ETV Bharat / state

ಶಿವಮೊಗ್ಗ: ಹರ್ಷ ಹತ್ಯೆ ಆರೋಪಿಗಳ ವಿರುದ್ಧ ಯುಎಪಿಎ ಅಡಿ ಪ್ರಕರಣ - case filed under UAPA to harsha murder accused

ಯಾವುದೇ ಒಂದು ವರ್ಗ, ಬಡಾವಣೆ, ಊರು ಅಥವಾ ಒಂದು ನಗರವನ್ನು ಬೆಚ್ಚಿಬೀಳಿಸುವ ಕೃತ್ಯ ನಡೆಸಿದವರ ಮೇಲೆ ಯುಎಪಿಎ ಕಾಯ್ದೆ ಅಡಿ ಪ್ರಕರಣ ದಾಖಲಿಸಬಹುದು. ಹರ್ಷ ಕೊಲೆ ಪ್ರಕರಣದ ಆರೋಪಿಗಳ ವಿರುದ್ಧವೂ ಇದೇ ಕಾಯ್ದೆಯಡಿ ಕೇಸ್​ ದಾಖಲಾಗಿದೆ.

case-filed-under-uapa-to-harsha-murder-accused
ಹರ್ಷ ಹತ್ಯೆ ಆರೋಪಿಗಳ ವಿರುದ್ಧ ಯುಎಪಿಎ ಅಡಿ ಪ್ರಕರಣ
author img

By

Published : Mar 13, 2022, 5:25 PM IST

ಶಿವಮೊಗ್ಗ: ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧನವಾಗಿರುವ 10 ಮಂದಿ ಆರೋಪಿಗಳ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ನಿರ್ಬಂಧ ಕಾಯ್ದೆ(ಯುಎಪಿಎ) ಅಡಿ ಪ್ರಕರಣ ದಾಖಲಾಗಿದೆ. ಈ ಮೂಲಕ ನಕ್ಸಲ್ ಚಟುವಟಿಕೆಗಳು ಹೊರತುಪಡಿಸಿ ಶಿವಮೊಗ್ಗ ಜಿಲ್ಲೆಯಲ್ಲಿ ಯುಎಪಿಎ ಕಾಯ್ದೆಯಡಿ ದಾಖಲಾದ ಮೊದಲ ಪ್ರಕರಣ ಇದಾಗಿದೆ. ಯುಎಪಿಎ ಅಡಿ ಪ್ರಕರಣ ದಾಖಲಾಗಿರುವುದರಿಂದ ಹರ್ಷ ಹತ್ಯೆ ಆರೋಪಿಗಳಿಗೆ ಜೈಲೇ ಗತಿ ಎನ್ನುವಂತಾಗಿದೆ.

ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿದರು

ಹರ್ಷ ಹತ್ಯೆ ಪ್ರಕರಣದಲ್ಲಿ 10 ಮಂದಿ ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು, ಇವರ ವಿರುದ್ಧ ಐಪಿಸಿ 302ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಇದಾದ ನಂತರ ಹೆಚ್ಚಿನ ತನಿಖೆಗಾಗಿ 11 ದಿನ ಆರೋಪಿಗಳನ್ನು ವಶಕ್ಕೆ ಪಡೆದಿದ್ದ ಸಿಬ್ಬಂದಿ, ಆರೋಪಿಗಳ ವಿರುದ್ಧ ಯುಎಪಿಎ ಕಾಯ್ದೆಯನ್ನೂ ಅಳವಡಿಸಿಕೊಂಡಿದ್ದಾರೆ.

ಯಾವುದೇ ಒಂದು ವರ್ಗ, ಬಡಾವಣೆ, ಊರು ಅಥವಾ ಒಂದು ನಗರ ಹೀಗೆ ಒಂದು ಸಮಾಜ ಭಯಭೀತವಾಗುವಂಥಹ ಕೃತ್ಯ ನಡೆಸಿದವರ ಮೇಲೆ ಯುಎಪಿಎ ಕಾಯ್ದೆ ಅಡಿ ಪ್ರಕರಣ ದಾಖಲಿಸಬಹುದಾಗಿದೆ. ಹೀಗಾಗಿ, ಹರ್ಷ ಹತ್ಯೆ ಆರೋಪಿಗಳ ವಿರುದ್ಧವೂ ಈ ಪ್ರಕರಣ ದಾಖಲಿಸಲಾಗಿತ್ತು.

