕುಡಿಯುತ್ತೇವೆ' ಶರಾವತಿ ಮುಳುಗಡೆ ಸಂತ್ರಸ್ತರ ಅಳಲು

ಈ ಹಿಂದಿನ ಕಾಂಗ್ರೆಸ್ ಸರ್ಕಾರ ಶರಾವತಿ ಮುಳುಗಡೆ ಸಂತ್ರಸ್ತರ ಒತ್ತಡಕ್ಕೆ ಮಣಿದು 2015 ರಿಂದ 2017ರ ಅವಧಿಯಲ್ಲಿ 9,932 ಎಕರೆ ಪ್ರದೇಶವನ್ನ ಡಿನೋಟಿಫಿಕೇಷನ್ ಮಾಡಿತ್ತು. ಇದರಲ್ಲಿ 2 ಸಾವಿರ ಎಕರೆ ಭೂಮಿಗೆ ಸಾಗುವಳಿ ಚೀಟಿ ನೀಡಲಾಗಿದೆ. ಉಳಿದಂತೆ ಸರ್ವೇ, ಹಕ್ಕುಪತ್ರ ವಿತರಣೆ ಸಂಬಂಧ ಕೆಲಸ ನಡೆಯುತ್ತಿತ್ತು. ಆದರೆ,1980ರ ಅರಣ್ಯ ಸಂರಕ್ಷಣಾ ಕಾಯ್ದೆ ಉಲ್ಲಂಘಿಸಿ ಶರಾವತಿ ಸಂತ್ರಸ್ತರಿಗೆ ಭೂಮಿ ಹಂಚಿಕೆ ಮಾಡಲಾಗಿದೆ. ಅಲ್ಲದೇ, ಸರ್ಕಾರದ ಈ ನಡೆಯಿಂದ ಪರಿಸರ ಹಾನಿಯಾಗುತ್ತದೆ ಮತ್ತು ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಕ್ಕೆ ಬಳಸುವಾಗ ಕೇಂದ್ರ ಸರ್ಕಾರದ ಅನುಮತಿ ಪಡೆಯಬೇಕು ಎಂದು ಖಾಸಗಿ ವ್ಯಕ್ತಿಯೊಬ್ಬರು ಹೈಕೋರ್ಟ್‌ ಮೊರೆ ಹೋಗಿದ್ದರು. ಆ ಹಿನ್ನೆಲೆಯಲ್ಲಿ ವಾದ - ಪ್ರತಿವಾದ ಆಲಿಸಿದ ಹೈಕೋರ್ಟ್‌, ಡಿನೋಟಿಫಿಕೇಷನ್ ಮಾಡುವಾಗ ಅರಣ್ಯ ಕಾಯ್ದೆ ಉಲ್ಲಂಘಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿ, 2015 ರಿಂದ 2017ರ ನಡುವಿನ ಡಿನೋಟಿಫಿಕೇಷನ್ ಅಲ್ಲದೇ, 1994, 2006, 2019ರ ಅವಧಿಯಲ್ಲಿ ಮಾಡಲಾಗಿದ್ದ ಆದೇಶಗಳನ್ನು ರದ್ದುಪಡಿಸಿ 2021ರ ಮಾರ್ಚ್‌ 4ರಂದು ಆದೇಶಿಸಿತ್ತು.

ಇದನ್ನೂ ಓದಿ: ಶೀಘ್ರವೇ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸಲಾಗುವುದು: ಸಂಸದ ಬಿ ವೈ ರಾಘವೇಂದ್ರ

ಹೈಕೋರ್ಟ್ ಆದೇಶ ಪಾಲನೆ ಭಾಗವಾಗಿ ಕಳೆದ ಸೆಪ್ಟೆಂಬರ್‌ 28 ರಂದು 56 ಡಿನೋಟಿಫಿಕೇಷನ್ ಆದೇಶಗಳನ್ನು ರದ್ದುಪಡಿಸಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಮತ್ತೊಮ್ಮೆ ಶರಾವತಿ ಸಂತ್ರಸ್ತರು ಅತಂತ್ರರಾಗಿದ್ದಾರೆ. ಹೀಗಾಗಿಯೇ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಕಾನೂನು ಹೋರಾಟದ ಜೊತೆಗೆ ಮುಂದಿನ‌ ದಿನಗಳಲ್ಲಿ ಚುನಾವಣಾ ಬಹಿಷ್ಕಾರ ಹಾಕುತ್ತೇವೆ ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಶರಾವತಿ ಮುಳುಗಡೆ ಸಂತ್ರಸ್ತರ ಪುನರ್ವಸತಿಗೆ ಜಂಟಿ ಸರ್ವೆ.. ಸಚಿವ ಈಶ್ವರಪ್ಪ

ಒಟ್ಟಾರೆ, ಆರು ದಶಕಗಳ ಸಮಸ್ಯೆಗೆ ಅಂತ್ಯ ಹಾಡಬೇಕಾದ ಸರ್ಕಾರ ಮತ್ತೊಮ್ಮೆ ವಿಫಲವಾಗಿದೆ. ನ್ಯಾಯಾಲಯಕ್ಕೆ ಶರಾವತಿ ಸಂತ್ರಸ್ತರ ನೈಜ ಪರಿಸ್ಥಿತಿ ಮತ್ತು ಆ ಭೂಮಿಯನ್ನು 1980ರ ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಗೆ ಮುನ್ನವೇ ಅರಣ್ಯದಿಂದ ಬಿಡುಗಡೆ ಮಾಡಲಾಗಿತ್ತು ಎಂಬ ಅಂಶವನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡುವಲ್ಲಿ ವಿಫಲವಾಗಿದೆ. ರಾಜ್ಯ ಸರ್ಕಾರದ ಈ ಲೋಪದಿಂದಾಗಿ ಸಂತ್ರಸ್ತರ ಬದುಕು ಅತಂತ್ರವಾಗಿರುವುದು ನಿಜಕ್ಕೂ ದುರಂತವೇ ಸರಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.