ಶಿವಮೊಗ್ಗ: ಸರ್ವ ಧರ್ಮಗಳು ಸಮನ್ವಯದಿಂದ ನಡೆಯುವ ಮೂಲಕ ಹಬ್ಬ, ಹರಿದಿನಗಳನ್ನು ಆಚರಣೆ ಮಾಡುವುದರಿಂದ ಕೋಮು ಸೌಹಾರ್ದ ವೃದ್ಧಿಸಲು ಸಾಧ್ಯವಿದೆ ಎಂದು ಬಸವ ಕೇಂದ್ರದ ಮರುಳಸಿದ್ದ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಅಂಬೇಡ್ಕರ್ ಭವನದಲ್ಲಿ ಗಾಂಧಿ ಬಸಪ್ಪ ಮತ್ತು ಹಳದಮ್ಮ ಪ್ರತಿಷ್ಠಾನ, ಸದ್ಬಾವನಾ ವೇದಿಕೆ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಸಹಯೋಗದಲ್ಲಿ ಏರ್ಪಡಿಸಿದ್ದ ಭಾರತೀಯರ ನಡೆ ಸದ್ಬಾವನದೆಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,ಸರ್ವ ಧರ್ಮಗಳು ಸಮನ್ವಯದಿಂದ ನಡೆಯುವ ಮೂಲಕ ಹಬ್ಬ,ಹರಿದಿನಗಳನ್ನು ಆಚರಣೆ ಮಾಡುವುದರಿಂದ ಕೋಮು ಸೌಹಾರ್ದವನ್ನು ವೃದ್ಧಿಸಲು ಸಾಧ್ಯವಿದೆ ಎಂದ ಅವರು, ನಮ್ಮೆಲ್ಲರ ಗುರಿ ಇವನಾರವ,ಇವನಾರವ ಎಂದಾಗದೇ ಇವ ನಮ್ಮಮ, ಇವ ನಮ್ಮಮ ಎಂದಾಗುವಂತಾಗಲೆಂದು ಕರೆ ನೀಡಿದರು.
ನಂತರದಲ್ಲಿ ಮಾತನಾಡಿದ ಸದ್ಬಾವನಾ ವೇದಿಕೆ ಅಧ್ಯಕ್ಷ.ಎಸ್.ಬಿ.ಅಶೋಕ್ ಕುಮಾರ್, ಪ್ರತಿ ಆಚರಣೆಗೂ ಅದರದೇ ಆದ ಮಹತ್ವವಿದೆ. ಅದನ್ನು ತಿಳಿದುಕೊಂಡು ಆಚರಿಸಿದಾಗ ಇಂತಹ ಕಾರ್ಯಕ್ರಮಗಳಿಗೆ ಮಹತ್ವ ಬರುತ್ತದೆ. ಒಳ್ಳೆಯ ಭಾವನೆ ಒಂದು ದಿನಕ್ಕೆ ಸೀಮಿತವಾಗಬಾರದು. ಅದು ನಿತ್ಯ ಜೀವನದಲ್ಲಿ ಇದ್ದಾಗಲೇ ಜೀವನ ಸಾರ್ಥಕ. ಇನ್ನೋಬ್ಬರನ್ನು ಕೀಳಾಗಿ ಕಾಣದೇ, ಎಲ್ಲರನ್ನು ಪರಸ್ಪರ ಪ್ರೀತಿಯಿಂದ ಕಾಣುವ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದರು.