ETV Bharat / state

ಕಾಂಗ್ರೆಸ್​​ನವರು ಸೋಲುತ್ತಿರುವುದು ಇವಿಎಂನಿಂದ ಅಲ್ಲ, ಜನರ ಸಂಕಲ್ಪದಿಂದ: ಸಂಸದ ತೇಜಸ್ವಿ ಸೂರ್ಯ - ರಾಜ್ಯದ 224 ಕ್ಷೇತ್ರಗಳಲ್ಲಿ‌ ವಿವಿಧ‌ ಮೋರ್ಚಾ ಸಮಾವೇಶ

ಶಿವಮೊಗ್ಗದಲ್ಲಿ ನಡೆದ ಬಿಜೆಪಿಯ ಜಿಲ್ಲಾ ಯುವ ಮೋರ್ಚಾ ಸಮಾವೇಶ - ಕಾಂಗ್ರೆಸ್ ಪಾಪದ‌ ಕೂಸು 370 ಪ್ರಧಾನಿ‌ ಮೋದಿ ಅವರು ಕಿತ್ತು ಹಾಕಿ,ಜಮ್ಮು ಕಾಶ್ಮೀರದಲ್ಲಿ ಶಾಂತಿ‌ ನೆಲೆಸುವ ಕೆಲಸವನ್ನು ಮೋದಿ ಮಾಡಿದ್ದಾರೆ - ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಟೀಕೆ.

BJP District Yuva Morcha convention held in Shimoga
ಶಿವ ಬಿಜೆಪಿಯ ಜಿಲ್ಲಾ ಯುವ ಮೋರ್ಚಾ ಸಮಾವೇಶ
author img

By

Published : Mar 11, 2023, 8:53 PM IST

ಶಿವಮೊಗ್ಗದಲ್ಲಿ ನಡೆದ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಸಮಾವೇಶ

ಶಿವಮೊಗ್ಗ:ಕಾಂಗ್ರೆಸ್ ಸೋಲುತ್ತಿರುವುದು ಇವಿಎಂನಿಂದ ಅಲ್ಲ. ಅವರು ಸೋಲುತ್ತಿರುವುದು ಜನರ ಸಂಕಲ್ಪದಿಂದ ಎಂದು ಬಿಜೆಪಿಯ ರಾಷ್ಟ್ರೀಯ ಯುವ ಮೂರ್ಚಾ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು. ಶಿವಮೊಗ್ಗದ ಫ್ರಿಢಂ ಪಾರ್ಕ್ ನಲ್ಲಿ ನಡೆದ ಬಿಜೆಪಿಯ ಜಿಲ್ಲಾ ಯುವ ಮೋರ್ಚಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಕಾಂಗ್ರೆಸ್​​​ನವರು ಈಗ ಗುಜರಾತ್ ಚುನಾವಣೆಗೆ ಬಳಸಿದ ಇವಿಎಂ ಅನ್ನು ನಮ್ಮ ರಾಜ್ಯಕ್ಕೆ ತರಬೇಡಿ ಎಂದು ಹೇಳುತ್ತಿದ್ದಾರೆ. ಅವರಿಗೆ ಇವಿಎಂ ಮೇಲೆ ಭಯ ಪ್ರಾರಂಭವಾಗಿದೆ. ಆದರೆ ಕಾಂಗ್ರೆಸ್ ನವರು ಸೋಲುತ್ತಿರುವುದು ಇವಿಎಂನಿಂದ ಅಲ್ಲ, ಜನರನ್ನು ನಿಮ್ಮನ್ನು ಸೋಲಿಸಲು ತೆಗೆದುಕೊಂಡ ಸಂಕಲ್ಪದಿಂದ ಎಂದರು.

ಶಿವಮೊಗ್ಗಕ್ಕೆ ಪ್ರತಿ ಬಾರಿಯೂ ಬಂದಾಗ ಖುಷಿ ಆಗುತ್ತದೆ. ಜಿಲ್ಲೆಯ ಯುವಮೋರ್ಚಾ ಚೆನ್ನಾಗಿ ಕೆಲಸ ಮಾಡುತ್ತಿದೆ. ಚುನಾವಣೆ ಪ್ರಾರಂಭವಾದಾಗ ಕಾಂಗ್ರೆಸ್ ಜೆಡಿಎಸ್ ಹುಟ್ಟಿಕೊಳ್ಳುತ್ತವೆ. ಆಗ ಮಾತ್ರ ಇವು ಆ್ಯಕ್ಟಿವ್ ಆಗುತ್ತವೆ. ಆದರೆ ಲಾಕ್ ಡೌನ್ ನಲ್ಲೂ ಸಹ ನಮ್ಮ ಯುವ ಮೋರ್ಚಾ ಕಾರ್ಯಕರ್ತರು ಬೀದಿಯಲ್ಲಿದ್ದರು. ಪಂಚ ರತ್ನಯಾತ್ರೆ ಅಂತ ಬರುವವರಲ್ಲ ನಾವು ವರ್ಷವಿಡಿ ಕೆಲಸ ಮಾಡುವ ಪಾರ್ಟಿ ಎಂದು ತಿಳಿಸಿದರು.

