ಶಿವಮೊಗ್ಗ: ತನ್ನ ತಂಗಿಯನ್ನು ಪ್ರೀತಿ ಮಾಡು ಎಂದು ಪಿಡುಸುತ್ತಿದ್ದ ಪ್ರೇಮಿ ಹಾಗೂ ಆತನಿಗೆ ಸಹಕಾರ ನೀಡುತ್ತಿದ್ದ ಸ್ನೇಹಿತನನ್ನು ಹುಡುಗಿಯ ಅಣ್ಣ ಹಾಗೂ ಆತನ ಸ್ನೇಹಿತರು ಮಚ್ಚಿನಿಂದ ಕೊಚ್ಚಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಭದ್ರಾವತಿಯಯಲ್ಲಿ ಜರುಗಿದೆ.
ಭದ್ರಾವತಿಯ ಭದ್ರಾ ಕಾಲೋನಿಯ ನಿವಾಸಿ ವಿದ್ಯಾರಾಜ್ ಹಾಗೂ ಮಣಿಕಂಠನನ್ನು ಅದೇ ಕಾಲೋನಿಯ ಚಂದ್ರ ಹಾಗೂ ಆತನ ಸಹೋದರ ಹರೀಶ್ ಸೇರಿದಂತೆ ಇತರರು ಮಚ್ಚಿನಿಂದ ಕೊಚ್ಚಿ ಮಾರಾಣಾಂತಿಕ ಹಲ್ಲೆ ನಡೆಸಿದ್ದಾರೆ.
ವಿದ್ಯಾರಾಜ್ ಹಾಗೂ ಮಣಿಕಂಠನ ತಲೆ ಹಾಗೂ ಕತ್ತಿನ ಭಾಗಕ್ಕೆ ತೀವ್ರವಾದ ಗಾಯಗಳಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಇವರಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ರವಾನೆ ಮಾಡಲಾಗಿದೆ.
ಏನಿದು ಘಟನೆ:
ವಿದ್ಯಾರಾಜ್ ಅದೇ ಕಾಲೋನಿಯ ಚಂದ್ರ ಹಾಗೂ ಹರೀಶ್ರ ತಂಗಿಯನ್ನು ಪ್ರೀತಿ ಮಾಡ್ತಾ ಇದ್ದ. ಇದಕ್ಕೆ ಚಂದ್ರನ ಮನೆಯವರು ತೀವ್ರ ವಿರೋಧ ಮಾಡಿದ್ದರು. ಆದರೂ ಸಹ ವಿದ್ಯಾರಾಜ್ ತನ್ನ ವರಸೆ ನಿಲ್ಲಿಸಿರಲಿಲ್ಲ. ಇದರಿಂದ ಕೋಪಗೊಂಡ ಚಂದ್ರ ಮತ್ತು ಆತನ ಸಹೋದರ ಹರೀಶ್ ಇಬ್ಬರು ಅವರ ಸ್ನೇಹಿತರ ಜೊತೆ ಸೇರಿ ಬೈಕ್ನಲ್ಲಿ ಬರುತ್ತಿದ್ದವರ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ. ಘಟನೆ ಸಂಬಂಧ ಭದ್ರಾವತಿ ಹೊಸಮನೆ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.