ಶಿವಮೊಗ್ಗ : ಕಳೆದೆರಡು ವರ್ಷಗಳಿಂದ ಕೊರೊನಾದಿಂದಾಗಿ ಶಾಲಾ-ಕಾಲೇಜುಗಳು ಬಂದ್ ಆಗಿ ತರಗತಿಗಳ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ಸ್ಥಗಿತಗೊಂಡಿದ್ದವು. ಆದ್ರೆ, ಈಗ ಮತ್ತೆ ಕಾಲೇಜು ಪ್ರಾರಂಭವಾಗಿವೆ. ಹಾಗೆಯೇ ಸಾಂಸ್ಕೃತಿಕ ಉತ್ಸವಗಳಿಗೂ ಶಿವಮೊಗ್ಗದ ಕಮಲಾ ನೆಹರು ಕಾಲೇಜಿನಲ್ಲಿ ಆರಂಭ ಸಿಕ್ಕಿದೆ.
ದೇಶದ ವಿವಿಧ ರಾಜ್ಯಗಳ ಸಾಂಪ್ರದಾಯಿಕ ಹಬ್ಬಗಳಾದ ಓಣಂ, ದೀಪಾವಳಿ, ದಸರಾ, ಗಣೇಶನ ಹಬ್ಬ, ವರಮಹಾಲಕ್ಷ್ಮಿಹಬ್ಬ, ರಂಜಾನ್, ಕ್ರಿಸ್‌ಮಸ್ ಆಚರಣೆ ಸೇರಿ ಮದುವೆ ಸಂಭ್ರಮವನ್ನು ಸಹ ಆಚರಿಸಿ ಸಂಭ್ರಮಿಸಿದ್ದಾರೆ.
ವಿಶೇಷ ಅಂದರೆ ಮನೆಯಲ್ಲಿ ನಡೆಯುವ ಸಾಂಪ್ರದಾಯಿಕ ವಿವಾಹದಂತೆ ಇಲ್ಲಿಯೂ ಇಬ್ಬರು ವಿದ್ಯಾರ್ಥಿನಿಯರು ವಧು-ವರನ ವೇಷ ಧರಿಸಿ ವಿವಾಹ ಸಮಾರಂಭವನ್ನ ಸಂಭ್ರಮಿಸಿದ್ದಾರೆ.
ಇದನ್ನೂ ಓದಿ: ಗೃಹ ಸಚಿವರ ತವರು ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಕ್ರೈಂ ರೇಟ್ : ಇದಕ್ಕೆ ಮುಕ್ತಿ ಯಾವಾಗ?