ಯಡಿಯೂರಪ್ಪ ಸರ್ಕಾರ ಬೆಂಗಳೂರು ಹೊರತುಪಡಿಸಿ ಜಿಲ್ಲೆಗಳ ಅಭಿವೃದ್ದಿ ಮಾಡಿಸಿತು. ನಾಳೆ ಪಿಎಂ ಬರುತ್ತಾರೆ. ಪ್ರತಿ‌ 200 ಕಿ ಮೀ ದೂರದಲ್ಲಿ ವಿಮಾನ‌ ನಿಲ್ದಾಣ ಇರುವ ಏಕೈಕ ರಾಜ್ಯ‌ ಅಂದ್ರೆ ನಮ್ಮ ಕರ್ನಾಟಕ ಎಂದರು. ಎಲ್ಲಿ‌ ನೋಡಿದ್ರು ಹೈವೇ ಕೆಲಸ ನಡೆಯುತ್ತಿದೆ. ಬೆಂಗಳೂರು ಮೈಸೂರು ಹೈವೆಯನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ನವರು ನಮ್ಮ‌ ಕನಸು ಎನ್ನುತ್ತಿದ್ದಾರೆ. ಆದರೆ‌ ನಮ್ಮ ಡಬಲ್ ಎಂಜಿನ್ ಸರ್ಕಾರ ಕನಸನ್ನು‌ ನನಸು ಮಾಡಿದ್ದು ಎಂದು ಕಾಂಗ್ರೆಸ್, ಜೆಡಿಎಸ್​​ಗೆ ಟಾಂಗ್ ನೀಡಿದರು. ಶಂಕುಸ್ಥಾಪನೆ,‌ ಲೋಕಾರ್ಪಣೆ ಮಾಡುವುದು ನಮ್ಮ‌ಸರ್ಕಾರವೇ ಎಂದರು.

ಹೇಳಿದಂತೆ ನಡೆಯುವ ಸರ್ಕಾರ ಅಂದ್ರೆ ಅದು ಬಿಜೆಪಿ ಸರ್ಕಾರ. ರಸ್ತೆ, ಹೈವೆ, ರೈಲ್ವೆ ಮೂಲಕ ಭಾರತ ಜೋಡೊ‌ ಮಾಡಿದ್ದು ಮೋದಿ ಅವರು. ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಭಾರತ ಜೋಡೋ ನಡೆಸುವುದಲ್ಲ ಎಂದು ರಾಹುಲ್ ಗಾಂಧಿ ಭಾರತ ಜೋಡೋ ಯಾತ್ರೆಯನ್ನು ವ್ಯಂಗ್ಯವಾಗಿ ಟೀಕಿಸಿದರು.

224 ಕ್ಷೇತ್ರಗಳಲ್ಲೂ ಮೋರ್ಚಾ ಸಭೆ: ಇದಕ್ಕೂ ಮುನ್ನಾ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಮಾತನಾಡಿ, ಚುನಾವಣೆ ಇನ್ನೇರಡು ತಿಂಗಳು ಇದೆ. ರಾಜ್ಯದ 224 ಕ್ಷೇತ್ರಗಳಲ್ಲಿ‌ ವಿವಿಧ‌ ಮೋರ್ಚಾ ಸಮಾವೇಶ ನಡೆಸಲಾಗುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾರ್ಯಕ್ರಮ ತಲುಪಿಸಲು ಯುವಮೋರ್ಚಾ ಸಮಾವೇಶ ಆಯೋಜಿಸಲಾಗುತ್ತಿದೆ. ಯುವಮೋರ್ಚಾ ಕಾರ್ಯಕರ್ತರ ಕೆಲಸ ಅತಿ ಮುಖ್ಯವಾಗಿದೆ. ಮುಂದಿನ ಚುನಾವಣೆಯಲ್ಲಿ ಭದ್ರಾವತಿಯಲ್ಲೂ ಸಹ ಗೆದ್ದು ಬರಬೇಕು. ಈ ನಿಟ್ಟಿನಲ್ಲಿ ಯುವಮೋರ್ಚಾ ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಅಭಿಮತ ವ್ಯಕ್ತಪಡಿಸಿದರು.

370 ಕಾಂಗ್ರೆಸ್ ಪಾಪದ‌ ಕೂಸನ್ನು ಪ್ರಧಾನಿ‌ ಮೋದಿ ಅವರು ಕಿತ್ತು ಹಾಕಿದರು. ಜಮ್ಮು ಕಾಶ್ಮೀರದಲ್ಲಿ ಶಾಂತಿ‌ ನೆಲೆಸುವ ಕೆಲಸವನ್ನು ಮೋದಿ ಮಾಡಿದ್ದಾರೆ. ರಾಹುಲ್ ಗಾಂಧಿ ಅವರು ಕಾಶ್ಮೀರದ ಲಾಲ್ ಚೌಕ್ ನಲ್ಲಿ ಸಂಭ್ರಮಾಚರಣೆ ಮಾಡಲು ಬಿಜೆಪಿ ಮೋದಿ ಕಾರಣ ಎಂಬುದನ್ನು ಕಾಂಗ್ರೆಸ್ ಮರೆಯಬಾರದು ಎಂದರು. ರಾಜ್ಯ ಯುವಮೋರ್ಚಾ ಅಧ್ಯಕ್ಷ ಡಾ ಚೇತನ, ಜಿಲ್ಲಾಧ್ಯಕ್ಷ ಹರಿಕೃಷ್ಣ ಸೇರಿದಂತೆ ರಾಜ್ಯ ಹಾಗೂ ಜಿಲ್ಲಾ ಮುಖಂಡರು ಹಾಜರಿದ್ದರು.
ಇದನ್ನೂಓದಿ:ನಾಳೆ ಮಂಡ್ಯಕ್ಕೆ ಪ್ರಧಾನಿ ಮೋದಿ ಭೇಟಿ, ಕೇಸರಿ ಮಯವಾದ ಸಕ್ಕರೆ ನಾಡು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.