ETV Bharat / state

ಸಾವರ್ಕರ್ ಫ್ಲೆಕ್ಸ್​ ವಿವಾದ: ಅನಧಿಕೃತ ಜಾಹೀರಾತು ನಿಯಂತ್ರಣಕ್ಕೆ ಶಿವಮೊಗ್ಗ ಪಾಲಿಕೆ ಕ್ರಮ

author img

By

Published : Aug 25, 2022, 10:31 PM IST

ಶಿವಮೊಗ್ಗ ನಗರದಲ್ಲಿ ಅನಧಿಕೃತ ಜಾಹೀರಾತು, ಫ್ಲೆಕ್ಸ್​ಗಳ ನಿಯಂತ್ರಣಕ್ಕೆ ಪಾಲಿಕೆ ಮುಂದಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ ತಿಳಿಸಿದ್ದಾರೆ.

ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ
ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ

ಶಿವಮೊಗ್ಗ: ಸಾವರ್ಕರ್ ಫ್ಲೆಕ್ಸ್​ ವಿವಾದದಿಂದಾಗಿ ನಗರದಲ್ಲಿ ಎರಡು ಕೋಮಿನ ನಡುವೆ ಗಲಾಟೆ ನಡೆದು ಓರ್ವ ಯುವಕನಿಗೆ ಚಾಕು ಇರಿತ ಉಂಟಾಗಿ ನಗರದಲ್ಲಿ 144 ಸೆಕ್ಷನ್ ಜಾರಿ ಸಹ ಮಾಡಲಾಗಿದೆ. ಹಾಗಾಗಿ, ಅನಧಿಕೃತ ಜಾಹಿರಾತು ಫ್ಲೆಕ್ಸ್​ ನಿಯಂತ್ರಣಕ್ಕೆ ಮಹಾನಗರ ಪಾಲಿಕೆ ಮುಂದಾಗಿದೆ.

ಈಟಿವಿ ಭಾರತ್​ ಜೊತೆ ಮಾತನಾಡಿದ ಪಾಲಿಕೆ ಆಯುಕ್ತ ಮಾಯಣ್ಣಗೌಡ, ನಗರದಲ್ಲಿ ಅನಧಿಕೃತ ಜಾಹೀರಾತು, ಫ್ಲೆಕ್ಸ್​ಗಳ ನಿಯಂತ್ರಣಕ್ಕೆ ಮಹಾನಗರ ಪಾಲಿಕೆ ಮುಂದಾಗಿದೆ. ಯಾವ ಜಾಗದಲ್ಲಿ ಫ್ಲೆಕ್ಸ್ ಅಳವಡಿಸಬೇಕು? ಅದಕ್ಕೆ ಶುಲ್ಕ ಏನಿರುತ್ತೆ? ಎಷ್ಟು ದಿನ ಕಟ್ಟಬೇಕು? ಪೂರ್ವಾನುಮತಿ ಹೇಗೆ ತೆಗೆದುಕೊಳ್ಳಬೇಕು. ಅದರ ಉದ್ದ ಎಷ್ಟಿರಬೇಕು? ಅಗಲ ಎಷ್ಟಿರಬೇಕು?. ಯಾವ ಯಾವ ಸರ್ಕಲ್​ಗಳಲ್ಲಿ ಅದರ ನಿರ್ಬಂಧ ಇದೆ. ಇವೆಲ್ಲ ಅಂಶಗಳನ್ನು ಸೇರಿಸಿ ಪಾಲಿಕೆ ವ್ಯಾಪ್ತಿಯಲ್ಲಿ ಜಾಹೀರಾತು ಕರಡು ನಿಯಮ ಎಂಬ ಬೈಲಾವನ್ನು ರೂಪಿಸಿಬೇಕಿತ್ತು. ಅದನ್ನು ಈಗ ಸಿದ್ಧಪಡಿಸಿದ್ದೇವೆ. ಅದು ಸುಮಾರು 45 ಪೇಜ್​ ಇದೆ.

ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ ಅವರು ಮಾತನಾಡಿದರು

ಇನ್ನೊಂದು ವಾರದಲ್ಲಿ ಎಲ್ಲ ವೃತ್ತ ಪ್ರತಿಕೆಗಳಲ್ಲಿ, ಪೇಪರ್​ಗಳಲ್ಲಿ, ಮಾಧ್ಯಮಗಳಲ್ಲಿ ಪ್ರಕಟಣೆ ಮಾಡಿ ಅದಕ್ಕೆ ಅಬ್ಜೆಕ್ಷನ್ಸ್​ ಅನ್ನು ಕರೆಯುತ್ತೇವೆ. ಅದರಲ್ಲಿ ಸಾರ್ವಜನಿಕರು ಲಿಖಿತ ರೂಪದಲ್ಲಿ ತಮ್ಮದೇ ಆದ ಅಭಿಪ್ರಾಯಗಳನ್ನು ಕೊಡಬಹುದು. ಅದನ್ನು ಮುಂಬರುವ ಪಾಲಿಕೆ ಪರಿಷತ್ ಸಭೆಯಲ್ಲಿ ಮಂಡಿಸಿ ಗೆಜೆಟ್​ ನೋಟಿಫಿಕೆಷನ್​ ಮಾಡಿ ಆ ಬೈಲಾದಲ್ಲಿರುವ ಅಂಶಗಳ ಪ್ರಕಾರ ಯತಾವತ್ತಾಗಿ, ಕಡ್ಡಾಯವಾಗಿ ಜಾಹೀರಾತು, ಬಂಟಿಂಗ್ಸ್​ ಹಾಗೂ ಬ್ಯಾನರ್​ಗಳನ್ನು ಯಾವ ರೀತಿ ನಿರ್ಬಂಧಿಸಬೇಕು ಎಂಬುದನ್ನು ಜಾರಿಗೊಳಿಸಿ ಶಿಸ್ತುಬದ್ದ ಕ್ರಮಕ್ಕೆ ನಾವು ಮುಂದಾಗಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ: ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ಶಾಲೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ: ಸಚಿವ ಬಿ ಸಿ ನಾಗೇಶ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.