11 ದಿನಗಳ ಕಾಲ ವಶ.. ಸಿಆರ್​ಪಿಸಿ ಅಡಿ ಯಾವುದೇ ಆರೋಪಿಯನ್ನು 15 ದಿನಗಳ ಕಾಲ ಪೊಲೀಸರು ವಶಕ್ಕೆ ಪಡೆಯಲು ಸಾಧ್ಯವಿದೆ. ಆದರೆ, ಯುಎಪಿಎ ಅಡಿ ಪ್ರಕರಣ ದಾಖಲಾದರೆ ಬರೋಬ್ಬರಿ 30 ದಿನಗಳವರೆಗೆ ಆರೋಪಿಗಳನ್ನು ತನಿಖೆಗಾಗಿ ಪೊಲೀಸರು ವಶಕ್ಕೆ ಪಡೆಯಲು ಅವಕಾಶವಿದೆ. ಹರ್ಷ ಹತ್ಯೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಈಗಾಗಲೇ ತನಿಖೆಗಾಗಿ 11 ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ.

ಸಿಆರ್​ಪಿಸಿ ಅಡಿಯೇ ಪೊಲೀಸರಿಗೆ ಇನ್ನೂ ನಾಲ್ಕು ದಿನಗಳ ಕಾಲ ಆರೋಪಿಗಳನ್ನು ವಶಕ್ಕೆ ಪಡೆಯಲು ಅವಕಾಶವಿದೆ. ಇದರ ಜೊತೆಗೆ ಯುಎಪಿಎ ಅಡಿಯೂ ಪ್ರಕರಣ ದಾಖಲಾಗಿರುವುದರಿಂದ ಇನ್ನೂ ಹೆಚ್ಚುವರಿ 15 ದಿನಗಳ ಕಾಲ ಆರೋಪಿಗಳನ್ನು ತನಿಖೆಗಾಗಿ ವಶಕ್ಕೆ ಪಡೆಯಬಹುದಾಗಿದೆ.

ಜಾಮೀನು ಸಿಗುವುದು ಕಷ್ಟ.. ಯುಎಪಿಎ ಅಡಿ ಯಾವುದೇ ವ್ಯಕ್ತಿ ಅಥವಾ ತಂಡಗಳ ಮೇಲೆ ಪ್ರಕರಣ ದಾಖಲಾದರೆ ಅಂತವರಿಗೆ ಜಾಮೀನು ಸಿಗುವುದು ಕಷ್ಟ. ಹರ್ಷ ಹತ್ಯೆ ಪ್ರಕರಣದಲ್ಲಿ ಬಂಧನವಾದವರ ವಿರುದ್ಧವೂ ಯುಎಪಿಎ ಅಡಿ ಪ್ರಕರಣ ದಾಖಲಾಗಿರುವುದರಿಂದ ಈ ಆರೋಪಿಗಳಿಗೆ ಜಮೀನು ಸಿಗುವುದು ಕಷ್ಟ. ಹೀಗಾಗಿ, ಆರೋಪಿಗಳಿಗೆ ಜೈಲೇ ಗತಿ ಎನ್ನಲಾಗುತ್ತಿದೆ. ಈ ಆರೋಪಿಗಳು ನ್ಯಾಯಾಲಯಕ್ಕೆ ಜಾಮೀನಿಗಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಆದರೆ, ಜಾಮೀನು ಮಂಜೂರಾಗುವುದು ಕಷ್ಟ ಎನ್ನಲಾಗುತ್ತಿದೆ.

ಯುಎಪಿಎ ಅಡಿ ಪ್ರಕರಣ.. ಈ ಆರೋಪಿಗಳ ತನಿಖೆಯನ್ನು ಡಿವೈಎಸ್​ಪಿ ಹಾಗೂ ಮೇಲ್ಮಟ್ಟದ ಅಧಿಕಾರಿಗಳು ನಡೆಸಬೇಕಿದೆ. ಈ ಹಿನ್ನೆಲೆಯಲ್ಲಿ ಹರ್ಷ ಹತ್ಯೆ ಪ್ರಕರಣ ಶಿವಮೊಗ್ಗ ಸಿಟಿ ಡಿವೈಎಸ್​ಪಿ ಪ್ರಶಾಂತ್ ಮುನ್ನೋಳಿ ನೇತೃತ್ವದಲ್ಲಿ ತನಿಖೆ ನಡೆಯಲಾರಂಭಿಸಿದೆ. ಈ ಪ್ರಕರಣದಲ್ಲಿ ಇನ್ಯಾವುದೋ ಸಂಘಟನೆಗಳು ಹಾಗೂ ವ್ಯಕ್ತಿಗಳು ಭಾಗಿಯಾಗಿದ್ದಲ್ಲಿ ಹೆಚ್ಚಿನ ತನಿಖೆಯನ್ನು ಎನ್​ಐಎ ಅಥವಾ ಬೇರೆ ಇನ್ಯಾವುದೇ ತನಿಖಾ ಸಂಸ್ಥೆಗಳಿಗೆ ವಹಿಸಲು ಅವಕಾಶವಿದೆ.

ಓದಿ: ಭೀಮಾತೀರದ ರೌಡಿಗಳಿಗೆ ಖಡಕ್ ವಾರ್ನಿಂಗ್ ನೀಡಿದ ಪೊಲೀಸ್ ಅಧಿಕಾರಿಗಳು

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.