ಶಿವಮೊಗ್ಗ: ಜಿಲ್ಲೆಯಲ್ಲಿಂದು 56 ಜನರಿಗೆ ಸೋಂಕು ತಗುಲಿದ್ದು, ಇದರಿಂದ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,315 ಕ್ಕೆ ಏರಿಕೆಯಾಗಿದೆ. ಇಂದು ಆಸ್ಪತ್ರೆಯಿಂದ 50 ಜನ ಬಿಡುಗಡೆಯಾಗಿದ್ದಾರೆ.
ಇದುವರೆಗೂ ಜಿಲ್ಲೆಯಿಂದ 725 ಜನ ಬಿಡುಗಡೆಯಾಗಿದ್ದು, ಇಂದು ಜಿಲ್ಲೆಯಲ್ಲಿ ಎರಡು ಸಾವು ಸಂಭವಿಸಿದೆ. ಇದರಿಂದ ಜಿಲ್ಲೆಯಲ್ಲಿ 24 ಜನ ಸಾವನ್ನಪ್ಪಿದಂತೆ ಆಗಿದೆ. ಸದ್ಯ ಆಸ್ಪತ್ರೆಯಲ್ಲಿ 566 ಜನ ಚಿಕಿತ್ಸೆಯಲ್ಲಿದ್ದಾರೆ. ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ 237 ಜನ ಸೋಂಕಿತರು, ಕೋವಿಡ್ ಕೇರ್ ಸೆಂಟರ್ನಲ್ಲಿ 263 ಜನ ಸೋಂಕಿತರು, ಖಾಸಗಿ ಆಸ್ಪತ್ರೆಯಲ್ಲಿ 19 ಜನ ಸೋಂಕಿತರು ಹಾಗೂ ಮನೆಯಲ್ಲಿ 47 ಜನ ಸೋಂಕಿತರು ಚಿಕಿತ್ಸೆಯಲ್ಲಿದ್ದಾರೆ. ಜಿಲ್ಲೆಯಲ್ಲಿ 310 ವಲಯವನ್ನು ಕಂಟೈನ್ಮೆಂಟ್ ಝೋನ್ ಮಾಡಲಾಗಿದೆ.
ತಾಲೂಕುವಾರು ಸೋಂಕಿತರ ವಿವರ:
ಶಿವಮೊಗ್ಗ- 26
ಭದ್ರಾವತಿ- 09
ಶಿಕಾರಿಪುರ-12
ಸೊರಬ-05
ಸಾಗರ-01
ಹೊಸನಗರ-01
ತೀರ್ಥಹಳ್ಳಿ-01
ಹಾಗೆಯೇ ಬೇರೆ ಜಿಲ್ಲೆಯಿಂದ ಓರ್ವರು ಬಂದಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೂ 25,586 ಜನರ ಸ್ವಾಬ್ ತೆಗೆಯಲಾಗಿದೆ. ಇದರಲ್ಲಿ 24,060 ಜನರ ಫಲಿತಾಂಶ ಬಂದಿದೆ.