ETV Bharat / state

ಶಿವಮೊಗ್ಗ: ಮಗನೊಂದಿಗೆ ಜಗಳ, ಮಾನಸಿಕ‌ ಖಿನ್ನತೆಯಿಂದ ದಂಪತಿ ನೇಣಿಗೆ ಶರಣು - ಶಿವಮೊಗ್ಗ ಆಲ್ಕೊಳ ದಂಪತಿ ಆತ್ಮಹತ್ಯೆ

ಮನೆಯಲ್ಲಿ ಗಲಾಟೆ ನಡೆದು ತಕ್ಷಣ ತಣ್ಣಗಾಗಿರುವುದನ್ನು‌ ಗಮನಿಸಿದ ಸ್ಥಳೀಯರು ಮನೆಗೆ ಬಂದು ಪರಿಶೀಲಿಸಿದಾಗ ದಂಪತಿ ನೇಣಿಗೆ ಶರಣಾಗಿರುವುದು ಗೊತ್ತಾಗಿದೆ.

couple-committed-suicide-in-shivamogga
ಖಿನ್ನತೆಯಿಂದ ದಂಪತಿ ನೇಣಿಗೆ ಶರಣು
author img

By

Published : Aug 6, 2021, 12:58 AM IST

Updated : Aug 6, 2021, 1:47 AM IST

ಶಿವಮೊಗ್ಗ: ಮಾನಸಿಕ‌ ಖಿನ್ನತೆಗೆ ಒಳಗಾಗಿದ್ದ ದಂಪತಿ ಮನೆಯಲ್ಲೇ ನೇಣಿಗೆ ಶರಣಾಗಿರುವ ಘಟನೆ ಶಿವಮೊಗ್ಗದ ಆಲ್ಕೊಳ ಬಡಾವಣೆಯಲ್ಲಿ‌ ನಡೆದಿದೆ. ಆಲ್ಕೊಳದ ಮುಖ್ಯ ರಸ್ತೆಯ‌‌‌ ನಿವಾಸಿಗಳಾದ ರಾಮದಾಸ್ (56) ಹಾಗೂ ಅನುಪಮಾ (50) ಆತ್ಮಹತ್ಯೆ ಮಾಡಿಕೊಂಡ ದಂಪತಿ ಎಂದು ತಿಳಿದುಬಂದಿದೆ.

ರಾಮದಾಸ್ ದಂಪತಿಗೆ ವಿಖ್ಯಾತ್​​ ಎಂಬ ಮಗನಿದ್ದು, ಚಿತ್ರದುರ್ಗದ ಕಾಲೇಜೊಂದರಲ್ಲಿ ದ್ವಿತೀಯ ವರ್ಷದ ಎಂಬಿಬಿಎಸ್ ಓದುತ್ತಿದ್ದಾನೆ. ಗುರುವಾರ ಸಂಜೆ ಮನೆಯಲ್ಲಿ ದಂಪತಿ ಹಾಗೂ ಮಗ ವಿಖ್ಯಾತ ನಡುವೆ ಗಲಾಟೆ ನಡೆದಿದೆ. ಆ ನಂತರ ರಾಮದಾಸ್ ಹಾಗೂ ಅನುಪಮಾ ತಮ್ಮ ರೂಮಿನಲ್ಲಿ ನೇಣಿಗೆ ಶರಣಾಗಿದ್ದಾರೆ. ಮನೆಯಲ್ಲಿ ಗಲಾಟೆ ನಡೆದು ತಕ್ಷಣ ತಣ್ಣಗಾಗಿರುವುದನ್ನು‌ ಗಮನಿಸಿದ ಸ್ಥಳೀಯರು ಮನೆಗೆ ಬಂದು ಪರಿಶೀಲಿಸಿದಾಗ ದಂಪತಿ ನೇಣಿಗೆ ಶರಣಾಗಿರುವುದು ಗೊತ್ತಾಗಿದೆ. ಈ ವೇಳೆ ವಿಖ್ಯಾತ್​ ಪಕ್ಕದ ಕೋಣೆಯಲ್ಲೇ ಇದ್ದ ಎನ್ನಲಾಗಿದೆ.

ವಿಖ್ಯಾತ್ ಅನೇಕ ದುಷ್ಚಟಗಳಿಗೆ ಒಳಗಾಗಿದ್ದು, ತನಗೆ ಹಣ ಬೇಕು‌ ಎಂದು ಪೀಡಿಸುತ್ತಿದ್ದ. ಈ ಬಗ್ಗೆ ಮನೆಯಲ್ಲಿ ಗಲಾಟೆ ನಡೆದಿರಬಹುದು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.‌ ಮೃತ ದಂಪತಿ ಯಾವ ಸಂಬಂಧಿಕರ ಮನೆಗೂ ಹೋಗದೆ ಸಾಕಷ್ಟು ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಸ್ಥಳಕ್ಕೆ‌ ವಿನೋಬನಗರ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಮೈಸೂರು ವಿವಿ ಪ್ರಾಧ್ಯಾಪಕನಿಂದ ವಿದ್ಯಾರ್ಥಿನಿ ಮೇಲೆ‌ ಅತ್ಯಾಚಾರ ಆರೋಪ: ಪತಿಯನ್ನೇ ಠಾಣೆಗೆ ಕರೆದೊಯ್ದ ಪತ್ನಿ!

Last Updated : Aug 6, 2021, 1:47 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.