ಶಿವಮೊಗ್ಗ: ಪುಲ್ವಾಮಾ ಘಟನೆಗೆ ಭಾರತ ಪ್ರತೀಕಾರ ತೀರಿಸುತ್ತದೆ ಎಂದು ವಿಶ್ವಾಸ ಇಟ್ಟಿದ್ದ ದೇಶದ ಜನತೆಯ ಕನಸು ನನಸಾಗಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಮೊದಲ ಬಾರಿಗೆ ಉಗ್ರರ ನೆಲೆ ಮೇಲೆ ವಾಯುಪಡೆ ದಾಳಿ ಮಾಡಿರುವುದು ಹೆಮ್ಮೆ ಸಂಗತಿ. ಪಾಕಿಸ್ತಾನದ ಒಳಗೆ ನುಗ್ಗಿ ಪಾಕಿಸ್ತಾನದ 3 ಜಾಗಗಳಲ್ಲಿ ದಾಳಿ ಮಾಡಿರುವುದು ವಿಶೇಷ ಎಂದರು.ನಮಗೆ ಈ ದೇಶದ ಪ್ರಧಾನಿ ಬಗ್ಗೆ, ನಮ್ಮ ಸೇನೆಯ ಮೇಲೆ, ಜೊತೆಗೆ ಇಷ್ಟು ದಿನ ಸಂಯಮದಿಂದ ಕಾದ ದೇಶ ಭಕ್ತ ಜನರ ಮೇಲೆಯೂ ಸಹ ಹೆಮ್ಮೆ ಮತ್ತು ವಿಶ್ವಾಸ ಇದೆ ಎಂದರು.
ನಾನು ಈ ದಾಳಿಯನ್ನು ರಾಜಕೀಯವಾಗಿ ಚಿತ್ರೀಸಲು ಇಷ್ಟಪಡುವುದಿಲ್ಲ. ಈ ಹೋರಾಟ ಪಾಕಿಸ್ತಾನದ ವಿರುದ್ಧ ಅಲ್ಲ, ಇದು ಭಯೋತ್ಪಾದನೆಯ ವಿರುದ್ಧದ ಹೋರಾಟ ಎಂದು ಸೂಲಿಬೆಲೆ ಇದೇ ಸಂದರ್ಭದಲ್ಲಿ ಹೇಳಿದರು.