ಶಿವಮೊಗ್ಗ: ಫೆಬ್ರವರಿ 20ರಂದು ಶಿವಮೊಗ್ಗದಲ್ಲಿ ಕೊಲೆಯಾದ ಹರ್ಷನ ಹೆಸರಿನಲ್ಲಿ ಚಾರಿಟೇಬಲ್ ಟ್ರಸ್ಟ್ ಪ್ರಾರಂಭ ಮಾಡಲಾಗಿದೆ. ಟ್ರಸ್ಟ್ ಅನ್ನು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ನೊಂದವರಿಗೆ ನೆರವಾಗಲು ಪ್ರಾರಂಭ ಮಾಡಲಾಗಿದೆ. ಹರ್ಷನ ಕುಟುಂಬದ ಸದಸ್ಯರು ಮತ್ತು ಸಚಿವ ಈಶ್ವರಪ್ಪ ಅವರ ಪುತ್ರ ಈ ಟ್ರಸ್ಟ್ನಲ್ಲಿ ಪ್ರಮುಖರಾಗಿದ್ದಾರೆ.
ಟ್ರಸ್ಟಿಗಳು ಇಂತಿದ್ದಾರೆ : ಟ್ರಸ್ಟ್ನ ಅಧ್ಯಕ್ಷರಾಗಿ ಹರ್ಷನ ಸಹೋದರಿ ಅಶ್ವಿನಿ, ಸಹೋದರಿ ರಜನಿ, ವ್ಯವಸ್ಥಾಪಕ ಟ್ರಸ್ಟಿಯಾಗಿ ಸಚಿವ ಈಶ್ವರಪ್ಪನವರ ಪುತ್ರ ಕೆ.ಈ.ಕಾಂತೇಶ್, ಕಾರ್ಯದರ್ಶಿಯಾಗಿ ಸಚಿನ್ ರಾಯ್ಕರ್, ಜಂಟಿ ಕಾರ್ಯದರ್ಶಿಯಾಗಿ ಪುರುಷೋತ್ತಮ್, ಖಂಚಾಚಿಯಾಗಿ ಕೆ.ಕೆ.ಫಣೀಶ್ ಇದ್ದಾರೆ.
ಟ್ರಸ್ಟ್ ಉದ್ದೇಶ :
1) ಆರ್ಥಿಕವಾಗಿ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಸಹಕಾರ
2) ತೀವ್ರ ಅನಾರೋಗ್ಯದಿಂದಾಗಿ ಸಂಕಷ್ಟದಲ್ಲಿದ್ದು ಚಿಕಿತ್ಸಾ ವೆಚ್ಚ ಭರಿಸಲಾಗದ ಆರ್ಥಿಕ ಅಶಕ್ತರಿಗೆ ನೆರವಾಗುವುದು.
3) ಸನಾತನ ಧರ್ಮದ ಶ್ರದ್ದೆ- ಭಕ್ತಿಯ ಅಸ್ಮಿತೆಯಾಗಿ ಸರ್ವದೇವಾಮಯವಾಗಿರುವ ಗೋವಿನ ಆರೈಕೆ ಹಾಗೂ ಗೋ ಶಾಲೆಗಳಿಗೆ ನೆರವಾಗುವುದು.
ಟ್ರಸ್ಟ್ ಪ್ರಾರಂಭವಾಗುವುದಕ್ಕೂ ಮುನ್ನವೇ ಹರ್ಷ ಕುಟುಂಬ ಸಹಾಯ ಮಾಡಿದೆ. ಶಿವಮೊಗ್ಗದ ಪಿಎಫ್ಐ ಗಲಾಟೆಯಲ್ಲಿ ಸಾವನ್ನಪ್ಪಿದ ವಿಶ್ವನಾಥ್ ಶೆಟ್ಟಿ ಅವರ ಮಗನ ವಿದ್ಯಾಭ್ಯಾಸಕ್ಕೆ ನೆರವು ನೀಡಿತ್ತು. ಅದೇ ರೀತಿ ಕೇರಳದ ಕಾಸರಗೋಡಿನ ಆರ್ಎಸ್ಎಸ್ ಕಾರ್ಯಕರ್ತ ಜ್ಯೋತಿಶ್ ಕೊಲೆಯಾಗಿದ್ದ. ಈತನ ಕುಟುಂಬಕ್ಕೆ 2 ಲಕ್ಷ ರೂ. ಹಾಗೂ ಜ್ಯೋತಿಶ್ ಅವರ ಎರಡನೇ ಮಗನಿಗೆ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದೆ.
ಇದನ್ನೂ ಓದಿ:ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯಲ್ಲಿ ಅವ್ಯವಹಾರ ; ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ದಾಖಲಾಯ್ತು ದೂರು..